ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾ ಜೊತೆ ಪೂನಂ ಪಾಂಡೆ ಕಿರಿಕ್..!

0
662

ಸೋಶಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿರೋ ಬಾಲಿವುಡ್ ಹಾಟ್ ಬ್ಯೂಟಿ ಪೂನಾಂ ಪಾಂಡೆ ಮತ್ತೆ ಕಾಂಟ್ರವರ್ಸಿಯಿಂದಲೇ ಸುದ್ದಿಯಾಗಿದ್ದಾರೆ. ಈ ಬಾರಿ ಪೂನಂ ಜೊತೆ ತಳುಕು ಹಾಕಿಕೊಂಡಿರೋದು ಎವರ್ ಗ್ರೀನ್ ಸುಂದರಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಹೆಸ್ರು..!

ಹೌದು, ಪೂನಾಂ ಪಾಂಡೆ.. ಸದಾ ಒಂದಿಲ್ಲೊಂದು ಸುದ್ದಿಯಲ್ಲಿರ್ತಾರೆ. ಅದು ಪಾಸಿಟಿವ್ ಅನ್ನೋಕ್ಕಿಂತ ನೆಗಿಟೀವ್ ಆಗಿಯೇ ಹೆಚ್ಚು.. ಈ ಕಾಂಟ್ರವರ್ಸಿ ರಾಣಿ ಈ ಬಾರಿ ಸದ್ದು ಮಾಡ್ತಿರೋದು ಎವರ್ ಗ್ರೀನ್ ಚೆಲುವೆ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅವರ ವಿಚಾರದಲ್ಲಿ..! ಕುಂದ್ರಾ ಜೊತೆ ಪೂನಂ ಕಿರಿಕ್ ಕ್ರಿಮಿನಲ್ ಕೇಸ್ ದಾಖಲಿಸೋ ಮಟ್ಟಿಗೆ ಹೋಗಿದೆ..!

ಸಿನಿಮಾಗಳ ಆಫರ್ ಇಲ್ದೆ ಇದ್ರು ಪೂನಂ ಪಾಂಡೆ ಜನಪ್ರಿಯತೆ ಏನೂ ಕಮ್ಮಿಯಾಗಿಲ್ಲ. ಆಗಾಗ ಯಾವ್ದಾದ್ರು ವಿಷಯದಲ್ಲಿ ಸುದ್ದಿಯಲ್ಲಂತೂ ಇರ್ತಾರೆ. ಇದೀಗ ರಾಜ್ ಕುಂದ್ರಾರ ವಿಷಯಲ್ಲಿ ಸುದ್ದಿ ಮಾಡಿಕೊಂಡಿದ್ದಾರೆ. ರಾಜ್ ಕುಂದ್ರಾ ವಿರುದ್ಧ ಪೂನಂ ಗಂಭೀರ ಆರೋಪ ಮಾಡಿದ್ದಾರೆ.

ರಾಜ್ ಕುಂದ್ರಾ ತಮಗೆ ಬೆದರಿಕೆಯೊಡ್ಡುತ್ತಿದ್ದಾರೆ..ಕಿರುಕುಳ ನೀಡ್ತಿದ್ದಾರೆ ಅನ್ನೋದು ಪೂನಂ ಪಾಂಡೆ ಆರೋಪ, ಏನಿದು ಪೂನಂ ಕಿರಿಕ್ ಅಂತ ಹುಡುಕ್ತಾ ಹೋದ್ರೆ ಸಿಗೋದು, ಪೂನಂ ಪಾಂಡೆ ರಾಜ್ ಕುಂದ್ರಾ ಅವ್ರತ್ರ ತಮಗಾಗಿ ಒಂದು ಆ್ಯಪ್ ಡೆವೆಲಪ್ ಮಾಡ್ಕೊಡಿ ಅಂತ ಕೇಳ್ಕೊಂಡಿದ್ರಂತೆ. ಆದ್ರೆ ಇಬ್ಬರ ನಡುವೆ ಆದಾಯ ಹಂಚಿಕೆ ವಿಚಾರದಲ್ಲಿ ಹೊಂದಾಣಿಕೆ ಬಾರದ ಕಾರಣದಿಂದ ಅದನ್ನು ಮುಂದುವರೆಸಿರ್ಲಿಲ್ವಂತೆ.

ಆ ನಂತ್ರ ಪೂನಂ ಪಾಂಡೆಗೆ ಬೆದರಿಕೆ ಕರೆಗಳು ಬರಲು ಆರಂಭಿಸಿದ್ವವಂತೆ! ಹೀಗೆ ಆರೋಪ ಮಾಡಿರೋದಲ್ಲದೆ ಪೂನಂ ರಾಜ್ ಕುಂದ್ರಾ ವಿರುದ್ಧ ಕ್ರಿಮಿನಲ್ ಕೇಸ್ ಕೂಡ ದಾಖಲಿಸಿದ್ದಾರೆ. ರಾಜ್ ಕುಂದ್ರಾ ಮತ್ತು ಪೂನಂ ನಡುವೆ ಯಾವ್ದೇ ಸಿನಿಮಾ ವ್ಯವಹಾರಗಳಿಲ್ಲ, ವೈಯಕ್ತಿಕ ಒಡನಾಟವೂ ಇಲ್ಲ. ಹೀಗಿರುವಾಗ ಇದೆಂಥಾ ಕಿರಿಕ್ ಅನ್ನೋದು ಎಲ್ಲರನ್ನೂ ಕಾಡೋ ಸಹಜ ಪ್ರಶ್ನೆ.

 ಕೆಲವರು ಪೂನಂ ಪರ ಬ್ಯಾಟಿಂಗ್ ನಡೆಸ್ತಾ ಇದ್ದರೆ, ಮತ್ತೆ ಕೆಲವರು ಪೂನಂಗೆ ಯಾವ್ದೇ ಸುದ್ದಿ ಇಲ್ದೇ ಇರೋದ್ರಿಂದ ಪಬ್ಲಿಸಿಟಿಗಾಗಿ ಕ್ಯಾತೆ ತೆಗೆದಿದ್ದಾರೆ ಅಂತ ಟೀಕಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರ ಸಿಕ್ಕಾಪಟ್ಟೆ ಚರ್ಚೆ ಆಗ್ತಿದೆ.

ಈ ಬಗ್ಗೆ ರಾಜ್ ಕುಂದ್ರಾ, ತಮಗೂ ಈ ಪ್ರಕರಣಕ್ಕೂ ಯಾವ್ದೇ ಸಂಬಂಧವಿಲ್ಲ ಅಂದಿದ್ದಾರೆ. ಪೊಲೀಸರು ಈ ಪೂನಂ ರಂಪಾಟವನ್ನು ಹೇಗೆ ಬಗೆಹರಿಸ್ತಾರೆ ಅನ್ನೋದು ಎಲ್ಲರ ಕುತೂಹಲ. ಅಷ್ಟೇ ಅಲ್ಲದೆ ಶಿಲ್ಪಾ ಶೆಟ್ಟಿ ಅಭಿಮಾನಿಗಳು ಈ ಬಗ್ಗೆ ಶಿಲ್ಪಾ ಪ್ರತಿಕ್ರಿಯೆಗೆ ವ್ಹೇಟ್ ಮಾಡ್ತಿದ್ದಾರೆ. ಕಾದು ನೋಡ್ಬೇಕು.. ಪ್ರಕರಣ ಯಾವೆಲ್ಲಾ ಟ್ವಿಸ್ಟ್ ಗಳನ್ನು ಪಡೆಯುತ್ತೆ ಅಂತ.

LEAVE A REPLY

Please enter your comment!
Please enter your name here