Monday, September 26, 2022
Powertv Logo
Homeದೇಶಕಂಗಾಲಾಗಿದ್ದ PhonePe ಬಳಕೆದಾರರಿಗೆ ಗುಡ್​​ ನ್ಯೂಸ್​..!

ಕಂಗಾಲಾಗಿದ್ದ PhonePe ಬಳಕೆದಾರರಿಗೆ ಗುಡ್​​ ನ್ಯೂಸ್​..!

ನವದೆಹಲಿ : ರಿಸರ್ವ್​ ಬ್ಯಾಂಕ್​ ಆಫ್​ ಇಂಡಿಯಾ , YesBankನ ಮೇಲೆ ನಿರ್ಬಂಧ ಹೇರಿ ಸೂಪರ್ಸೀ​​ಡ್​  ಮಾಡಿದ ಬೆನ್ನಲ್ಲೇ, ಯಸ್​ ಬ್ಯಾಂಕ್ ಜೊತೆ ಆನ್​ಲೈನ್ ವ್ಯವಸ್ಥೆಯೊಂದಿಗೆ ಜೋಡಣೆಯಾಗಿದ್ದ ಫೋನ್​ ಪೇ ವಹಿವಾಟು ಇದ್ದಕ್ಕಿದ್ದಂತೆ ಸ್ಥಗಿತಗೊಂಡಿತ್ತು. ಇದರಿಂದ ಗ್ರಾಹಕರು ಸಂಪೂರ್ಣವಾಗಿ ಕಂಗಾಲಾಗಿದ್ದರು.

 ಇದೀಗPhonePe ತಂಡದ ಸತತ ಪರಿಶ್ರಮದ ಬಳಿಕ 24 ಗಂಟೆಗಳ ಕಾಲ ಸ್ಥಗಿತಗೊಂಡಿದ್ದ ಫೋನ್​ಪೇ ಮತ್ತೆ ತನ್ನ ವಹಿವಾಟನ್ನು ಮುಂದುವರೆಸಿದೆ. ಈ ಬಗ್ಗೆ ಟ್ವೀಟ್​ ಮೂಲಕ ಸ್ಪಷ್ಟನೆ ನೀಡಿರುವ ಫೋನ್​ಪೇ ಸ್ಥಾಪಕರಲ್ಲೊಬ್ಬರಾದ ರಾಹುಲ್​ ಚಾರಿ ‘ಕಠಿಣ ಸವಾಲುಗಳನ್ನು ಎದುರಿಸಿದ ಫೋನ್​ಪೇ ಇದೀಗ ಮತ್ತೆ ಗ್ರಾಹಕರಿಗೆ ಲಭ್ಯವಿದೆ. ಯುಪಿಐ ಅನ್ನು ಫೋನ್​ಪೇನಲ್ಲಿ ಮರುಸ್ಥಾಪಿಸಲಾಗಿದ್ದು, ಗ್ರಾಹಕರು ಎಂದಿನಂತೆ ಆನ್​ಲೈನ್ ಹಣ ವರ್ಗಾವಣೆ ಮಾಡಬಹುದು” ಎಂದಿದ್ದಾರೆ. ಈ ಮೂಲಕ ಫೋನ್​ಪೇ ಗ್ರಾಹಕರಲ್ಲಿ ಮೂಡಿದ್ದ ಆತಂಕ ನಿವಾರಣೆಯಾಗಿದೆ. 

 

 

LEAVE A REPLY

Please enter your comment!
Please enter your name here

- Advertisment -

Most Popular

Recent Comments