Home ರಾಜ್ಯ ಬೆಂಗಳೂರು ಕರ್ಫ್ಯೂ ವೇಳೆ ಪೊಲೀಸ್ ಮುಂದೆ ಕೊರೋನಾ ಪಾಸಿಟಿವ್ ವ್ಯಕ್ತಿ ಪ್ರತ್ಯಕ್ಷ

ಕರ್ಫ್ಯೂ ವೇಳೆ ಪೊಲೀಸ್ ಮುಂದೆ ಕೊರೋನಾ ಪಾಸಿಟಿವ್ ವ್ಯಕ್ತಿ ಪ್ರತ್ಯಕ್ಷ

ಶಿವಮೊಗ್ಗ : ವೀಕೆಂಡ್ ಕರ್ಫ್ಯೂ ವೇಳೆ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರ ಮುಂದೆ ಕೋವಿಡ್ ಸೋಂಕಿತನೊಬ್ಬ ಪ್ರತ್ಯಕ್ಷನಾಗಿ ಬೆಚ್ಚಿಬೀಳಿಸಿದ್ದಾನೆ. ನಗರದಲ್ಲಿ ಅಮೀರ್ ಅಹಮದ್ ಸರ್ಕಲ್‌ ನಲ್ಲಿಯೇ ಈ ಘಟನೆ ಸಂಭವಿಸಿದ್ದು, ಇಂದು ಬೆಳಿಗ್ಗೆಯಿಂದಲೂ ಟ್ರಾಫಿಕ್ ಪೊಲೀಸರು ವಾಹನಗಳನ್ನು ತಡೆದು ತಪಾಸಣೆ ನಡೆಸುತ್ತಿದ್ದರು.
ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿಯೊಬ್ಬನನ್ನು ಅಡ್ಡಗಟ್ಟಿ ಪ್ರಶ್ನಿಸಿದಾಗ, ಪೊಲೀಸ್ ಗೆ ಚೀಟಿ ನೀಡಿದ್ದಾನೆ. ಇದ್ಯಾರಿಗೆ ಪಾಸಿಟಿವ್ ಬಂದಿದೆ ಅಂತಾ ಪೊಲೀಸ್ ಕೇಳುತ್ತಿದ್ದಂತೆ, ನನಗೆ ಸರ್ ಅಂತಾ ಹೇಳಿದ್ದಾನೆ. ಈ ಸಂದರ್ಭದಲ್ಲಿ ಅವಕ್ಕಾದ ಪೊಲೀಸರು ಮತ್ತು ಸ್ಥಳದಲ್ಲಿದ್ದವರು ಗಲಿಬಿಲಿಯಾಗಿದ್ದರು. ನಾನು ಕೋವಿಡ್ ಪೇಷೆಂಟ್ ಸರ್ ಅಂತಾ ಹೇಳಿ, ಸುತ್ತಲೂ ಇದ್ದವರನ್ನು ಬೆಚ್ಚಿ ಬೀಳಿಸಿದ ಈ ಭೂಪ.
ದಾಖಲೆಗಳ ಪರಿಶೀಲನೆ ವೇಳೆ ಕೋವಿಡ್ ಪಾಸಿಟಿವ್ ದಾಖಲೆ ಪ್ರದರ್ಶಿಸಿದ. ಇದನ್ನು ಕಂಡು ದಂಗಾದ ಪೊಲೀಸರು, ಪಾಸಿಟಿವ್ ಇದ್ದವರು ರಸ್ತೆಯಲ್ಲೇಕೆ ಓಡಾಡ್ತಿದ್ದೀರ ಎಂದು ಪ್ರಶ್ನಿಸಿದ್ದಾರೆ. ಈಗ ಆಸ್ಪತ್ರೆಯಿಂದ ಬರುತ್ತಿದ್ದೇನೆ ಎಂದು ಸೋಂಕಿತ ಉತ್ತರಿಸಿದ. ಸುತ್ತಲು ಇದ್ದ ಪೊಲೀಸರು, ವಾಹನಗಳ ದಾಖಲೆ ತೋರಿಸಲು ನಿಂತಿದ್ದವರು, ಮಾಧ್ಯಮದವರು ಈ ವೇಳೆ ದಂಗಾಗಿದ್ದು, ಕೂಡಲೇ, ಸೋಂಕಿತನನ್ನು ಮನೆಗೆ ತೆರಳುವಂತೆ ಪೊಲೀಸರು ಸೂಚಿಸಿದರು. ಅಲ್ಲದೇ, ದಂಗಾಗಿದ್ದ ಪೊಲೀಸಪ್ಪ, ಕಂಟ್ರೋಲ್ ರೂಂ ಗೆ ಮಾಹಿತಿ ನೀಡಿ, ಉಳಿದ ಪೊಲೀಸರನ್ನು ಅಲರ್ಟ್ ಮಾಡಿದರು.

LEAVE A REPLY

Please enter your comment!
Please enter your name here

- Advertisment -

Most Popular

ಧನ್ವಂತರಿ ಹೋಮದ ಮೊರೆ ಹೋದ ಸಚಿವ ಈಶ್ವರಪ್ಪ..!

ಶಿವಮೊಗ್ಗ : ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಶೀಘ್ರದಲ್ಲೇ ಇಳಿಮುಖ ಕಾಣಲಿ ಎಂದು ಸಚಿವ ಈಶ್ವರಪ್ಪ, ಹೋಮದ ಮೊರೆ ಹೋಗಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ದಿನೇ ದಿನೆ, ಏರಿಳಿತ ಕಾಣುತ್ತಿರುವ ಹಿನ್ನೆಲೆಯಲ್ಲಿ,...

ಕೊಪ್ಪಳದಲ್ಲಿ ಒಂದು ಬ್ಲಾಕ್ ಫಂಗಸ್ ಕೇಸ್ ಪತ್ತೆ..!

ಕೊಪ್ಪಳ: ಕೊರೊನಾ ಎರಡನೇ ಅಲೆ ತೀವ್ರವಾಗಿ ಪ್ರಸರಣವಾಗುತ್ತಿರುವ ಈ ಸಂದರ್ಭದಲ್ಲಿ ಮತ್ತೊಂದು ಆತಂಕ ಎದುರಾಗಿದ್ದು, ಬ್ಲ್ಯಾಕ್​ ಫಂಗಸ್​ ಹರಡುವಿಕೆ ಬಗ್ಗೆ ಭಯ ಶುರುವಾಗಿದೆ. ಹೀಗಿರುವಾಗಲೇ ಕೊಪ್ಪಳ ಜಿಲ್ಲೆಯಲ್ಲಿ ಬ್ಲ್ಯಾಕ್​ ಫಂಗಸ್ ಕಾಣಿಸಿಕೊಂಡಿದೆ ಎಂದು...

‘ತೌಕ್ತೆ’ ಅವಾಂತರಕ್ಕೆ ಕತ್ತಲಲ್ಲಿ ಉತ್ತರಕನ್ನಡ ಬೆಳಕು ನೀಡಲು ಹೆಸ್ಕಾಂ ಸಿಬ್ಬಂದಿಗಳಿಂದ ಸಾಹಸ..!

ಕಾರವಾರ : ತೌಕ್ತೆ ಚಂಡಮಾರುತ ಸೃಷ್ಟಿಸಿದ ಅವಾಂತರ ಒಂದೆರೆಡಲ್ಲ. ಒಂದೆಡೆ ಕಡಲು ಉಕ್ಕೇರಿ ಕಡಲತೀರದ ಮಂದಿ ಸಂಕಷ್ಟಕ್ಕೆ ಸಿಲುಕಿದ್ದರೇ ಇನ್ನೊಂದೆಡೆ ಎಲ್ಲೆಡೆ ಮರಗಿಡಗಳು ಉರುಳಿ ವಿದ್ಯುತ್ ಕಂಬಗಳು ಬುಡಮೇಲಾಗಿವೆ. ಪರಿಣಾಮ ಉತ್ತರಕನ್ನಡ ಜಿಲ್ಲೆಯ...

‘ಸೋಂಕಿತ ಗರ್ಭಿಣಿಗೆ ಹೆರಿಗೆ ಮಾಡಿಸುವಲ್ಲಿ ವೈದ್ಯರ ತಂಡ ಯಶಸ್ವಿ’

ಶಿವಮೊಗ್ಗ: ಪ್ರಾಣದ ಹಂಗನ್ನೂ ಲೆಕ್ಕಿಸದೇ ಸೊರಬ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ವೈದ್ಯರ ತಂಡ ಕೋರೋನಾ ಸೋಂಕಿತ ಗರ್ಭಿಣಿಗೆ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಾಯಿಗೆ ಮೂರನೇ ಹೆರಿಗೆ ಯಾಗಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ....

Recent Comments