Homeದೇಶ-ವಿದೇಶ‘ಮಹಾತ್ಮ ಗಾಂಧೀಜಿ 73ನೇ ಪುಣ್ಯತಿಥಿಗೆ ರಾಜ್‌ಘಾಟ್‌ನಲ್ಲಿ ಪ್ರಧಾನಿ ಮೋದಿ ನಮನ’

‘ಮಹಾತ್ಮ ಗಾಂಧೀಜಿ 73ನೇ ಪುಣ್ಯತಿಥಿಗೆ ರಾಜ್‌ಘಾಟ್‌ನಲ್ಲಿ ಪ್ರಧಾನಿ ಮೋದಿ ನಮನ’

ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 73ನೇ ಪುಣ್ಯತಿಥಿ ಅಂಗವಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿ ಗಣ್ಯರು ಸ್ಮರಿಸಿದ್ದಾರೆ.

ಮಹಾತ್ಮಾ ಗಾಂಧಿಯವರ ಶಾಂತಿ, ಅಹಿಂಸೆ, ಸರಳ, ಮಾನವೀಯತೆಯ ಜೀವನ ಮತ್ತು ಸಂದೇಶಗಳು ದಾರಿದೀಪ ಎಂದು ರಾಮನಾಥ್ ಕೋವಿಂದ್ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ಮೋದಿ ಈ ಕುರಿತು ಟ್ವೀಟ್ ಮಾಡಿ, ಮಹಾತ್ಮ ಗಾಂಧಿಯವರ ಪುಣ್ಯತಿಥಿಯಂದು ಅವರಿಗೆ ಗೌರವ ನಮನಗಳು. ಅವರ ಮಾರ್ಗದರ್ಶನ, ತತ್ವಗಳು ಲಕ್ಷಾಂತರ ಮಂದಿಗೆ ಪ್ರೇರಣೆ. ಇಂದು ಹುತಾತ್ಮ ದಿನದಂದು ಸ್ವಾತಂತ್ರ್ಯಕ್ಕೆ ಹೋರಾಡಿದ ಮಹಿಳೆಯರು ಮತ್ತು ಪುರುಷರನ್ನು ನೆನೆಸಿಕೊಳ್ಳೋಣ ಎಂದು ಪ್ರಧಾನಿ ಹೇಳಿದ್ದಾರೆ.

ಅಹಿಂಸೆಗೆ ಮಹತ್ವ ನೀಡಿ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿಯಾದ ಮಹಾತ್ಮ ಗಾಂಧಿಯ ಹತ್ಯೆ ಜನವರಿ 30, 1948ರಲ್ಲಿ ನಡೆದಿತ್ತು. ಅವರ ಹತ್ಯೆಯಾದ ದಿನವನ್ನು ದೇಶದಲ್ಲಿ ಹುತಾತ್ಮ ದಿನ ಅಥವಾ ಶಾಹೀದ್ ದಿವಸ ಎಂದು ಪ್ರತಿವರ್ಷ ಆಚರಿಸಲಾಗುತ್ತದೆ. ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತೆತ್ತ ಸ್ವಾತಂತ್ರ್ಯ ಹೋರಾಟಗಾರರಿಗೆ ಈ ದಿನ ಗೌರವ ನಮನ ಸಲ್ಲಿಸುತ್ತಾರೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments