ಬೆಂಗಳೂರು: ಹೊಸ ವರ್ಷವನ್ನು ಅದ್ದೂರಿಯಾಗಿ ಆಚರಣೆ ಮಾಡಬೇಕು ಅನ್ನುತ್ತಿದ್ದವರಿಗೆ, ರೂಪಾಂತರ ಕೊರೋನಾ ಶಾಕ್ ನೀಡಿದೆ. ಹೀಗಾಗಿ ನ್ಯೂ ಇಯರ್ ಮಾಡದಂತೆ ಮಾರ್ಗ ಸೂಚಿಯ ಜೊತೆಗೆ ಹೊರ ದೇಶಗಳಿಂದ ಬರುವ ಜನರ ಮೇಲೆ ಸರ್ಕಾರ ಹದ್ದಿನ ಕಣ್ಣಿಟ್ಟಿದೆ.
ಕೊರೋನಾ ಹೊಸ ರೂಪ ಪಡೆದು ಜನರನ್ನು ಕಾಡಿಸುತ್ತಿದೆ. ಹೀಗಾಗಿ ದೇಶದಲ್ಲಿ ಮುಂಜಾಗ್ರತೆ ವಹಿಸಬೇಕಾಗಿದೆ. ಅದರಲ್ಲೂ ಹೊರ ದೇಶಗಳಿಂದ ಬರುತ್ತಿರುವ ಪ್ರಯಾಣಿಕರನ್ನು ಸಂಪೂರ್ಣವಾಗಿ ಪರಿಕ್ಷೀಸಿದ ಬಳಿಕವೂ ಅವರ ಮೇಲೆ ತೀವ್ರ ನಿಗಾ ಇಡಲಾಗಿದೆ. ಹೀಗಾಗಿ ಯುಕೆಯಿಂದ ಬಂದ ಸುಮಾರು 1637 ಪ್ರಯಾಣಿಕರ ಟೆಸ್ಟ್ ಮಾಡಲಾಗಿದ್ದು, ಅದರಲ್ಲಿ 14 ಜನರಿಗೆ ಕೊರೋನಾ ಇರೋದು ದೃಢವಾಗಿದೆ. ಈ ಹದಿನಾಲ್ಕು ಜನರನ್ನು ನಿಮ್ಹಾನ್ಸ್ ನಲ್ಲಿ ಹೆಚ್ಚಿನ ಪರೀಕ್ಷೆಗೆ ಕಳುಹಿಸಲಾಗಿದೆ. ಈಗಾಗಲೇ 17 ರೀತಿಯ ವೈರಾಣುಗಳ ಪರೀಕ್ಷೆ ನಡೆಯುತ್ತಿದೆ. ಇದಕ್ಕೆ 48 ಗಂಟೆ ಸಮಯ ಬೇಕಾಗುತ್ತೆ. ಇವರಲ್ಲಿ ಹೊಸ ಪ್ರಭೇದದ ವೈರಸ್ ಕಂಡು ಬಂದರೆ ನಿಮ್ಹಾನ್ಸ್ನಿಂದ ನೇರವಾಗಿ ಕೇಂದ್ರ ಸರ್ಕಾರಕ್ಕೆ ವರದಿ ಹೋಗಿ ಬಳಿಕ ಐಸಿಎಂಆರ್ ಮಾಹಿತಿ ಬಿಡುಗಡೆ ಮಾಡುತ್ತದೆ ಆರೋಗ್ಯ ಇಲಾಖೆ ಸಚಿವ ಕೆ.ಸುಧಾಕರ್ ಹೇಳಿದ್ದಾರೆ.
ಇನ್ನೂ ಹೊಸ ಕೊರೋನಾ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪುಲ್ ಅಲರ್ಟ್ ಆಗಿದೆ. ಹೊಸ ವರ್ಷ ಬರುತ್ತಿರುವುದರಿಂದ ಮೊಜು ಮಸ್ತಿ ಪಾರ್ಟಿಗಳಿಗೆ ಕಡಿವಾಣ ಹಾಕಿದೆ. ಆದರೂ ಕದ್ದು ಮುಚ್ಚಿ ಪಾರ್ಟಿ ಮಾಡಬಹುದು ಅಂತ ನೈಟ್ ಕರ್ಪ್ಯೂ ಹೇರಲಾಗಿತ್ತು. ಆದರೆ ಬಾರಿ ಟೀಕೆಗಳು ವ್ಯಕ್ತವಾದರಿಂದ ಅದನ್ನೂ ಹಿಂದಕ್ಕೆ ಪಡಿದಿತ್ತು. ಹೀಗಾಗಿ ವರ್ಷಾಚರಣೆಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲು ಆರೋಗ್ಯ ಮತ್ತು ಗೃಹ ಇಲಾಖೆಯ ಅಧಿಕಾರಿಗಳ ಮಧ್ಯೆ ಚರ್ಚೆ ನಡೆಯುತ್ತಿದೆ. ಸೋಮವಾರ ಹೊಸ ಮಾರ್ಗಸೂಚಿ ಬಿಡುಗಡೆಯಾಗಲಿದೆ.