ಬೆಂಗಳೂರು: ಜಗತ್ತಿನ ಅತಿ ದೊಡ್ಡ ಕೊವಿಡ್ ಲಸಿಕೆಗೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಪರೆನ್ಸ್ ಮೂಲಕ ಚಾಲನೆ ನೀಡಿದರು.
ಅತಿ ಕಡಿಮೆ ದಿನದಲ್ಲಿ ಮಹಾಮಾರಿ ಕೊರೋನಾ ಗೆ ವಿಜ್ಞಾನಿಗಳು ಎರಡು ಲಸಿಕೆಯನ್ನು ಸಿದ್ಧ ಪಡಿಸಿದ್ದಾರೆ. ಲಸಿಕೆ ಸಿದ್ಧ ಪಡಿಸಿದ ವಿಜ್ಞಾನಿಗಳಿಗೆ ಪ್ರಧಾನಿ ಮೋದಿಯವರು ಅಭಿನಂದನೆಗಳನ್ನು ತಿಳಿಸಿದರು. ಇದು ಭಾರತದ ಪ್ರತಿಭೆ, ವೈಜ್ಞಾನಿಕ ಸಾಧನೆಯಲ್ಲಿ ಒಂದು ಉದಾಹರಣೆ ಆಗಿದೆ ಎಂದರು. ಮನುಷ್ಯ ಮನಸ್ಸು ಮಾಡಿದರೆ ಎನು ಬೇಕಾದರೂ ಸಾಧಿಸಬಹುದು. ಇಡೀ ವಿಶ್ವವೀ ಭಾರತವನ್ನು ಬೆರಗುಗಣ್ಣಿನಿಂದ ನೋಡುತ್ತಿದೆ ಎಂದು ಹೇಳಿದರು.
ರಾಜ್ಯ, ಕೇಂದ್ರ ಸರ್ಕಾರದ ಸಹಾಯದಿಂದ ಲಸಿಕೆ ತಯಾರಿಸಿದೆ. ಮೊದಲ ಹಂತದಲ್ಲಿ ಮೂರು ಕೋಟಿ ಕೊರೋನಾ ವಾರಿಯರ್ಸ್ಗೆ ಲಸಿಕೆಯನ್ನು ವಿತರಣೆ ಮಾಡಲಾಗುತ್ತದೆ. ಎರಡನೇ ಹಂತದಲ್ಲಿ 27 ಕೋಟಿ ಜನರಿಗೆ ಲಸಿಕೆ ನೀಡಲಾಗುವುದು. ಎರಡೇ ಹಂತದಲ್ಲಿ 57 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುವುದು. ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಗೆ ಲಸಿಕೆ ನೀಡಲಾಗುವುದು. ಲಸಿಕೆಯ ಸಂಪೂರ್ಣ ವೆಚ್ಚವನ್ನ ಕೇಂದ್ರವೇ ಭರಿಸಲಿದೆ ಎಂದು ಹೇಳಿದರು. ಒಬ್ಬರಿಗೆ 2 ಡೋಸ್ ಲಸಿಕೆ ಕಡ್ಡಾಯ. ಎರಡು ಲಸಿಕೆಗಳ ಮಧ್ಯೆ ಒಂದು ತಿಂಗಳ ಅಂತರವಿತ್ತೆ. ಒಂದು ಡೋಸ್ ಪಡೆದ ನಂತರ ಇನ್ನೊಂದು ಡೋಸ್ ಪಡೆಯಬೇಕು. ಎರಡು ವಾರಗಳ ಬಳಿಕ ರೋಗ ನಿರೋಧಕ ಶಕ್ತಿ ಬರುತ್ತೆ. ಲಸಿಕೆ ಬಂತೆಂಬ ಖುಷಿಯಲ್ಲಿ ನಿಯಮಗಳನ್ನ ಮರೆಯಬೇಡಿ ಎಂದರು.
ಸಾಮಾಜಿಕ ಅಂತರ, ಮಾಸ್ಕ್ ಧರಿಸೋದು ಕಡ್ಡಾಯ. ಕೊರೋನಾ ವಿರುದ್ಧದ ನಮ್ಮ ಹೋರಾಟ ಇನ್ನು ಮುಗಿದಿಲ್ಲ. ಲಸಿಕೆಗೆ ಸಂಬಂಧಿಸಿದ ವದಂತಿಗಳಿಗೆ ಕಿವಿಗೊಡಬೇಡಿ. ಜಗತ್ತಿಗೆ ಹೋಲಿಸಿಕೊಂಡ್ರೆ ಅತಿ ಕಡಿಮೆ ಬೆಲೆಗೆ ಲಭಿಸುತ್ತೆ. ಅತ್ಯುತ್ತಮ ತಂತ್ರಜ್ಞಾನ ಬಳಸಿ ಲಸಿಕೆ ಅಭಿವೃದ್ಧಿ ಮಾಡಲಾಗಿದೆ ಎಂದರು.
ಕೊರೋನ ವಿರುದ್ಧ ಯುದ್ಧದಲ್ಲಿ ವ್ಯಾಕ್ಸಿನ್ನಿಂದ ಗೆಲುವು. ಲಸಿಕೆಯನ್ನ ಮೈನಸ್ 70 ಡಿಗ್ರಿಯಲ್ಲಿ ಶೇಖರಿಸಬಹುದು. ನಮ್ಮ ವೈದ್ಯಕೀಯ ಸೇವೆ ಮೇಲೆ ಜಗತ್ತಿನೆಲ್ಲೆಡೆ ನಂಬಿಕೆ ಇದೆ. ಬೇರೆ ದೇಶದಲ್ಲಿ ಕೊರೋನಾ ಲಸಿಕೆ 5 ಸಾವಿರ ಇದೆ. ತೆಲುಗು ಕವಿ ಗುರುಜಾಡ ಅಪ್ಪಾರ ಕವಿತೆ ವಾಚಿಸಿದ ಮೋದಿ. ದೇಶವೆಂದರೇ ಮಣ್ಣಲ್ಲ, ದೇಶವೆಂದರೆ ಜನ. ಈಗ ನಾವೇ ತಯಾರಿಸುವುದೇ ಅಷ್ಟೆ ಅಲ್ಲ ಜಗತ್ತಿಗೆ ರಫ್ತು ಮಾಡ್ತೀವಿ. ಮಕ್ಕಳನ್ನ ದೂರ ಮಾಡಿದ ರೋಗವಿದೆ. ಕಳೆದ ವರ್ಷ ನಾಲೆಲ್ಲರೂ ಸಾಕಷ್ಟು ಕಷ್ಟ ಅನುಭವಿಸಿದೆವು. ಮನೆಯಲ್ಲಿ ಒಬ್ಬರಿಗೊಬ್ಬರು ಹತ್ತಿರ ಸೇರದಂತ ಪರಿಸ್ಥಿತಿ ಬಂತು. ಮೃತರಿಗೆ ಸಂಪ್ರದಾಯಬದ್ಧ ಸಂಸ್ಕಾರ ಮಾಡಲಾಗಲಿಲ್ಲ. ವೈದ್ಯರು, ನರ್ಸ್ಗಳು, ಪೊಲೀಸರು ಕೊರೋನ ವಿರುದ್ಧ ಹೋರಾಟದಲ್ಲಿ ಶ್ರಮ ವಹಿಸಿದ್ದಾರೆ ಅವರ ಕಾರ್ಯ ಶ್ಲಾಘನೀಯ ಎಂದರು.