ಪ್ರಧಾನಿ ಮೋದಿಗೆ ಸಿಯೋಲ್​ ಶಾಂತಿ ಪ್ರಶಸ್ತಿ ಪ್ರದಾನ

0
230

ನವದೆಹಲಿ: ದಕ್ಷಿಣ ಕೊರಿಯಾ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಯೋಲ್​ ಶಾಂತಿ ಪ್ರಶಸ್ತಿ ಪ್ರದಾನ ಮಾಡಿದೆ. ಅಂತಾರಾಷ್ಟ್ರೀಯಮಟ್ಟದಲ್ಲಿ ಸಹಭಾಗಿತ್ವ ಮತ್ತು ಸಹಕಾರ, ಜಾಗತಿಕ ಅಭಿವೃದ್ಧಿ ಹಾಗೂ ಸೇವೆಗೆ ಪ್ರಧಾನಿ ಮೋದಿಯವರು ನೀಡಿದ ಕೊಡುಗೆಗಳನ್ನು ಗುರುತಿಸಿ ಸಿಯೋಲ್ ಶಾಂತಿ ಪ್ರಶಸ್ತಿ ನೀಡಲಾಗಿದೆ. ಪ್ರಧಾನಿಯವರು ಪ್ರಶಸ್ತಿಯನ್ನು ದೇಶದ 130 ಕೋಟಿ ಜನತೆಗೆ ಸಮರ್ಪಿಸಿದ್ದಾರೆ.

“ನನಗೆ ಸಿಯೋಲ್ ಶಾಂತಿ ಪ್ರಶಸ್ತಿ ನೀಡಿ ಗೌರವಿಸಿದ್ದೀರಿ. ಈ ಪ್ರಶಸ್ತಿ ನನಗೆ ಮಾತ್ರವಲ್ಲದೆ ಭಾರತದ ಜನರಿಗೆ ಸೇರಿದೆ. ಕಳೆದ ವರ್ಷಗಳಲ್ಲಿ ಭಾರತ ಕಂಡ ಯಶಸ್ಸಿಗೆ ಈ ಪ್ರಶಸ್ತಿ ಸಲ್ಲುತ್ತದೆ. ಮತಾತ್ಮ ಗಾಂಧಿ ಅವರ ಜನ್ಮ ದಿನದಂದೇ ಈ ಪ್ರಶಸ್ತಿ ಸಿಕ್ಕಿರುವುದು ಪ್ರಶಸ್ತಿಯನ್ನು ಇನ್ನಷ್ಟು ವಿಶೇಷವಾಗಿಸಿದೆ” ಅಂತ ಪ್ರಧಾನಿ ಮೋದಿ ಹೇಳಿದ್ದಾರೆ. ಕಳೆದ 14 ವರ್ಷಗಳಿಂದ ದಕ್ಷಿಣ ಕೊರಿಯಾ ಸಿಯೋಲ್ ಶಾಂತಿ ಪ್ರಶಸ್ತಿ ನೀಡುತ್ತಿದೆ.

LEAVE A REPLY

Please enter your comment!
Please enter your name here