ಭರ್ಜರಿಯಾಗಿದೆ ‘ಪೊಗರು’ ಡೈಲಾಗ್​ ಟ್ರೈಲರ್ !

0
200

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ‘ಪೊಗರು’ ಸಿನಿಮಾದ ಡೈಲಾಗ್ ಟ್ರೈಲರ್ ರಿಲೀಸ್ ಆಗಿದೆ. ಧ್ರುವ ಖಡಕ್ ಡೈಲಾಗ್​ಗಳಿಗೆ ಫ್ಯಾನ್ಸ್ ಕಳೆದೋಗಿದ್ದಾರೆ.
3 ನಿಮಿಷ 40 ಸೆಕೆಂಡ್ ಇರೋ ಟ್ರೈಲರ್​​ನಲ್ಲಿ ಡೈಲಾಗ್​ಗಳು, ಕೌಂಟರ್ ಡೈಲಾಗ್​ ಗಳು ಮಸ್ತ್ ಆಗಿವೆ. ಹಿರೋಯಿನ್ ರಶ್ಮಿಕಾ ಮಂದಣ್ಣ ಎಂಟ್ರಿ, ಕಾಮಿಡಿ, ಲವ್ ಸೆಂಟಿಮೆಂಟ್ ಎಲ್ಲಾ ಅದ್ಭುತವಾಗಿದ್ದು, ಮೂರುವರೆ ನಿಮಿಷದ ಟ್ರೈಲರೇ ಈ ರೇಂಜಿಗಿದೆ ಅಂದ್ರೆ ‘ಪೊಗರು’ ಖದರ್, ಪವರ್ ಹೇಗಿರಬೇಡ ಅನ್ನೋ ಕುತೂಹಲ ಹೆಚ್ಚಿದೆ.
ನಂದ ಕಿಶೋರ್ ‘ಪೊಗರು’ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಡಾಲಿ ಧನಂಜಯ್, ಕುರಿಪ್ರತಾಪ್, ಸಾಧುಕೋಕಿಲ, ರವಿಶಂಕರ್ ಮತ್ತಿತರರು ನಟಿಸಿದ್ದಾರೆ.

LEAVE A REPLY

Please enter your comment!
Please enter your name here