Friday, September 30, 2022
Powertv Logo
Homeಸಿನಿಮಾ101 ಈಡುಗಾಯಿ ಒಡೆದು 'ಒಡೆಯ'ನ ಹುಟ್ಟುಹಬ್ಬ ಆಚರಿಸಿದ ಅಭಿಮಾನಿಗಳು..!

101 ಈಡುಗಾಯಿ ಒಡೆದು ‘ಒಡೆಯ’ನ ಹುಟ್ಟುಹಬ್ಬ ಆಚರಿಸಿದ ಅಭಿಮಾನಿಗಳು..!

ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬವನ್ನು ರಾಜ್ಯದ ನಾನಾ ಕಡೆಗಳಲ್ಲಿ ಅಭಿಮಾನಿಗಳು ಸಡಗರ, ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಮೈಸೂರಿನ ಅಭಿಮಾನಿಗಳು, ವಿಶ್ವ ವಿಖ್ಯಾತ ಚಾಮುಂಡಿ ಬೆಟ್ಟದಲ್ಲಿ 101 ಈಡುಗಾಯಿ ಒಡೆಯುವ ಮೂಲಕ ತಾಯಿ ಚಾಮುಂಡೇಶ್ವರಿ ದೇವಿಗೆ ಪ್ರಾರ್ಥನೆ ಸಲ್ಲಿಸುವ ಮೂಲಕ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬ ಆಚರಿಸಿದರು.
ಇನ್ನು ಬೆಂಗಳೂರಿನ ರಾಜರಾಜೇಶ್ವರಿ ನಗರದ ದರ್ಶನ್​ ನಿವಾಸದ ಬಳಿ ನಿನ್ನೆ ಮಧ್ಯರಾತ್ರಿಯಿಂದಲೇ ಸಾವಿರಾರು ಅಭಿಮಾನಿಗಳು ಜಮಾಯಿಸಿ ‘ಯಜಮಾನ’ಗೆ ಶುಭಾಶಯ ಕೋರಿದ್ದಾರೆ.

ತಮ್ಮ ಹುಟ್ಟುಹಬ್ಬದ ದಿನದಂದು ಹಾರ, ಕೇಕ್​ಗಳನ್ನು ತರುವ ಬದಲಾಗಿ ದವಸ – ಧಾನ್ಯಗಳನ್ನು ನೀಡುವಂತೆ ದರ್ಶನ್​ ಕೋರಿದ್ದರು. ಅದರಂತೆ ಅಭಿಮಾನಿಗಳು ದವಸ – ಧಾನ್ಯಗಳು ಸೇರಿದಂತೆ ಗೃಹಬಳಕೆಯ ವಸ್ತುಗಳನ್ನು ನೀಡಿದ್ದಾರೆ.

ಉಡುಗೊರೆಯಾಗಿ ಬಂದಂತಹ ದವಸ – ಧಾನ್ಯಗಳನ್ನು ದರ್ಶನ್ ಅನಾಥಾಶ್ರಮ ಹಾಗೂ ವೃದ್ಧಾಶ್ರಮಗಳಿಗೆ ನೀಡಲಿದ್ದಾರೆ.

‘ದಾಸ‘ನಿಗೆ 43ನೇ ಜನ್ಮದಿನ : ಅಭಿಮಾನಿಗಳಿಗೆ ಸಂಭ್ರಮ

‘ನಂಗೆ ಇಂಗ್ಲಿಷ್ ಬರಲ್ಲ’ : ಚಾಲೆಂಜಿಂಗ್ ಸ್ಟಾರ್ ದರ್ಶನ್

8 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments