ಕಿಸಾನ್​ ಸಮ್ಮಾನ್ ಯೋಜನೆಗೆ ಮೋದಿ ಚಾಲನೆ – 1 ಕೋಟಿ ರೈತರ ಖಾತೆಗಳಿಗೆ ಹಣ ಜಮೆ

0
265

ಗೋರಖ್​ಪುರ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕಿಸಾನ್​ ಸಮ್ಮಾನ್​ ಯೋಜನೆಗೆ ಚಾಲನೆ ನೀಡಿದ್ದಾರೆ.
ಉತ್ತರ ಪ್ರದೇಶದ ಗೋರಖ್​ಪುರದಲ್ಲಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿ, ಕಿಸಾನ್​ ಸಮ್ಮಾನ್ ಯೋಜನೆ ದೇಶದ ಜನರ ಹಕ್ಕು. ಹಿಂದಿನ ಸರ್ಕಾರಗಳು ರೈತರ ಉದ್ಧಾರದ ಬಗ್ಗೆ ಕೇವಲ ಮಾತನಾಡುತ್ತಿದ್ದವು. ಆದರೆ, ನಮ್ಮ ಸರ್ಕಾರ ರೈತರ ಖಾತೆಗೆ ನೇರವಾಗಿ ಹಣ ವರ್ಗಾಯಿಸುವ ಈ ಕಿಸಾನ್​ ಸಮ್ಮಾನ್ ಯೋಜನೆಯನ್ನು ಜಾರಿಗೆ ತಂದು ರೈತರಿಗೆ ಒಪ್ಪಿಸುತ್ತಿದೆ ಎಂದು ಹೇಳಿದ್ರು.
ಕೇಂದ್ರ ಸರ್ಕಾರ ಮಧ್ಯಂತರ ಬಜೆಟ್​ನಲ್ಲಿ ಘೋಷಿಸಿದ್ದ 75, 000 ಕೋಟಿ ಗಾತ್ರದ ಯೋಜನೆ ಈ ಕಿಸಾನ್ ಸಮ್ಮಾನ್. ಇಂದಿನಿಂದ ಜಾರಿಗೆ ಬಂದಿದೆ. ರೈತರಿಗೆ ವಾರ್ಷಿಕವಾಗಿ 6000 ರೂ ನೆರವು ನೀಡುವ ಮಹಾತ್ವಕಾಂಕ್ಷಿ ಯೋಜನೆ ಇದಾಗಿದೆ. ಯೋಜನೆಯ ಮೊದಲ ಹಂತವಾಗಿ ಕರ್ನಾಟಕದ ರೈತರು ಸೇರಿದಂತೆ 14 ರಾಜ್ಯಗಳ 1 ಕೋಟಿ ರೈತರ ಖಾತೆಗಳಿಗೆ ತಲಾ 2 ಸಾವಿರ ರೂ ಜಮೆಯಾಗಿದೆ. ಇನ್ನು ಕೆಲವೇ ವಾರಗಳಲ್ಲಿ ಎಲ್ಲಾ ರೈತರ ಖಾತೆಗಳಿಗೆ ಹಣ ಜಮೆಯಾಗಲಿದೆ ಎಂದು ಮೋದಿ ಭರವಸೆ ಕೊಟ್ಟಿದ್ದಾರೆ.

LEAVE A REPLY

Please enter your comment!
Please enter your name here