ಯೋಧರ 60 ವರ್ಷಗಳ ಕನಸು ನನಸು – ರಾಷ್ಟ್ರೀಯ ಸಮರ ಸ್ಮಾರಕ ಉದ್ಘಾಟನೆ

0
265

ನವದೆಹಲಿ: ಇಂಡಿಯಾ ಗೇಟ್​ ಸಮೀಪ ರಾಷ್ಟ್ರೀಯ ಸಮರ ಸ್ಮಾರಕವನ್ನುಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದರು. ಈ ಮೂಲಕ ಯೋಧರ 60 ವರ್ಷಗಳ ಕನಸು ನನಸಾದಂತಾಗಿದೆ.

25,942 ಯೋಧರ ಹೆಸರನ್ನು ಸ್ಮಾರಕದಲ್ಲಿ ಸೇರಿಸಲಾಗಿದೆ. ಮುಂದಿನ ಕೆಲವೇ ದಿನಗಳಲ್ಲಿ ಸಾರ್ವಜನಿಕರಿಗೆ ಸ್ಮಾರಕ ವೀಕ್ಷಣೆಗೆ ಅವಕಾಶ ಸಿಗಲಿದೆ. 40 ಎಕರೆ ವಿಶಾಲ ಪ್ರದೇಶದಲ್ಲಿರುವ ಈ ಸ್ಮಾರಕ ನಿರ್ಮಾಣಕ್ಕೆ 176 ಕೋಟಿ ರೂಪಾಯಿ ವೆಚ್ಚವಾಗಿದೆ. ಸ್ಮಾರಕದ ನಾಲ್ಕೂ ದಿಕ್ಕುಗಳಲ್ಲಿ ವೃತ್ತಾಕಾರದ ನಾಲ್ಕು ಚಕ್ರ ಸ್ಥಾಪನೆ ಮಾಡಲಾಗಿದೆ. ಸೇನಾಪಡೆ 1960ರಲ್ಲೇ ಸ್ಮಾರಕ ನಿರ್ಮಾಣದ ಬೇಡಿಕೆಯನ್ನುಕೇಂದ್ರದ ಮುಂದೆ ಇಟ್ಟಿತ್ತು. ಆದರೆ ಈ ಬೇಡಿಕೆ ಈಡೇರಿಕೆಗೆ ಸುಮಾರು 60 ವರ್ಷ ಬೇಕಾಯಿತು. 

ಸ್ಮಾರಕದ ಮುಂದೆ ಪ್ರಧಾನಿ ಮೋದಿ ಜ್ಯೋತಿ ಬೆಳಗಿ ಗೌರವ ಸಲ್ಲಿಸಿದರು. ಸ್ಮಾರಕ ಉದ್ಘಾಟನೆಗೂ ಮುನ್ನ ಮಾತನಾಡಿದ ಮೋದಿ, “ಜಗತ್ತಿನಲ್ಲಿಯೇ ಭಾರತದ ಸೇನೆ ಅತ್ಯಂತ ಬಲಶಾಲಿಯಾಗಿದೆ. ಪ್ರತಿ ಸವಾಲುಗಳನ್ನು ನಮ್ಮ ಯೋಧರು ಎದುರಿಸುತ್ತಾ ಬಂದಿದ್ದಾರೆ. ದಶಕಗಳಿಂದಲೂ ಸ್ಮಾರಕಕ್ಕಾಗಿ ಒತ್ತಾಯಿಸಲಾಗುತ್ತಿತ್ತು. ನಿಮ್ಮ ಮತ್ತು ದೇಶದ 60 ವರ್ಷದ ಕನಸು ನನಸಾಗಿದೆ. ರಾಷ್ಟ್ರೀಯ ಸಮರ ಸ್ಮಾರಕ ಲೋಕಾರ್ಪಣೆಯಾಗಲಿದೆ. ಇಲ್ಲಿ ಹುತಾತ್ಮ ಯೋಧರ ಹೆಸರುಗಳನ್ನು ಬರೆಯಲಾಗಿದೆ. ನಿಮ್ಮೆಲ್ಲರ ಆಶಿರ್ವಾದದಿಂದ ಸ್ಮಾರಕ ನಿರ್ಮಾಣ ಆರಂಭಿಸಿ ಈಗ ಅದನ್ನು ನಿರ್ಮಿಸಿ ತೋರಿಸಿದ್ದೇವೆ” ಅಂತ ಹೇಳಿದ್ದಾರೆ.

“ಒಆರ್​ಒಪಿ ಮೂಲಕ 35,000 ಕೋಟಿ ರೂಪಾಯಿಯನ್ನು ಹಂಚಲಾಗಿದೆ. ಪೆನ್ಶನ್​ ಬಜೆಟ್​ ಈಗ 1 ಲಕ್ಷ ಕೋಟಿ ರೂಪಾಯಿ ಮಾಡಲಾಗಿದೆ. ಸೈನಿಕರ ವೇತನವನ್ನು ಶೇ 55ರಚ್ಟು ಹೆಚ್ಚಿಸಲಾಗಿದೆ. ಈಗ ಮಹಿಳೆಯರೂ ಫೈಟರ್ ಜೆಟ್​ಗಳ ಪೈಲಟ್​ಗಳಾಗಿದ್ದಾರೆ. ರಕ್ಷಣಾ ಕ್ಷೇತ್ರಕ್ಕೆ ಬೇಕಾದ ಶಸ್ತ್ರಾಸ್ತ್ರಗಳನ್ನು ಖರೀದಿಸುವ ರೀತಿ ಬದಲಾಗಿದೆ. ಇಂದು ವಿಶ್ವದ ಹಲವು ರಾಷ್ಟ್ರಗಳು ನಮ್ಮೊಂದಿಗೆ ಹೆಗಲುಕೊಟ್ಟು ಮುಂದುವರಿಯಲು ಇಷ್ಟ ಪಡುತ್ತಿವೆ. ನಮ್ಮ ಸೇನೆ ಮಿತ್ರ ರಾಷ್ಟ್ರಗಳ ಸೇನೆಯ ಜೊತೆ ಸಮರಾಭ್ಯಾಸ ನಡೆಸ್ತಾ ಇದೆ. ಬುಲೆಟ್​ ಪ್ರೂಫ್​ ಜಾಕೆಟ್​ಗಳಿಲ್ಲದೆ ನಮ್ಮ ಯೋಧರು ಶತ್ರುಗಳನ್ನು ಎದುರಿಸ್ತಾ ಇದ್ರು. ಆದರೆ ಇಂದು ಹಾಗಿಲ್ಲ. ನಮ್ಮ ಸರ್ಕಾರ ಯೋಧರಿಗೆ ಬುಲೆಟ್​ಪ್ರೂಫ್ ಜಾಕೆಟ್​​ಗಳನ್ನು ಒದಗಿಸಿದೆ” ಎಂದರು.

“ಯೋಧರಿಗೆ ಬುಲೆಟ್​ ಪ್ರೂಫ್ ಜಾಕೆಟ್ ಒದಗಿಸಲಾಗದವರು ಈಗ ರಫೇಲ್​ ವಿಚಾರವಾಗಿ ಟೀಕೆ ಮಾಡ್ತಿದ್ದಾರೆ. ನಾವು 72,000 ಹೊಸ ರಫೇಲ್​ಗಳನ್ನು ಆರ್ಡರ್​ ಮಾಡಿದ್ದೇವೆ. ಕೆಲವರಿಗೆ ದೇಶಕ್ಕಿಂತಲೂ ಅವರ ಕುಟುಂಬವೇ ಮುಖ್ಯ. ಕುಟುಂಬದ ಹಿತವೇ ಮುಖ್ಯ. ನಮಗೆ ಸೈನಿಕರೇ ಮುಖ್ಯ. ನಮ್ಮ ಯೋಧರ ತ್ಯಾಗ, ಬಲಿದಾನ, ದೇಶಪ್ರೇಮ ಅಮರವಾಗಿ ಉಳಿಯಬೇಕು. ಮೋದಿ ಮುಖ್ಯವಲ್ಲ, ಭಾರತ ಮುಖ್ಯ. ನಿಮ್ಮ ಈ ಪ್ರಧಾನ ಸೇವಕ ರಾಷ್ಟ್ರಹಿತವನ್ನು ಸದಾ ಕಾಪಾಡುತ್ತೇನೆ. ದೇಶದ ಪ್ರಗತಿ, ವಿಕಾಸ, ರಕ್ಷಣೆ ನನಗೆ ಈ ಲಕ್ಷ್ಯಗಳು ಬಹಳ ಪವಿತ್ರ” ಅಂತ ಹೇಳಿದ್ದಾರೆ.

ನಿವೃತ್ತ ಯೋಧರೂ, ಸೇನಾ ಮುಖಂಡರೂ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ರಕ್ಷಣಾ ಸಚಿವೆ ನಿಮರ್ಲಾ ಸೀತಾರಾಮನ್​ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here