ಮಾಜಿ ಪ್ರಧಾನಿ ವಾಜಪೇಯಿ ಸ್ಮರಣಾರ್ಥ ನಾಣ್ಯ

0
415

ನವದೆಹಲಿ: ಮಾಜಿ ಪ್ರಧಾನಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಗೌರವಾರ್ಥವಾಗಿ ಸ್ಮರಣಾರ್ಥ ನಾಣ್ಯವನ್ನು ಪ್ರಧಾನಿ ನರೇಂದ್ರ ಡಿಸೆಂಬರ್​ 24ರಂದು ಬಿಡುಗಡೆಗೊಳಿಸಲಿದ್ದಾರೆ. ಸಾಂಸ್ಕೃತಿ ಸಚಿವ ಮಹೇಶ್​ ಶರ್ಮಾ ಈ ಸಂದರ್ಭ ಉಪಸ್ಥಿತರಿರುತ್ತಾರೆ.

ಅಗಸ್ಟ್​ 16ರಂದು ಅಟಲ್ ಬಿಹಾರಿ ವಾಜಪೇಯಿ 96ನೇ ವಯಸ್ಸಿನಲ್ಲಿ ದೆಹಲಿಯ ಭಾರತೀಯ ವೈದ್ಯಕೀಯ ವಿಜ್ಷಾನ ಸಂಸ್ಥೆ(ಏಮ್ಸ್​)ಯಲ್ಲಿ ಮೃತಪಟ್ಟಿದ್ದರು. ಇವರು ಬಿಜೆಪಿಯಿಂದ ಆಯ್ಕೆಯಾದ ಮೊದಲ ಪ್ರಧಾನಿಯಾಗಿದ್ದರು. ಅಟಲ್​ ಅವರ ಜನ್ಮದಿನ ಡಿಸೆಂಬರ್​ 25ನ್ನು ಬಿಜೆಪಿ ‘ಉತ್ತಮ ಆಡಳಿತ ದಿನ’ ಎಂದು ಆಚರಿಸುತ್ತದೆ. 2014ರಲ್ಲಿ ಇವರಿಗೆ ಭಾರತ ರತ್ನ ಬಿರುದು ನೀಡಿ ಗೌರವಿಸಲಾಗಿತ್ತು.

LEAVE A REPLY

Please enter your comment!
Please enter your name here