Home ದೇಶ-ವಿದೇಶ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ತಾತ್ಕಾಲಿಕ ಮಾತ್ರ : ಮೋದಿ

ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ತಾತ್ಕಾಲಿಕ ಮಾತ್ರ : ಮೋದಿ

ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ತಾತ್ಕಾಲಿಕ. ಪರಿಸ್ಥಿತಿ ಸುಧಾರಿಸುತ್ತಲೇ ವಿಧಾನಸಭೆಗೂ ಚುನಾವಣೆ ನಡೆಯಲಿದೆ ಅಂತ ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ಸಂವಿಧಾನದ 370 ಮತ್ತು 35ಎ ವಿಧಿ ರದ್ದುಗೊಳಿಸಿರುವದರಿಂದ ದೇಶದಲ್ಲಿ ಆ ಬಗ್ಗೆ ಚರ್ಚೆ ನಡೀತಾ ಇದೆ. ಇದರ ಬೆನ್ನಲ್ಲೇ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು, ಮುಂಬರುವ ದಿನಗಳಲ್ಲಿ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಆಗಿರಲ್ಲ. ಅಂತಹ ದಿನಗಳು ಬೇಗನೇ ಜಮ್ಮು ಕಾಶ್ಮೀರದಲ್ಲಿ ಆಗಮಿಸಲಿ. ಲಡಾಖ್ ಮಾತ್ರ ಕೇಂದ್ರಾಡಳಿತ ಪ್ರದೇಶವಾಗಿ ಇರಲಿದೆ. ನಿಮ್ಮ ಪ್ರತಿನಿಧಿಯನ್ನು ಆರಿಸುವ ಅವಕಾಶ ಬೇಗ ಸಿಗಲಿದೆ . ಇತ್ತೀಚೆಗೆ ಪಂಚಾಯತ್​ ಚುನಾವಣೆ ಪಾರದರ್ಶಕವಾಗಿ ನಡೀತು. ಅದೇ ರೀತಿ ವಿಧಾನಸಭೆ ಚುನಾವಣೆ ಶೀಘ್ರದಲ್ಲಿ ನಡೆಯಲಿದೆ ಎಂದರು.
ಮುಂಬರುವ ದಿನಗಳಲ್ಲೂ ಜಮ್ಮು ಕಾಶ್ಮೀರದ ವಿಧಾನಸಭೆ ಇರಲಿದೆ . ಜನರಿಂದ ಆಯ್ಕೆಯಾಗಿರುವ ಶಾಸಕರು ಮತ್ತು ಸಿಎಂ ಇರಲಿದ್ದಾರೆ ನಾವು ನೀವು ಎಲ್ಲರೂ ಕೂಡ ಜಮ್ಮು ಕಾಶ್ಮೀರ ಸುಂದರ ಮಾಡೋಣ. ಭಯೋತ್ಪಾದನೆ, ಪ್ರತ್ಯೇಕತಾವಾದಗಳಿಂದ ಮುಕ್ತ ಮಾಡೋಣ . ಜಮ್ಮು ಕಾಶ್ಮೀರವನ್ನು ನಾವು ಮತ್ತೆ ಸ್ವರ್ಗವನ್ನಾಗಿ ಮಾಡೋಣ ಅಂತ ಕರೆ ನೀಡಿದರು.
ಯಾವುದೇ ಬದಲಾವಣೆ ಸಾಧ್ಯವೇ ಇಲ್ಲ ಎಂದುಕೊಳ್ಳುತ್ತಾರೆ. ಕೆಲವೊಂದಿಷ್ಟು ಜನರಲ್ಲಿ ಅಂತಹದೇ ಮನೋಭಾವ ಬಲವಾಗಿರುತ್ತೆ. 370 ನೇ ವಿಧಿಯ ವಿಚಾರದಲ್ಲೂ ಅಂತಹುದೇ ಮನೋಭಾವ ಇತ್ತು . 370 ಹಾಗೂ 35ಎ ವಿಧಿಗಳಿಂದ ಜಮ್ಮು ಕಾಶ್ಮೀರಕ್ಕೆ ಸಿಕ್ಕಿದ್ದು ಪರಿವಾರವಾದ, ಭಯೋತ್ಪಾದನೆ, ಪ್ರತ್ಯೇಕತಾವಾದ ಮಾತ್ರ ಅಂತ ಹೇಳಿದರು.
ಶತ್ರು ದೇಶ ಪಾಕಿಸ್ತಾನಕ್ಕೆ ಇದೊಂದು ಭಯಾನಕ ಅಸ್ತ್ರವಾಗಿತ್ತು . 42 ಸಾವಿರ ಜನರು ಇದರಿಂದ ತಾಪತ್ರಯ ಅನುಭವಿಸುವಂತಾಯ್ತು. ಬದಲಾದ ಮಸೂದೆಯಿಂದ ಕಣಿವೆ ನಾಡಿನ ಜನರ ಭವಿಷ್ಯ ಭದ್ರವಾಗಿದೆ. ಕೇಂದ್ರದಲ್ಲಿ ಯಾವುದೇ ಸರ್ಕಾರ ಇರಲಿ ದೇಶಕ್ಕಾಗಿ ಕಾನೂನು ರೂಪಿಸಲಾಗುತ್ತೆ. ರೂಪಿಸುವ ಹೊಸ ಹೊಸ ಕಾನೂನುಗಳ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯಾಗುತ್ತೆ. ಆದರೆ ಈ ಹಿಂದೆ ಸಂಸತ್ತಿನಲ್ಲಿ ಸಾಕಷ್ಟು ಕಾನೂನುಗಳನ್ನು ರಚಿಸಲಾಗಿತ್ತು .ಆ ಕಾನೂನುಗಳಿಂದ ದೇಶದ ಜನತೆಗೆ ಯಾವುದೇ ಪ್ರಯೋಜನ ಇರಲಿಲ್ಲ ಎಂದರು,
ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಮಕ್ಕಳಿಗೆ ಶಿಕ್ಷಣದ ಅಧಿಕಾರವಿದೆ. ಆದರೆ ಜಮ್ಮು ಮತ್ತು ಕಾಶ್ಮೀರದ ಜನರು ಶಿಕ್ಷಣದಿಂದ ವಂಚಿತರಾಗಿದ್ರು. ಬೇರೆ ಬೇರೆ ರಾಜ್ಯಗಳ ಯುವತಿಯರು ಪ್ರಯೋಜನ ಪಡೆಯುತ್ತಾರೆ. ಆದರೆ ಜಮ್ಮು ಕಾಶ್ಮೀರದ ಯುವತಿಯರು ಅದರಿಂದ ವಂಚಿತರಾಗಿದ್ರು. ಸಫಾಯಿ ಕರ್ಮಚಾರಿಗಳಿಗೆ ದೇಶದ ಇತರ ರಾಜ್ಯಗಳಲ್ಲಿ ಯೋಜನೆಗಳಿವೆ . ಆದರೆ ಜಮ್ಮು ಕಾಶ್ಮೀರದಲ್ಲಿ ಸಫಾಯಿ ಕರ್ಮಚಾರಿಗಳಿಗೆ ಆ ಲಾಭ ಸಿಗಲಿಲ್ಲ . ದಲಿತರು, ಶ್ರಮಿಕರ ಹಿತರಕ್ಷಣೆಗೆ ಬೇರೆ ಬೇರೆ ರಾಜ್ಯಗಳಲ್ಲಿ ಕಾಯ್ದೆಯಿದೆ. ಕನಿಷ್ಟ ವೇತನ ಸಿಗುವ ಬಗ್ಗೆ ಬೇರೆ ಬೇರೆ ರಾಜ್ಯಗಳಲ್ಲಿ ಕಾನೂನಿದೆ. ಆದರೆ ಆ ಕಾನೂನು ಜಮ್ಮು ಕಾಶ್ಮೀರದ ಶ್ರಮಿಕರಿಗೆ ಸಿಗಲಿಲ್ಲ. ಜಮ್ಮು ಕಾಶ್ಮೀರದ ಜನರಿಗೆ ದೇಶದ ಮೀಸಲಾತಿಯೂ ಸಿಗಲಿಲ್ಲ .ಆ ಎಲ್ಲಾ ಸಂಕಷ್ಟಗಳಿಂದ ಜಮ್ಮು ಕಾಶ್ಮೀರದ ಜನ ಹೊರಬರಲಿದ್ದಾರೆ ಅಂತ ವಿಶ್ವಾಸದ ನುಡಿಗಳನ್ನಾಡಿದರು,
ಜಮ್ಮು ಕಾಶ್ಮೀರದ ಶ್ರಮಿಕರಿಗೆ ಇನ್ನು ಬೇರೆ ರಾಜ್ಯಗಳಂತೆ ಅನುಕೂಲ ಆಗಲಿದೆ. ಶೈಕ್ಷಣಿಕ ಅನುಕೂಲ, ಆರೋಗ್ಯ ಯೋಜನೆಯ ಲಾಭಗಳು ಸಿಗಲಿವೆ. ದೇಶದ ಬೇರೆ ಬೇರೆ ಕೇಂದ್ರಾಡಳಿತ ಪ್ರದೇಶಗಳ ಜನರಿಗೆ ಲಾಭ ಸಿಗ್ತಿವೆ. ಅಂತಹ ಎಲ್ಲಾ ಲಾಭಗಳು ಇನ್ಮುಂದೆ ಜಮ್ಮು ಕಾಶ್ಮೀರದ ಜನಕ್ಕೆ ಸಿಗಲಿವೆ. ಹೊಸ ಹೊಸ ಉದ್ಯೋಗಾವಕಾಶಗಳು ಇನ್ಮುಂದೆ ಇಲ್ಲಿನ ಜನರಿಗೆ ಸಿಗಲಿವೆ. ಪ್ರಧಾನಮಂತ್ರಿ ಸ್ಕಾಲರ್​ಶಿಪ್​ ಯೋಜನೆಯ ಲಾಭ ಸಿಗಲಿದೆ . ಆರ್ಮಿ ಸೇರ್ಪಡೆಯೂ ಸೇರಿದಂತೆ ಎಲ್ಲಾ ನೇಮಕಾತಿಯಲ್ಲಿ ಅವಕಾಶ ಸಿಗಲಿದೆ ಎಂದರು.
370 ವಿಧಿ ತೆಗೆಯುವ ಜೊತೆ ಕೇಂದ್ರಾಡಳಿತ ಪ್ರದೇಶವಾಗಿ ಘೋಷಣೆ. ಕೆಲವು ಸಮಯದವರೆಗೆ ಕೇಂದ್ರಾಡಳಿತ ಪ್ರದೇಶ ಆಗಿರಲಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಯೋಚಿಸಿ ನಿರ್ಧಾರ ಕೈಗೊಂಡಿದೆ. ಕಳೆದ ಕೆಲವು ದಿನಗಳಿಂದ ಜಮ್ಮು ಕಾಶ್ಮೀರದಲ್ಲಿ ಅಭಿವೃದ್ಧಿ ಆಗ್ತಿದೆ.ರಾಜ್ಯಪಾಲರ ಆಡಳಿತದಲ್ಲಿ ರಾಜ್ಯವು ಪ್ರಗತಿ ಹೊಂದುತ್ತಿದೆ. ದಶಕಗಳಿಂದ ಕಡತದಲ್ಲಿದ್ದ ಕಾಮಗಾರಿಗಳು ಜಾರಿಯಾಗ್ತಿವೆ .ಜಮ್ಮು ಕಾಶ್ಮೀರದ ಅಭಿವೃದ್ಧಿಗೆ ಕೇಂದ್ರದಿಂದ ಪರಿಣಾಮಕಾರಿ ಕೆಲಸ ನಡೆಯಲಿದೆ. ಹಿಂದೆಂದಿಗಿಂತಲೂ ವೇಗವಾಗಿ ಕಾಮಗಾರಿ ನಡೆಯುತ್ತಿದ ಎಂದರು.

LEAVE A REPLY

Please enter your comment!
Please enter your name here

- Advertisment -

Most Popular

ಆಧುನಿಕ ಭಗೀರಥ ಕಾಮೇಗೌಡರಿಗೆ ಅನಾರೋಗ್ಯ; ದಿಢೀರ್ ಆಸ್ಪತ್ರೆಗೆ ದಾಖಲು.

ಮಂಡ್ಯ: ಮಂಡ್ಯದ ಕೆರೆ ಕಾಮೇಗೌಡರು ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ನಲ್ಲಿ ಪ್ರಶಂಸೆಗೆ ಒಳಪಟ್ಟ ಕೆರೆ ಕಾಮೇಗೌಡರು ದೇಶ ಮಾತ್ರವಲ್ಲ, ವಿಶ್ವದ ಹಲವೆಡೆ...

ಮಳೆ ಮಧ್ಯೆಯೂ ಕರ್ತವ್ಯ ನಿಷ್ಠೆ : ಎಸ್​.ಪಿ ಮೆಚ್ಚುಗೆ

ಬಾಗಲಕೋಟೆ: ಜಿಲ್ಲೆಯ ಕಲಾದಗಿಯಲ್ಲಿ ಗ್ರಾಮದಲ್ಲಿ ಸೋಂಕಿತರು ಹೆಚ್ಚಿದ ಪರಿಣಾಮ ಗ್ರಾಮ ಸೀಲ್ ಡೌನ್ ಮಾಡಲಾಗಿದೆ.ಮಳೆ ಮಧ್ಯೆಯೂ ಪೋಲಿಸ ಪೇದೆ ಕತ೯ವ್ಯ ನಿಷ್ಠೆ ಮೆರದ ವಿಡಿಯೋ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.ಸೀಲ್ ಡೌನ್ ಆಗಿರೋ...

ಗಮನ ಸೆಳೆದ ‘ಮಾಸ್ಕ್ ಪರಾಟಾ..!’

ಕರೋನಾದಿಂದ ಬಚಾವಾಗಲು ಇರುವ ಬಹು ಮುಖ್ಯ ಅಸ್ತ್ರ ಎಂದರೆ ಅದು ಫೇಸ್ ಮಾಸ್ಕ್. ಎಲ್ಲರೂ ಫೇಸ್ ಮಾಸ್ಕ್ ಬಳಸಿ ಎಂದು ಸರ್ಕಾರ ಸೇರಿದಂತೆ, ಸಾಕಷ್ಟು ಮಂದಿ ಜಾಗೃತಿ ಮೂಡಿಸುತ್ತಲೇ ಇದ್ದಾರೆ. ಇಲ್ಲೊಂದು ಹೊಟೆಲ್...

ಚಾರ್ಮಾಡಿ ಘಾಟ್​​ನಲ್ಲಿ ರಾತ್ರಿ ಸಂಚಾರಕ್ಕೆ ನಿರ್ಬಂಧ

ಚಿಕ್ಕಮಗಳೂರು : ಮಂಗಳೂರು-ಚಿಕ್ಕಮಗಳೂರು ಮಧ್ಯೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ ನಲ್ಲಿ ಭಾರೀ ಮಳೆಯಿಂದಾಗಿ ಮಣ್ಣು ಕುಸಿಯುವ ಭೀತಿ ಎದುರಾಗಿದ್ದು ಇದನ್ನು ತಪ್ಪಿಸಲು ಘಾಟ್ ನಲ್ಲಿ ಸಂಜೆ 7 ಗಂಟೆಯಿಂದ ಬೆಳಗ್ಗೆ 7...

Recent Comments