1 ಕೋಟಿ ಕಾರ್ಯಕರ್ತರ ಜೊತೆ ಮೋದಿ ವಿಶ್ವ ದಾಖಲೆ ವಿಡಿಯೋ ಸಂವಾದ..!

0
215

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ದೇಶದ 15,000 ಸ್ಥಳಗಳಲ್ಲಿನ ಸುಮಾರು ಪಕ್ಷದ 1 ಕೋಟಿ ಕಾರ್ಯಕರ್ತರ ಜೊತೆ ವಿಶ್ವದಾಖಲೆಯ ಸಂವಾದ ನಡೆಸಲಿದ್ದಾರೆ. ಈ ಮೂಲಕ ಮೋದಿಯವರು ಹಿಂದೆಂದೂ ನಡೆಯದ ಪ್ರಮಾಣದಲ್ಲಿ ವಿಡಿಯೋ ಕಾನ್ಫರೆನ್ಸ್‌ ನಡೆಸಲಿದ್ದಾರೆ.

15,000 ಸ್ಥಳಗಳಿಂದ ಒಂದು ಕೋಟಿಗೂ ಹೆಚ್ಚು ಕಾರ್ಯಕರ್ತರು, ಸ್ವಯಂಸೇವಕರ ಜತೆ ಏಕಕಾಲದಲ್ಲಿ ಪ್ರಧಾನಿ ಸಂವಾದ ನಡೆಸಲಿದ್ದಾರೆ. ಇದು ವಿಶ್ವದ ಅತಿದೊಡ್ಡ ವಿಡಿಯೋ ಕಾನ್ಫರೆನ್ಸ್‌ ಆಗಿರಲಿದೆ. ‘ ಜನರು ನಮೋ ಆ್ಯಪ್​ ಮೂಲಕ ತಮ್ಮ ಪ್ರಶ್ನೆಗಳನ್ನು ‘ಮೇರಾ ಬೂತ್‌ ಸಬ್ಸೇ ಮಜಬೂತ್‌’ ಎಂದು ಬರೆದು ಹ್ಯಾಷ್‌ಟಾಗ್‌ ಮಾಡುವ ಮೂಲಕ ಕೇಳಬಹುದಾಗಿದೆ.

ಈಗ ಪಾಕ್​ ಜೊತೆ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದೆ. ನಮಗೆ ನಮ್ಮ ಪೈಲಟ್​ನ್ನು ಮರಳಿ ಕರೆತರಬೇಕಾಗಿದೆ. ಆದರೆ ಪ್ರಧಾನಿ ಕೆಲವು ಬೂತ್ ಕಾರ್ಯಕರ್ತರನ್ನುದ್ದೇಶಿ ಮಾತನಾಡಲು ಹೊರಟಿದ್ದೀರಿ ಅಂತ ಕಾಂಗ್ರೆಸ್​ ವಕ್ತಾರ ಕಿಡಿಕಾರಿದ್ದಾರೆ. ಕಾಂಗ್ರೆಸ್​ ಈಗಾಗಲೇ ಇಂದು ನಡೆಯಬೇಕಾಗಿದ್ದ ಸಭೆಯನ್ನು ರದ್ದುಗೊಳಿಸಿದೆ.

LEAVE A REPLY

Please enter your comment!
Please enter your name here