Home ರಾಜ್ಯ 'ಪವರ್' ಇಂಪ್ಯಾಕ್ಟ್ : ಕೊನೆಗೂ ಬಡಮಕ್ಕಳಿಗೆ ಸಿಕ್ತು ಆನ್​ಲೈನ್ ಶಿಕ್ಷಣ ಭಾಗ್ಯ..!

‘ಪವರ್’ ಇಂಪ್ಯಾಕ್ಟ್ : ಕೊನೆಗೂ ಬಡಮಕ್ಕಳಿಗೆ ಸಿಕ್ತು ಆನ್​ಲೈನ್ ಶಿಕ್ಷಣ ಭಾಗ್ಯ..!

ಮಂಗಳೂರು : ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ‘ಸೇತುಬಂಧ’ ತರಗತಿಯಿಂದ ಹೊರಗೆ ಉಳಿದಿದ್ದ ಬಡ ಮಕ್ಕಳಿಬ್ಬರಿಗೆ ಇದೀಗ ತರಗತಿ ಆಲಿಸುವಂತಾಗಿದೆ. ಟಿವಿ, ಸ್ಮಾರ್ಟ್ ಫೋನ್ ಇಲ್ಲದೇ ಪರದಾಡುತ್ತಿದ್ದ, ಇ-ಎಜ್ಯುಕೇಶನ್ ನಿಂದ ಹೊರಗೆ ಉಳಿದಿದ್ದ ಕಡಬ ತಾಲೂಕಿನ ದೊಡ್ಡಕೊಪ್ಪ ವಿದ್ಯಾರ್ಥಿ ವರುಣ್ “ನಮಗೂ ಬೇರೆಯವರಂತೆ ಸೇತುಬಂಧ ತರಗತಿ ನೋಡುವಂತಾಗಬೇಕು” ಎಂದು ‘ಪವರ್ ಟಿವಿ’ ಮುಂದೆ ಹೇಳಿಕೊಂಡಿದ್ದರು.‌

ವರದಿ ಪ್ರಸಾರವಾಗುತ್ತಿದ್ದಂತೆ ಹಲವು ದಾನಿಗಳು ಸಹಾಯ ಹಸ್ತ ನೀಡಿದ್ದಾರೆ. ಟಿವಿ, ಸ್ಮಾರ್ಟ್ ಫೋನ್, ರೀಡಿಂಗ್ ಟೇಬಲ್, ಧನ ಸಹಾಯವನ್ನೂ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ದೊಡ್ಡಕೊಪ್ಪ ನಿವಾಸಿ ಮೋನಪ್ಪ ಕುಂಬಾರ ಹಾಗೂ ಸುಶೀಲಾ ದಂಪತಿಯ 10 ನೇ ತರಗತಿಯ ವರುಣ್ ಹಾಗೂ 8 ನೇ ತರಗತಿಯ ಲಾವಣ್ಯ ಇದೀಗ ತಮ್ಮ ಮನೆಯಲ್ಲೇ ಚಂದನ ವಾಹಿನಿಯ ‘ಸೇತುಬಂಧ’ ಪಾಠ ಆಲಿಸುವಂತಹ‌ ಅವಕಾಶ ಲಭಿಸಿದೆ. ನೆಲ್ಯಾಡಿಯ ಸಂತ ಆಲ್ಫೋನ್ಸಾ ಮತ್ತು ಆರ್ಲ ಸಂತ ಮೇರೀಸ್ ಚರ್ಚ್ ನ ‘ಕಿರಿಯ ಕುಸುಮ’ ಮಿಷನ್ ಲೀಗ್ ಮಕ್ಕಳ ತಂಡವು ಸ್ಮಾರ್ಟ್ ಟಿವಿ ಮತ್ತು ಅದಕ್ಕೆ ಬೇಕಾದ ‘ಕನೆಕ್ಟಿವಿಟಿ’ ವ್ಯವಸ್ಥೆಯನ್ನ ಕಲ್ಪಿಸಿದೆ. ರೆವರೆಂಡ್ ಫಾದರ್ ಆದರ್ಶ್ ಜೋಸೆಫ್ ನೇತೃತ್ವದ ಈ ಮಕ್ಕಳ ತಂಡವು ಈ ಬಡ ಮಕ್ಕಳಿಗೆ ನೆರವಾಗುವ ಮೂಲಕ ಮಾದರಿಯಾಗಿದ್ದಾರೆ. ಇನ್ನು ಹಳೆ ವಿದ್ಯಾರ್ಥಿಗಳ ತಂಡವೊಂದು ಬೆಂಗಳೂರಿನಿಂದ ಸ್ಮಾರ್ಟ್ ಫೋನ್ ವೊಂದನ್ನು ಕೊರಿಯರ್ ಮೂಲಕ ವರುಣ್ ಮನೆಗೆ‌ ತಲುಪಿಸಿದೆ. ಇನ್ನೂ ಹಲವರು ಟಿವಿ ನೀಡಲು ಮುಂದೆ ಬಂದಿದ್ದರಾದರೂ, ಅದಾಗಲೇ ಟಿವಿ ಮನೆ ತಲುಪಿದ್ದರಿಂದ ಅದರ ಬದಲಿಗೆ ರೀಡಿಂಗ್ ಟೇಬಲ್ ಹಾಗೂ 5 ಸಾವಿರ ರೂಪಾಯಿಯ ನೆರವನ್ನ ಅಶ್ವತ್ಥ್ ಎಂಬವರು ಒದಗಿಸಿದ್ದಾರೆ. ಇನ್ನೂ ಹಲವು ದಾನಿಗಳು ವಿವಿಧ ರೀತಿಯ ನೆರವು ಒದಗಿಸುವ ಭರವಸೆ ಒದಗಿಸಿದ್ದಾರೆ. ಒಟ್ಟಿನಲ್ಲಿ ಟಿವಿ, ಸ್ಮಾರ್ಟ್ ಫೋನ್ ಇಲ್ಲದ ಕಾರಣಕ್ಕೆ ‘ಸೇತುಬಂಧ’ ಶಿಕ್ಷಣದಿಂದ ದೂರವೇ ಉಳಿಯುತ್ತಿದ್ದ ಇಬ್ಬರು ಬಡ ಮಕ್ಕಳಿಗೆ‌ ‘ಪವರ್ ಟಿವಿ’ ವರದಿ ಕಂಡು ಸಹೃದಯರ ನೆರವು ಒದಗಿ ಬರುತ್ತಿರುವುದು ಶ್ಲಾಘನೀಯ ವಿಚಾರವೇ ಸರಿ.

-ಇರ್ಷಾದ್ ಕಿನ್ನಿಗೋಳಿ, ಮಂಗಳೂರು

LEAVE A REPLY

Please enter your comment!
Please enter your name here

- Advertisment -

Most Popular

‘ನಾನೇ ಸಭಾಪತಿ ಎಂದ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ’

ಹುಬ್ಬಳ್ಳಿ: ಜೆಡಿಎಸ್ ನಿಂದ ನಾನೇ ಸಭಾಪತಿ ಅಭ್ಯರ್ಥಿ. ಬಿಜೆಪಿ ಉಪಸಭಾಪತಿಗೆ ಸ್ಪರ್ದೆ ಮಾಡಿದ್ರೆ ನಾನೇ ಸಭಾಪತಿ ಆಗುವೆ ಎಂದು ವಿಧಾನ ಪರಿಷತ್  ಸದಸ್ಯ ಬಸವರಾಜ ಹೊರಟ್ಟಿ ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,...

ಕೆಎಲ್ ಇ ಸಂಸ್ಥೆಗೆ ನೀಡಿದ ಭೂಮಿ ಮರಳಿ ಪಡೆಯುಲ್ಲ: ಬಸವರಾಜ್ ಹೊರಟ್ಟಿ

ಹುಬ್ಬಳ್ಳಿ: ಮೂರು ಸಾವಿರಮಠದ ಆಸ್ತಿ ವಿವಾದ ಕುರಿತಂತೆ ಉನ್ನತ ಸಮಿತಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದ ದಿಂಗಾಲೇಶ್ವರ ಶ್ರೀಗಳ ವಿರುದ್ದ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಕಿಡಿಕಾರಿದರು. ನಗರದಲ್ಲಿಂದು ಮಾತನಾಡಿದ ಅವರು, ನಾನು ಮಠದ...

ಪಂಜರದ ಗಿಣಿಗೆ ಇಂದು ಬಿಡುಗಡೆ ಭಾಗ್ಯ..!

ಬೆಂಗಳೂರು: ಡ್ರಗ್ಸ್ ಕೇಸ್ ನಲ್ಲಿ ನಟಿ ರಾಗಿಣಿ ಅರೆಸ್ಟ್ ಆಗಿದ್ದರು, ಆದರೆ ಬೆಲ್ ಸಿಕ್ಕೂ ನಾಲ್ಕು ದಿನ ಆದರೂ ಇಂದು ಸಂಜೆ ನಟಿ ರಾಗಿಣಿ ದ್ವಿವೇದಿ ಪರಪ್ಪನ ಅಗ್ರಹಾರ ಜೈಲಿನಿಂದ ಸಂಜೆ ಬಿಡುಗಡೆಯಾಗಲಿದ್ದಾರೆ. ನಟಿ...

ಯಾವ ಸರ್ಕಾರವೂ ರೈತರಿಗೆ ತೊಂದರೆ ಕೊಡುವ ಕೆಲಸ ಮಾಡಲ್ಲ: ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ಕೃಷಿ ಕಾಯ್ದೆ ಪ್ರಯೋಗ ಆಗಲಿ. ಒಂದೆರೆಡು ವರ್ಷ ಪ್ರಯೋಗ ಆಗಲಿ. ಆಗ ರೈತರಿಗೆ ತೊಂದರೆಯಾದರೆ ವಾಪಸ್ ಪಡೆಯೋಕೆ ತಯರಾಗುತ್ತಾರೆ. ಯಾವ ಸರ್ಕಾವೂ ರೈತರಿಗೆ ತೊಂದರೆ ನೀಡುವ ಕೆಲಸ ಮಾಡಲ್ಲ ಎಂದು ಬೃಹತ್ ಕೈಗಾರಿಕೆ...

Recent Comments