Home ರಾಜ್ಯ ಅಜ್ಜಿಯನ್ನು ರಕ್ಷಿಸಿದ ಪೊಲೀಸ್ ಪೇದೆ..!

ಅಜ್ಜಿಯನ್ನು ರಕ್ಷಿಸಿದ ಪೊಲೀಸ್ ಪೇದೆ..!

ಕಲಬುರಗಿ: ಕೌಟುಂಬಿಕ ಕಲಹದ ಹಿನ್ನೆಲೆ ವೃದ್ದೆ ಭೀಮಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದಾಗ ಪೊಲೀಸ್ ಪೇದೆ ಅವರನ್ನ ರಕ್ಷಿಸಿದ್ದಾರೆ. 

ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಕಟ್ಟಿಸಂಗಾವಿ ಬ್ರೀಡ್ಜ್ ಬಳಿ ಈ ಘಟನೆ ನಡೆದಿದೆ. ಆಳಂದ‌ ಮೂಲದ 60 ವರ್ಷದ ಗುರುಬಾಯಿ ಎಂಬ ವೃದ್ದೆ, ಹೊಸ ವರ್ಷದ ರಾತ್ರಿ ಕಟ್ಟಿಸಂಗಾವಿ ಭೀಮಾ ಬ್ರೀಡ್ಜ್‌ನ ಕಬ್ಬಿಣದ ರಾಡು ಹಿಡಿದುಕೊಂಡು ನದಿಯತ್ತ ಮುಖ ಮಾಡಿ ಆತ್ಮಹತ್ಯೆ ಮಾಡಿಕೊಳ್ಳಲು ನಿಂತಿದ್ದರು. ಅದೇ ವೇಳೆ ಭೀಮಾ ಬ್ರೀಡ್ಜ್ ಮೇಲೆ ಗಸ್ತಿನಲ್ಲಿದ್ದ ಜೇವರ್ಗಿ ಪೊಲೀಸ್ ಠಾಣೆ ಪೇದೆ ಅನಿಲ್‌ಕುಮಾರ್ ವೃದ್ದೆಯನ್ನ ನೋಡಿದ್ದು, ತಕ್ಷಣವೇ ಉಪಾಯದಿಂದ ಆತ್ಮಹತ್ಯೆಗೆ ರೆಡಿಯಾಗಿದ್ದ ವೃದ್ಧೆಯನ್ನ ಚಾಣಾಕ್ಷತನದಿಂದ ರಕ್ಷಿಸಿದ್ದಾರೆ. ಪೇದೆ ಅನಿಲ್‌ಕುಮಾರ್​ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here

- Advertisment -

Most Popular

ಕೃಷಿ ಕಾಯ್ದೆಯನ್ನು ರದ್ದು ಮಾಡುವುದಿಲ್ಲ: ನರೇಂದ್ರ ಸಿಂಗ್ ತೋಮರ್

ದೆಹಲಿ: ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ಒಂದೂವರೆ ತಿಂಗಳಿನಿಂದ ರಾಷ್ಟ್ರ ರಾಜಧಾನಿಯಲ್ಲಿ ಪ್ರೊಟೆಸ್ಟ್ ನಡೆಸುತ್ತಿವೆ. ಇದರ ನಡುವೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ದೇಶದ ಹೆಚ್ಚಿನ ರೈತರು...

‘ನಾಳೆ ಸಿಎಂ ಯಡಿಯೂರಪ್ಪ ಉಡುಪಿ ಪ್ರವಾಸ’

ಬೆಂಗಳೂರು: ನಾಳೆ ನಾಡಿದ್ದು ಸಿಎಂ ಬಿಎಸ್ ಯಡಿಯೂರಪ್ಪ ಉಡುಪಿ ಪ್ರವಾಸ ಮಾಡಲಿದ್ದಾರೆ. ನಾಳೆ ಸಂಜೆ ಮಧ್ಯಾಹ್ನ 3 ಗಂಟೆಗೆ ಹೆಚ್ ಎ ಎಲ್ ನಿಂದ ಪ್ರಯಾಣ ಬೆಳೆಸಿ, ಸಂಜೆ 5 ಗಂಟೆಗೆ ಪರ್ಯಾಯ...

‘ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ’

ಬೆಂಗಳೂರು: ವಿರೋಧ ಪಕ್ಷಗಳ ವಿರೋಧದ ನಡುವೆಯೂ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಸರ್ಕಾರ ಜಾರಿಗೆ ತಂದಿದ್ದು,  ನಾಳೆಯಿಂದ ಅಧಿಕೃತವಾಗಿ ಜಾರಿಗೆ ಬರಲಿದೆ. ಈ  ಸಂಬಂಧ ರಾಜ್ಯ ಸರ್ಕಾರ ರಾಜ್ಯಪತ್ರದಲ್ಲಿ ಈ ವಿಷಯ ಪ್ರಕಟಿಸಿದೆ. ಇನ್ನೂ...

‘ರೈತರ ಹೋರಾಟ ಬೆಂಬಲಿಸಿ ರಾಜಭವನ ಮುತ್ತಿಗೆ ಹಾಕಲು ಕೈ ರಣತಂತ್ರ’​

ಬೆಂಗಳೂರು: ರೈತರ ಹೋರಾಟಕ್ಕೆ ಬೆಂಬಲ ನೀಡಿ ರಾಜ್ಯ ಕಾಂಗ್ರೆಸ್ ಸರ್ಕಾರ ಜನವರಿ 20 ರಂದು ಬೆಂಗಳೂರು ಸ್ತಬ್ಧ ಮಾಡುಲು ಪ್ಲಾನ್ ಮಾಡಿಕೊಂಡಿದೆ. ಕೃಷಿ ಕಾಯ್ದೆ ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಜನವರಿ 20 ರಂದು...

Recent Comments