Sunday, May 29, 2022
Powertv Logo
Homeದೇಶಕಾಶಿಯಲ್ಲಿ ಕನ್ನಡದಲ್ಲಿ ಮಾತನಾಡಿದ‌ ಪ್ರಧಾನಿ ಮೋದಿ..!

ಕಾಶಿಯಲ್ಲಿ ಕನ್ನಡದಲ್ಲಿ ಮಾತನಾಡಿದ‌ ಪ್ರಧಾನಿ ಮೋದಿ..!

ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ‌ ಕಾಶಿಯಲ್ಲೂ‌ ಕನ್ನಡದಲ್ಲಿ ಭಾಷಣ ಆರಂಭಿಸಿ ಗಮನಸೆಳೆದಿದ್ದಾರೆ.
ವಾರಣಾಸಿಯಲ್ಲಿ ನಡೆಯುತ್ತಿರುವ ಶ್ರೀ ಜಗದ್ಗುರು ವಿಶ್ವಾರಾದ್ಯ ಗುರುಕುಲದ ಶತಮಾನೋತ್ಸವದಲ್ಲಿ ಮೋದಿ ಕನ್ನಡದಲ್ಲೇ ಭಾಷಣ ಆರಂಭಿಸಿದ್ದು ವಿಶೇಷವಾಗಿತ್ತು.
”ಎಲ್ಲರಿಗೂ ನಮಸ್ಕಾರ, ವೇದಿಕೆ ಮೇಲಿರುವ ವೀರಶೈವ ಲಿಂಗಾಯತ ಧರ್ಮದ ಪಂಚಪೀಠದ ಜಗದ್ಗುರುಗಳಿಗೆ ನಮಸ್ಕಾರಗಳು” ಎಂದು ಕನ್ನಡದಲ್ಲಿ ಮಾತಾರಂಭಿಸಿ, ಬಳಿಕ ಹಿಂದಿಯಲ್ಲಿ ಮಾತು ಮುಂದುವರೆಸಿದರು.
ಅಲ್ಲದೆ ಭಾಷಣದ ನಡುವೆ ಮರಾಠಿ ಮತ್ತು ತೆಲುಗು ಭಾಷೆಯಲ್ಲೂ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ನಾನಾ ಮಠಾಧೀಶರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

- Advertisment -

Most Popular

Recent Comments