ಇಲ್ಲಿ ಪ್ರತಿ ಸೋಮವಾರ ರೋಹಿಣಿ ಸಿಂಧೂರಿ ಹೆಸ್ರಲ್ಲಿ ನಡೆಯುತ್ತೆ ವಿಶೇಷ ಪೂಜೆ

0
725

ಹಾಸನ  : ಇಲ್ಲಿನ ಪುರಾತನ ವಿರೂಪಾಕ್ಷೇಶ್ವರ ದೇವಾಲಯದಲ್ಲಿ ಪ್ರತಿ ಸೋಮವಾರ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೆಸರಲ್ಲಿ ಪೂಜೆ ನಡೆಯುತ್ತದೆ. 

ಶಿಥಿಲಾವಸ್ಥೆಯಲ್ಲಿದ್ದ ಈ ದೇವಲಾಯದ ಜೀರ್ಣೋದ್ಧಾರಕ್ಕೆ ಯಾವ ಜನಪ್ರತಿನಿಧಿಗಳು, ಅಧಿಕಾರಿಗಳೂ ಗಮನಹರಿಸಿರಲಿಲ್ಲ. ಆದರೆ, 2017ರಲ್ಲಿ ಜಿಲ್ಲಾಧಿಕಾರಿಯಾಗಿ ಬಂದ ರೋಹಿಣಿ ಸಿಂಧೂರಿಯವರು ದೇವಾಲಯದ ಜೀರ್ಣೋದ್ಧಾರಕ್ಕೆ ಕೂಡಲೇ 30 ಲಕ್ಷ ರೂ ಬಿಡುಗಡೆ ಮಾಡಿಸಿದರು. ಹೀಗಾಗಿ ಅಂದಿನಿಂದ ಪ್ರತಿ ಸೋಮವಾರ ಸಿಂಧೂರಿಯವರ ಹೆಸರಲ್ಲಿ ವಿರೂಪಾಕ್ಷ ಸ್ವಾಮಿಗೆ ಅರ್ಚನೆ ನಡೆಯುತ್ತದೆ. 

ಅಷ್ಟೇ ಅಲ್ಲದೆ ಆವರಣದಲ್ಲಿ ರೋಹಿಣಿ ಅವರ ಹೆಸರಲ್ಲೊಂದು ಗಿಡವೊಂದನ್ನು ನೆಡಲಾಗಿದ್ದು, ಅದಕ್ಕೆ ಪ್ರತಿದಿನ ಅಭಿಷೇಕದ ನೀರನ್ನು ಹಾಕಲಾಗುತ್ತಿದೆ. ಅಲ್ಲದೆ ಪ್ರತಿ ಸೋಮವಾರ ವಿಶೇಷ ಪೂಜೆಯ ಭಾಗವಾಗಿ ಗಿಡ್ಡಕ್ಕೆ ಅಭಿಷೇಕ ಸಹ ಮಾಡಲಾಗುತ್ತಿದೆ.

ದೇವಾಲಯದ ಜೀರ್ಣೋದ್ಧಾರಕ್ಕೆ ಹಣ ಮಂಜೂರು ಮಾಡಿದ್ದಕ್ಕೆ ರೋಹಿಣಿ ಸಿಂಧೂರಿಯವರಿಗೆ ಈ ರೀತಿ ಕೃತಜ್ಞತೆ ಸಲ್ಲಿಸಲಾಗುತ್ತಿದೆ. 

ಇಲ್ಲಿ ಪ್ರತಿವಾರ ರೋಹಿಣಿ ಸಿಂಧೂರಿ ಹೆಸ್ರಲ್ಲಿ ನಡೆಯುತ್ತೆ ಪೂಜೆ !

ಇಲ್ಲಿ ಪ್ರತಿವಾರ ರೋಹಿಣಿ ಸಿಂಧೂರಿ ಹೆಸ್ರಲ್ಲಿ ನಡೆಯುತ್ತೆ ಪೂಜೆ !

Posted by Powertvnews on Saturday, November 23, 2019

 

 

 

LEAVE A REPLY

Please enter your comment!
Please enter your name here