Thursday, August 18, 2022
Powertv Logo
HomePower Specialಪವರ್ ಟಿವಿ ಬಿಗ್ ಇಂಪ್ಯಾಕ್ಟ್ : BWSSB ಜಾಬ್ ವಂಚನೆ ಕೇಸ್​​ನಲ್ಲಿ ಇಬ್ಬರ ಬಂಧನ

ಪವರ್ ಟಿವಿ ಬಿಗ್ ಇಂಪ್ಯಾಕ್ಟ್ : BWSSB ಜಾಬ್ ವಂಚನೆ ಕೇಸ್​​ನಲ್ಲಿ ಇಬ್ಬರ ಬಂಧನ

ಬೆಂಗಳೂರು : ಇದು ಪವರ್ ಟಿವಿಯ ಬಿಗ್ ಬಿಗ್ ಇಂಪ್ಯಾಕ್ಟ್ ಸ್ಟೋರಿ.. Bwssb ಇಲಾಖೆಯಲ್ಲಿ ಜಾಬ್ ಕೊಡಿಸ್ತೀನಿ ಎಂದು ವಂಚನೆ ಮಾಡಿದ್ದವರ ವಿರುದ್ಧ ಪವರ್ ಟಿವಿ, ಎರಡು ದಿನದ ಹಿಂದೆ ಸ್ಟೋರಿ ಮಾಡಿತ್ತು.. ಆ ಸ್ಟೋರಿನ ಅಷ್ಟಕ್ಕೆ ಬಿಟ್ಟಿಲ್ಲ ನಿಮ್ಮ ಪವರ್ ಟಿವಿ.. ಫಾಲೋಪ್ ಮಾಡಿದೆ, ತಪ್ಪಿತಸ್ಥರನ್ನ ಅರೆಸ್ಟ್ ಮಾಡಿಸಿದೆ..‌ ಎಫ್ ಐ ಆರ್ ಆಗಿ 10 ಗಂಟೆಯಲ್ಲೇ ಆರೋಪಿಗಳನ್ನು ಹೆಡೆಮುರಿಕಟ್ಟಿದ್ದಾರೆ.

BWSSB ಇಲಾಖೆಯಲ್ಲಿ ಜಾಬ್ ಕೊಡಿಸ್ತೀನಿ ಎಂದು ವಂಚನೆ

ಇಬ್ಬರು ವಂಚಕರನ್ನ ಅರೆಸ್ಟ್ ಮಾಡಿದ ಪೊಲೀಸರು

FIR ಆಗಿ ಹತ್ತೇ ಗಂಟೆಯಲ್ಲಿ ಆರೋಪಿಗಳು ಅಂದರ್ 

38 ಲಕ್ಷ ಹಣ ತೆಗೆದುಕೊಂಡಿದ್ದು ನಿಜ ಎಂದ ಆರೋಪಿ ಪ್ರಕಾಶ್

ನಿಮ್ಮ ನೆಚ್ಚಿನ ಪವರ್ ಟಿವಿ ಎರಡು ದಿನದ ಹಿಂದೆ BWSSBಯಲ್ಲಿ ಜಾಬ್ ಕೊಡಿಸ್ತೀನಿ ಎಂದು ಕೋಟಿ ಕೋಟಿ ಹಣ ಪೀಕಿದ್ದ ನಾರಾಯಣಸ್ವಾಮಿ ಹಾಗೂ ಪ್ರಕಾಶ್ ವಿರುದ್ಧ ಸ್ಟೋರಿ ಮಾಡಿತ್ತು.. ಆ ಸ್ಟೋರಿ ಅಷ್ಟಕ್ಕೆ ಬಿಟ್ಟಿಲ್ಲ ನಾವು ಎರಡು ದಿನದಿಂದ ಫಾಲೋಪ್ ಮಾಡಿದ್ದೀವಿ. .ನಾರಾಯಣಸ್ವಾಮಿ ಹಾಗೂ ಪ್ರಕಾಶ್ ವಿರುದ್ಧ ಚಿಕ್ಕಜಾಲ ಪೊಲೀಸರಿಗೆ ನೊಂದ ವ್ಯಕ್ತಿ ಮುನಿರಾಜು ದೂರು ಕೊಟ್ಟಿದ್ರು.. ಆ ದೂರಿನ ಆಧಾರದ ಮೇಲೆ ನಾರಾಯಣಸ್ವಾಮಿ ಹಾಗೂ ಪ್ರಕಾಶ್ ಇಬ್ಬರನ್ನು ಚಿಕ್ಕಜಾಲ ಹಾಗೂ ದೇವನಹಳ್ಳಿ ಪೊಲೀಸರು ಅರೆಸ್ಟ್ ಮಾಡಿದ್ರು.

ಚಿಕ್ಕಜಾಲ ಹಾಗೂ ದೇವನಹಳ್ಳಿ ಪೊಲೀಸರು ಒಂದು ನಿಮಿಷ ಕೂಡ ಟೈಂ ವೆಸ್ಟ್ ಮಾಡಲಿಲ್ಲ.. ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಕೊಟ್ಟ ಸೂಚನೆ ಮೇರೆಗೆ ಆರೋಪಿಗಳ ನಂಬರ್ ಲೊಕೇಶನ್ ತೆಗೆದುಕೊಂಡ ದೇವನಹಳ್ಳಿ ಪೊಲೀಸರು FIR ಆಗಿ ಹತ್ತೇ ಗಂಟೆಯಲ್ಲೇ ಪ್ರಕಾಶ್ ಹಾಗೂ ನಾರಾಯಣಸ್ವಾಮಿ ಇಬ್ಬರನ್ನು ಅರೆಸ್ಟ್ ಮಾಡಿದ್ರು.. ಪ್ರಕಾಶ್ ಹಾಗೂ ನಾರಾಯಣಸ್ವಾಮಿ ಇಬ್ಬರನ್ನು ವಿಚಾರಣೆ ಮಾಡಿದ್ರು.. ವಿಚಾರಣೆ ವೇಳೆ ಪ್ರಕಾಶ್ ದೂರುದಾರ ಮುನಿರಾಜುನಿಂದ 38 ಲಕ್ಷ ಹಣ ಪಡೆದಿರುವುದಾಗಿ ಒಪ್ಪಿಕೊಂಡಿದ್ದಾನೆ.

ಕೇವಲ ಮುನಿರಾಜು ಒಬ್ಬರಿಗೆ ಈ ಪ್ರಕಾಶ ವಂಚನೆ ಮಾಡಿಲ್ಲ. ಹಲವು ಜನರಿಗೆ ವಂಚನೆ ಮಾಡಿದ್ದಾನೆ. Bwssbಯಲ್ಲಿ ಕೆಲಸ ಕೊಡಿಸ್ತೀನಿ ಎಂದು ಹತ್ತಾರು ಮಂದಿಯ ಬಳಿ ಲಕ್ಷ‌ ಲಕ್ಷ ಹಣ ಪೀಕಿದ್ದಾನೆ. ನೊಂದವರು ಪವರ್ ಟಿವಿ ಬಳಿ ಬಂದು ಅಳಲು ತೋಡಿಕೊಂಡಿದ್ರು.

ಸದ್ಯ ಚಿಕ್ಕಜಾಲ ಪೊಲೀಸರು ಪ್ರಕಾಶ್ ಹಾಗೂ ನಾರಾಯಣಸ್ವಾಮಿ ಅರೆಸ್ಟ್ ‌ಮಾಡಿ ವಿಚಾರಣೆ ಮುಂದುವರೆಸಿದ್ದಾರೆ.. ಮತ್ತೊಬ್ಬ ಆರೋಪಿ ಪಾಟೀಲ್​​ಗಾಗಿ ತಲಾಷ್ ಕೂಡ ನಡೀತಾ ಇದೆ.. ಇನ್ನು ಈ ಜಾಲದಲ್ಲಿ ಇನ್ನೂ ಯಾರೆಲ್ಲಾ ಇದ್ದಾರೆ ಅನ್ನೋದು ತನಿಖೆಯಿಂದ ಬಯಲಾಗಬೇಕಿದೆ.

ಅಶ್ವಥ್ ಎಸ್‌.ಎನ್.ಕ್ರೈಂ ಬ್ಯೂರೋ ಪವರ್ ಟಿವಿ

- Advertisment -

Most Popular

Recent Comments