Friday, October 7, 2022
Powertv Logo
Homeರಾಜ್ಯಯುವ ವಿಜ್ಞಾನಿಗಳ ಕನಸು ಸ್ವಹಿತಾಸಕ್ತಿಗಲ್ಲ, ದೇಶದ ಅಭಿವೃದ್ಧಿಗೆ : ಮೋದಿ

ಯುವ ವಿಜ್ಞಾನಿಗಳ ಕನಸು ಸ್ವಹಿತಾಸಕ್ತಿಗಲ್ಲ, ದೇಶದ ಅಭಿವೃದ್ಧಿಗೆ : ಮೋದಿ

ಬೆಂಗಳೂರು : ದೇಶದಲ್ಲಿರುವ ಯುವ ವಿಜ್ಞಾನಿಗಳು ಆವಿಷ್ಕಾರ, ಪೇಟೆಂಟ್, ಉತ್ಪಾದನೆ ಹಾಗೂ ಅಭಿವೃದ್ಧಿ ಈ ನಾಲ್ಕು ಹಂತಗಳ ಮೂಲಕ ದೇಶವನ್ನು ಅಭಿವೃದ್ಧಿಪಡಿಸುವತ್ತಾ ಹೆಜ್ಜೆ ಹಾಕಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಿವಿಮಾತು ಹೇಳಿದರು. 

ಜಿಕೆವಿಕೆ ಆವರಣದಲ್ಲಿ 107ನೇ ಕಾಂಗ್ರೆಸ್ ವಿಜ್ಞಾನ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಮೊದಲು ಬೆಂಗಳೂರು ಗಾರ್ಡನ್ ಸಿಟಿ ಆಗಿತ್ತು. ಆದರೆ, ಈಗ ವಿಜ್ಞಾನ ತಂತ್ರಜ್ಞಾನಗಳ ನಗರವಾಗಿದೆ. ಅಲ್ಲದೆ ಸ್ಟಾರ್ಟ್ಅಪ್ ಹಾಗೂ ಇನ್ನೋವೇಷನ್​ನಲ್ಲಿಯೂ ಪ್ರಗತಿಯನ್ನು ಹೊಂದಿದೆ. ಇನ್ನೂ ಕೂಡ ಹೊಸ ಹೊಸ ಆವಿಷ್ಕಾರದಿಂದ  ಅಭಿವೃದ್ಧಿಯಾಗಬೇಕಾಗಿದೆ ಎಂದರು. 

ಯುವ ವಿಜ್ಞಾನಿಗಳ ಕನಸು ಕೇವಲ ವೈಯಕ್ತಿಕ ಹಿತಾಸಕ್ತಿಗಲ್ಲ, ಬದಲಾಗಿ ದೇಶದ ಅಭಿವೃದ್ಧಿಯ ಕನಸನ್ನು ಯುವಜನತೆ ಕಾಣುತ್ತಿದ್ದಾರೆ. ನವಭಾರತಕ್ಕೆ ವಿಜ್ಞಾನ-ತಂತ್ರಜ್ಞಾನದ ಅವಶ್ಯಕತೆಯೂ ಹೆಚ್ಚಾಗಿದೆ. ಸ್ವಚ್ಛ ಭಾರತದಿಂದ ಆಯುಷ್ಮಾನ್ ಭಾರತದವರೆಗೆ ಅತಿದೊಡ್ಡ ಯೊಜನೆಗಳೆಲ್ಲವೂ ಜಾರಿಗೊಂಡಿವೆ ಅಂದರೆ ಅದಕ್ಕೆ ಕಾರಣ ವಿಜ್ಞಾನ-ತಂತ್ರಜ್ಞಾನ. ಅಷ್ಟೇ ಅಲ್ಲ ನಮ್ಮ ದೇಶದಲ್ಲಿರುವ ಬಡವರನ್ನು ಈ ತಂತ್ರಜ್ಞಾನವೇ ಗುರುತಿಸಿದೆ. ಗ್ರಾಮಗಳಲ್ಲಿ ರಸ್ತೆಗಳ ನಿರ್ಮಾಣ, ಸಮಯಕ್ಕೆ ಸರಿಯಾಗಿ ಯೋಜನೆಗಳು ಜಾರಿಯಾಗುತ್ತಿರುವುದು ಎಲ್ಲಾ ತಂತ್ರಜ್ಞಾನಗಳಿಂದ ಮೆಚ್ಚುಗೆ ವ್ಯಕ್ತಪಡಿಸಿದರು. 

ರೈತರ ವಿಚಾರಕ್ಕೆ ಬಂದರೆ ಯಾವುದೇ ದಲ್ಲಾಳಿಗಳ ಹಸ್ತಕ್ಷೇಪವಿಲ್ಲದೆ ಇ- ಮಾರುಕಟ್ಟೆ ಮೂಲಕ ರೈತರು ಬೆಳೆಯನ್ನು ಎಲ್ಲೆಡೆ ಮಾರಾಟ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ  ತಂತ್ರಜ್ಞಾನ ಬೆಳೆ ಬೆಳೆಯಲು ಹಾಗೂ ವೆಚ್ಚ ಕಡಿತಕ್ಕೂ ಬಳಕೆಯಾಗಬೇಕಾಗಿದೆ. ಇನ್ನು ಮನೆಯಿಂದ ಬರುವ ತ್ಯಾಜ್ಯ ನೀರನ್ನು ಮರುಬಳಕೆ ಮಾಡುವ ಬಗ್ಗೆ ಸಂಶೋಧನೆ ನಡೆಯಬೇಕು. 2022 ರ ವೇಳೆಗೆ  ಕೃಷಿ ಆದಾಯದ ದ್ವಿಗುಣಗೊಳಿಸುವ ಸಂಕಲ್ಪವಿದೆ ಎಂದು ವಿಶ್ವಾಸದ ನುಡಿಗಳನ್ನಾಡಿದರು.

 

9 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments