ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ` ರಂಗಿತರಂಗ’ ಖ್ಯಾತಿಯ ನಿರ್ದೇಶಕ ಅನೂಪ್ ಭಂಡಾರಿ ಕಾಂಬಿನೇಷನ್ನ ` ಫ್ಯಾಂಟಮ್’ ಲೋಕಕ್ಕೆ ಪನ್ನಾ ಪಾತ್ರಧಾರಿ ಎಂಟ್ರಿಯಾಗಿದೆ..! ಈ ಪಾತ್ರಕ್ಕೆ ಹೊಸ ನಟಿ ಆಯ್ಕೆಯಾಗಿದ್ದು, ಅವರ ಫಸ್ಟ್ ಲುಕ್ ರಿವೀಲ್ ಆಗಿದೆ.
ಹೌದು, ಫ್ಯಾಂಟಮ್ ಸಿನಿಮಾ ದಿನೇ ದಿನೇ ಕುತೂಹಲವನ್ನು ಹೆಚ್ಚಿಸುತ್ತಿದೆ. ಲಾಕ್ಡೌನ್ ತೆರವಿನ ಬಳಿಕ ಹೈದರಾಬಾದ್ನಲ್ಲಿ ಶೂಟಿಂಗ್ನಲ್ಲಿ ಬ್ಯುಸಿ ಇರುವ ಚಿತ್ರತಂಡ ಒಂದೊಂದೇ ಪಾತ್ರಗಳನ್ನು ಪರಿಚಯ ಮಾಡಿಕೊಡುತ್ತಿದೆ. ಈಗಾಗಲೇ ಕಿಚ್ಚ ಸುದೀಪ್ ಅವರ ವಿಕ್ರಾಂತ್ ರೋಣಾ, ನಿರೂಪ್ ಭಂಡಾರಿ ಅವರ ಸಂಜೀವ್ ಗಾಂಭೀರ ಪಾತ್ರದ ಪೋಸ್ಟರ್ ಬಿಡುಗಡೆ ಮಾಡಿರುವ ಫ್ಯಾಂಟಮ್ ಟೀಮ್ ಈಗ ಪನ್ನಾ ಪಾತ್ರಧಾರಿಯ ಫಸ್ಟ್ ಲುಕ್ ಬಿಡುಗಡೆ ಮಾಡಿದೆ..!
ಇನ್ನು ಪನ್ನಾ ಪಾತ್ರಕ್ಕೆ ಬಣ್ಣ ಹಚ್ಚುತ್ತಿರುವವರು ನೀತಾ ಅಶೋಕ್. ಇವರು ಫ್ಯಾಂಟಮ್ ಸಿನಿಮಾ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಡ್ತಿದ್ದಾರೆ… ಮೊದಲ ಸಿನಿಮಾದಲ್ಲೇ ಒಂದೊಳ್ಳೆ ಅವಕಾಶ ಪಡೆದ ಕೀರ್ತಿ ನೀತಾರದ್ದಾಗಿದೆ.
ಫ್ಯಾಂಟಮ್ ಚಿತ್ರದ ಒಂದು ಸುಂದರವಾದ ಪಾತ್ರ ಅಪರ್ಣಾ ಬಲ್ಲಾಳ್ ಅಥವಾ ಪನ್ನಾ. ಆಕೆ ಬಾಂಬೆಯಲ್ಲೇ ಹುಟ್ಟಿ ಬೆಳೆದವಳಾದ್ದರಿಂದ ಅವಳಿಗೆ ಹಿಂದಿ ಮಿಶ್ರಿತ ಕನ್ನಡ ಮಾತನಾಡುವ ಅಭ್ಯಾಸ. ತುಂಬ ಕುತೂಹಲ ಮತ್ತು ಸಾಹಸ ಪ್ರವೃತ್ತಿ ಇರುವಂತಹ ಹುಡುಗಿ ಅವಳು. ಈ ಪಾತ್ರವನ್ನು ನೀತಾ ಅಶೋಕ್ ನಿರ್ವಹಿಸುತ್ತಿದ್ದಾರೆ. ಅವರಿಗೆ ಫ್ಯಾಂಟಮ್ ಜಗತ್ತಿಗೆ ಸ್ವಾಗತ’ ಅಂತ ಡೈರೆಕ್ಟರ್ ಅನೂಪ್ ಭಂಡಾರಿ ಪರಿಚಯ ಮಾಡಿಕೊಟ್ಟಿದ್ದಾರೆ.
Presenting @neethaofficial as #AparnaBallal Aka #Panna
Welcome Neetha to#TheWorldofPhantom#PhantomWelcomesNeetha #NeethaAshokAsPanna pic.twitter.com/e7rqA51Skr— Kichcha Sudeepa (@KicchaSudeep) August 20, 2020