ನವದೆಹಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ ಮಾರಿಷಸ್ನ ಹೊಸ ಸುಪ್ರೀಂಕೋರ್ಟ್ ಕಟ್ಟಡವನ್ನು ಉದ್ಘಾಟಿಸಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಕಾರ್ಯಕ್ರಮದಲ್ಲಿ ಮಾರಿಷಸ್ನ ಪ್ರಧಾನಿ ಪ್ರವಿಂದ್ ಜುಗ್ನೌತ್ ಜೊತೆ ಭಾರತದ ಪ್ರಧಾನಿ ಮೋದಿ ಮಾರಿಷಸ್ ಸುಪ್ರೀಂಕೋರ್ಟ್ ಕಟ್ಟಡವನ್ನು ಉದ್ಘಾಟಿಸಿದರು.
ಉದ್ಘಾಟನೆ ಬಳಿಕ ಮಾತನಾಡಿದ ಪ್ರಧಾನಿ, “ ಕೊರೋನಾ ಪರಿಸ್ಥಿತಿಯನ್ನು ಸಮಪರ್ಕವಾಗಿ ನಿಭಾಯಿಸುತ್ತಿರೋ ಮಾರಿಷಸ್ ಸರ್ಕಾರ ಹಾಗೂ ಅಲ್ಲಿನ ಜನರಿಗೆ ಅಭಿನಂದಿಸುತ್ತೇನೆ’’ ಎಂದರು.
ಹಿಂದಿಯಲ್ಲಿ ಮಾತನಾಡಿದ ಮಾರಿಷಸ್ ಪ್ರಧಾನಿ, “ ಶ್ರೀ ಮೋದಿ, ನಮ್ಮ ದೇಶ, ನಮ್ಮ ಜನರು ನಿಮ್ಮ ಬೆಂಬಲಕ್ಕೆ ಕೃತಜ್ಞರಾಗಿರುತ್ತೇವೆ ‘’ ಅಂತ ಹೇಳಿದ್ರು. ಮಾರಿಷಸ್ ತಮ್ಮ ಹೃದಯಕ್ಕೆ ತುಂಬಾ ಹತ್ತಿರವಾದುದು ಅಂತ ಮೋದಿ ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ. ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದುಗಳು ಅಂತ ಹೇಳಿದ್ರು.