Friday, September 30, 2022
Powertv Logo
Homeರಾಜ್ಯಉಚಿತ ಪೆಟ್ರೋಲ್​ಗಾಗಿ ಸಾಮಾಜಿಕ ಅಂತರವನ್ನು ಮರೆತ ವೈದ್ಯ ಹಾಗೂ ಪೊಲೀಸ್ ಸಿಬ್ಬಂದಿ

ಉಚಿತ ಪೆಟ್ರೋಲ್​ಗಾಗಿ ಸಾಮಾಜಿಕ ಅಂತರವನ್ನು ಮರೆತ ವೈದ್ಯ ಹಾಗೂ ಪೊಲೀಸ್ ಸಿಬ್ಬಂದಿ

ಶಿವಮೊಗ್ಗ: ಕೊರೋನಾ ವಿರುದ್ಧ ಹೋರಾಡುತ್ತಿರುವ ಪೊಲೀಸರು, ವೈದ್ಯರು, ಯೋಧರಿಗೆ ಉಚಿತವಾಗಿ ಪೆಟ್ರೋಲ್ ಕೊಡೋದಾಗಿ ಪೆಟ್ರೋಲ್ ಬಂಕ್ ಮಾಲೀಕರೊಬ್ಬರು ಹೇಳಿದ್ದಾರೆ.

ಶಿವಮೊಗ್ಗದ ಬಾಲರಾಜ್ ಅರಸ್ ರಸ್ತೆಯಲ್ಲಿರುವ ಸಹ್ಯಾದ್ರಿ ಪೆಟ್ರೋಲ್ ಬಂಕ್​ನಲ್ಲಿ ಕೋವಿಡ್ ವಾರಿಯರ್ಸ್​ಗೆ ಒಂದು ಲೀಟರ್ ಪೆಟ್ರೋಲ್ ನೀಡಲಾಗುತ್ತಿದೆ. ಆದರೆ ಉಚಿತವಾಗಿ ಪೆಟ್ರೋಲ್ ಕೊಡೋದಾಗಿ ಘೋಷಿಸಿದ್ದೆ ತಡ ಪೆಟ್ರೋಲ್​ಗಾಗಿ ವೈದ್ಯಕೀಯ ಮತ್ತು ಪೊಲೀಸ್ ಸಿಬ್ಬಂದಿ ಮುಗಿಬಿದ್ದಿದ್ದಾರೆ. ಉಚಿತವಾಗಿ ಪೆಟ್ರೋಲ್ ಪಡೆಯುವ ಭರದಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಲು ಹೇಳುತ್ತಿದ್ದ ವೈದ್ಯಕೀಯ ಹಾಗೂ ಪೊಲೀಸ್ ಸಿಬ್ಬಂದಿಗಳೇ ಅಂತರವನ್ನು ಕಾಪಾಡಲು ಮರೆತಿದ್ದಾರೆ. ಸದ್ಯ ಪೊಲೀಸರು ಹಾಗೂ ವೈದ್ಯ ಸಿಬ್ಬಂದಿ ನಿಯಮಗಳನ್ನು ಪಾಲಿಸದಿರುವುದನ್ನು ಸಾರ್ವಜನಿಕರು ಟೀಕಿಸುತ್ತಿದ್ದಾರೆ.

 

 

8 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments