ವಾಣಿಜ್ಯನಗರಿಗೆ ಪ್ರಧಾನಿ ಆಗಮನ: ಡ್ಯಾಮೇಜ್​ ಕಂಟ್ರೋಲ್ ಮಾಡ್ತಾರಾ ಮೋದಿ..?

0
219

ಹುಬ್ಬಳ್ಳಿ: ರಾಷ್ಟ್ರ ರಾಜಕಾರಣದಲ್ಲಿ ಹೊಸ ಕ್ರೇಜ್‌ ಹುಟ್ಟಿಸಿರೋ ಬಿಜೆಪಿಯ ಈ ಸಾರಥಿ ಈಗ ರಾಜ್ಯಕ್ಕೆ ಎಂಟ್ರಿ ಕೊಡ್ತಿದ್ದಾರೆ. ಬಜೆಟ್‌ ಮಂಡನೆ, ಆಡಿಯೋ ಬಾಂಬ್‌ ಸ್ಫೋಟದ ಬೆನ್ನಲ್ಲೇ ಬಿಜೆಪಿಯ ಬೃಹತ್ ಸಮಾವೇಶಕ್ಕೆ ವಾಣಿಜ್ಯನಗರಿ ಹುಬ್ಬಳ್ಳಿ ಅಣಿಯಾಗಿದ್ದು, ಪ್ರಧಾನಿ ಆಗಮನಕ್ಕೆ ಕೇಸರಿ ಟೀಮ್‌ ಕಾತರದಿಂದ ಕಾಯ್ತಿದೆ. ‘ಆಪರೇಷನ್‌ ಕಮಲ’ದ ಬಗ್ಗೆ ಆಡಿಯೋ ಸ್ಫೋಟಗೊಂಡ ಬೆನ್ನಲ್ಲೇ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಎಂಟ್ರಿ ಕೊಡ್ತಿದ್ದು, ಡ್ಯಾಮೇಜ್‌ ಕಂಟ್ರೋಲ್‌ಗೆ ಅದೇನು ಮಾಡ್ತಾರೆ ಅನ್ನೋದು ಸಾಕಷ್ಟು ಕುತೂಹಲ ಕೆರಳಿಸಿದೆ.

ಉತ್ತರ ಕರ್ನಾಟಕದ ಕೇಂದ್ರ ಭಾಗ ಎನಿಸಿರೋ ಹುಬ್ಬಳ್ಳಿಯಲ್ಲಿ ಲೋಕಸಮರಕ್ಕೆ ಇಂದು ಪ್ರಧಾನಿ ಮೋದಿ ರಣಕಹಳೆ ಮೊಳಗಿಸಲಿದ್ದಾರೆ. ಹುಬ್ಬಳ್ಳಿಯ ಗಬ್ಬೂರು ಬಳಿ ಕೆಎಲ್‌ಇ ಮೈದಾನದಲ್ಲಿ ಬೃಹತ್‌ ಸಮಾವೇಶಕ್ಕೆ ವೇದಿಕೆ ಸಜ್ಜುಗೊಂಡಿದೆ. ಬಿಜೆಪಿ ಸಮಾವೇಶದಲ್ಲಿ ಭಾಗವಹಿಸುವು ಮೂಲಕ ರಾಜ್ಯದಲ್ಲಿ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿಯೇ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಮೋದಿ ಆಗಮದ ಹಿನ್ನೆಲೆಯಲ್ಲಿ ಬೃಹತ್ ವೇದಿಕೆಯನ್ನ ಸಿದ್ಧಪಡಿಸಲಾಗಿದ್ದು, ಬಿಜೆಪಿ ನಾಯಕರಿಗಾಗಿ ಪ್ರಧಾನ ವೇದಿಕೆಯನ್ನೇ ಸಿದ್ಧಪಡಿಸಲಾಗಿದೆ.

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಸಂಸದ ಪ್ರಹ್ಲಾದ್​ ಜೋಶಿ ಸಮಾವೇಶದ ಸ್ಥಳ ಪರಿಶೀಲನೆ ನಡೆಸಿದ್ರು. ಸಮಾವೇಶಕ್ಕೂ ಮುನ್ನ ಪ್ರಧಾನಿ ಮೋದಿ, ತ್ರಿಬಲ್ ಐಟಿ ಕಟ್ಟಡದ ಶಂಕುಸ್ಥಾಪನೆ, ಪ್ರಧಾನಿ ಆವಾಸ್ ಯೋಜನೆಯ ಮನೆಗಳ ಲೋಕಾರ್ಪಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಬಳಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ‌.

ಸಮಾವೇಶದ ಕಣ್ಗಾವಲಿಗೆ ವಿಶೇಷ ಭದ್ರತಾ ಪಡೆ ಈಗಾಗಲೇ ನಗರಕ್ಕೆ ಆಗಮಿಸಿದ್ದು, 5 ಎಸ್​​ಪಿ, 30 ಡಿವೈಎಸ್ಪಿ​​60 ಸಿಪಿಐ, 200 ಪಿಎಸ್​​ಐ ಸೇರಿದಂತೆ 3,500ಕ್ಕು ಹೆಚ್ಚು ಪೋಲಿಸರನ್ನ ಭದ್ರತೆಗೆ ನಿಯೋಜಿಸಲಾಗಿದೆ.

LEAVE A REPLY

Please enter your comment!
Please enter your name here