ಉಗ್ರ ಪೋಷಿತ ಪಾಪಿ ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ..!

0
396

ನವದೆಹಲಿ : ಉಗ್ರ ಪೋಷಿತ ಪಾಪಿ ಪಾಕಿಸ್ತಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಖಡಕ್​ ಎಚ್ಚರಿಕೆಯನ್ನು ನೀಡಿದ್ದಾರೆ.
ಜಮ್ಮು-ಕಾಶ್ಮೀರಾದ ಪುಲ್ವಾಮಾ ಬಳಿಯ ಆವಂತಿಪೊರಾದಲ್ಲಿ ಉಗ್ರರು ನಡೆಸಿದ ಆತ್ಮಾಹುತಿ ದಾಳಿಯನ್ನು ಖಂಡಿಸಿರುವ ಮೋದಿ, ಉಗ್ರರಿಗೆ ತಕ್ಕ ಶಾಸ್ತಿ ಮಾಡೇ ಮಾಡ್ತೀವಿ ಅಂದಿದ್ದಾರೆ. ದಾಳಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರೋ ಅವರು, ‘ಪ್ರತೀಕಾರಕ್ಕೆ ದೇಶದ ಜನರು ಬಯುಸುತ್ತಿದ್ದಾರೆ. ದೇಶದ ಜನರ ಭಾವನೆಗಳು ಸ್ವಾಭಾವಿಕವಾಗಿವೆ. ನಮ್ಮ ರಕ್ಷಣಾ ಪಡೆಗೆ ಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ನಮ್ಮ ಯೋಧರ ಶೌರ್ಯ ಸಾಹಸದ ಬಗ್ಗೆ ಭರವಸೆಯಿದೆ. ಉಗ್ರ ಸಂಘಟನೆಗಳು ಬಹಳ ದೊಡ್ಡ ತಪ್ಪು ಮಾಡಿವೆ. ಅವು ಬಹು ದೊಡ್ಡ ಪರಿಣಾಮ ಎದುರಿಸಲಿವೆ. ದಾಳಿಯ ಹೊಣೆಗಾರರಿಗೆ ಅದಕ್ಕೆ ತಕ್ಕ ಶಿಕ್ಷೆ ಖಂಡಿತ ಸಿಗಲಿದೆ’ ಎಂದು ಹೇಳಿದ್ದಾರೆ.
‘ನಾವು ರಾಜಕೀಯವಾಗಿಯೂ ಏಕತೆ ತೋರಬೇಕು. ನಮ್ಮೆಲ್ಲರ ಒಗ್ಗಟ್ಟನ್ನು ಜಗತ್ತು ಈಗ ನೋಡುತ್ತಿದೆ .ಭಾರತ ಎದುರಾಳಿಗಳಿಗೆ ತಕ್ಕ ಉತ್ತರ ಕೊಡಲಿದೆ. ಘಟನೆಯನ್ನು ಜಗತ್ತಿನ ಎಲ್ಲಾ ದೇಶಗಳು ಖಂಡಿಸಿವೆ. ಆ ಎಲ್ಲಾ ರಾಷ್ಟ್ರಗಳಿಗೆ ಅಭಿನಂದನೆಗಳು. ಮಾನವೀಯ ಮೌಲ್ಯ ಎತ್ತಿ ಹಿಡಯಲೇ ಬೇಕಿದೆ. ಭಯೋತ್ಪಾದನೆ ವಿರುದ್ಧ ಎಲ್ಲಾ ರಾಷ್ಟ್ರಗಳು ಒಗಟ್ಟಾಗಬೇಕು’ ಎಂದು ಕರೆ ನೀಡಿದ್ದಾರೆ. 

LEAVE A REPLY

Please enter your comment!
Please enter your name here