ಎಂದೂ ಭಾರತಮಾತೆ ತಲೆ ತಗ್ಗಿಸಲು ಬಿಡಲ್ಲ: ಮೋದಿ

0
256

ಚುರು: ಭಾರತ ಸುರಕ್ಷಿತರ ಕೈಯಲ್ಲಿದೆ. ಭಾರತ ಮಾತೆ ತಲೆ ತಗ್ಗಿಸಲು ಎಂದೂ ಬಿಡುವುದಿಲ್ಲ ಅಂತ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಗಡಿ ನಿಯಂತ್ರಣ ರೇಖೆಯಲ್ಲಿ ಜೈಷ್​ ಅಡಗುತಾಣಗಳ ಮೇಲೆ ಏರ್​ ಸರ್ಜಿಕಲ್​ ನಡೆದ ನಂತರ ರಾಜಸ್ಥಾನದಲ್ಲಿ ಸಮಾವೇಶದಲ್ಲಿ ಮಾತನಾಡಿ, “ನಾನು ಈ ಮಣ್ಣಿನ ಮೇಲೆ ಪ್ರಮಾಣ ಮಾಡುತ್ತೇನೆ. ದೇಶವನ್ನು ಎಂದಿಗೂ ಸೋಲಲು ಬಿಡುವುದಿಲ್ಲ. ಈ ದೇಶ ನಿಂತ ನೀರಾಗುವುದಿಲ್ಲ. ದೇಶ ಎಂದೂ ತಲೆಬಾಗಲು ಬಿಡುವುದಿಲ್ಲ ಎಂದು ಭಾರತಮಾತೆಯ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ. ನೀವ್ಯಾರೂ ತಲೆ ತಗ್ಗಿಸುವಂತಾಗುವುದಿಲ್ಲ. ನಮ್ಮ ವೀರ ಯೋಧರಿಗೆ ನಾನು ನಮಿಸುತ್ತೇನೆ. ಎಲ್ಲ ಭಾರತೀಯರಿಗೆ ನಾನು ವಂದಿಸುತ್ತೇನೆ. ನಿಮ್ಮ ಈ ಪ್ರಧಾನ ಸೇವಕ ನಿಮಗೆ ತಲೆ ಬಾಗುತ್ತಾನೆ” ಅಂತ ಹೇಳಿದ್ದಾರೆ.

ಜೈಷ್​ ಉಗ್ರರ ಕ್ಯಾಂಪ್​ ಮೇಲೆ ಭಾರತೀಯ ವಾಯು ಸೇನೆ ಇಂದು ಬೆಳಗ್ಗೆ 3.30ರ ವೇಳೆಗೆ ದಾಳಿ ನಡೆಸಿದೆ. 16 ಮಿರಾಜ್​, 2000 ಜೆಟ್​ಗಳ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು, ಉಗ್ರರ ಅಡಗುತಾಣಗಳ ಮೇಲೆ 1,000 ಕಿಜಿ ಬಾಂಬ್​ಗಳ ದಾಳಿ ಮಾಡಲಾಗಿದೆ. ಸೇನಾ ದಾಳಿಯಲ್ಲಿ 500 ಮೀಟರ್​​ ಜಾಗ ಸಂಪೂರ್ಣ ನಾಶವಾಗಿದೆ.

LEAVE A REPLY

Please enter your comment!
Please enter your name here