Saturday, October 1, 2022
Powertv Logo
Homeರಾಜ್ಯಪೊಲೀಸರಿಗೆ ಸಹಾಯ ಮಾಡಿದ್ದಕ್ಕೆ ಹಿಗ್ಗಾ ಮುಗ್ಗಾ ಥಳಿಸಿ ಪುಂಡಾಟಿಕೆ ಮೆರೆದ PFI ಕಾರ್ಯಕರ್ತರು

ಪೊಲೀಸರಿಗೆ ಸಹಾಯ ಮಾಡಿದ್ದಕ್ಕೆ ಹಿಗ್ಗಾ ಮುಗ್ಗಾ ಥಳಿಸಿ ಪುಂಡಾಟಿಕೆ ಮೆರೆದ PFI ಕಾರ್ಯಕರ್ತರು

ಬಳ್ಳಾರಿ: ಪಿಎಫ್ಐ ಮುಖಂಡರನ್ನ ಎನ್ಐಎ(ರಾಷ್ಟ್ರೀಯ ತನಿಖಾ ದಳ) ವಶಕ್ಕೆ ಪಡೆದದನ್ನ ಖಂಡಿಸಿ ನಿನ್ನೆ ಸಂಜೆ ಬಳ್ಳಾರಿಯ ರಾಯಲ್ ವೃತ್ತದಲ್ಲಿ ನಡೆಸುತ್ತಿದ್ದ ಪ್ರತಿಭಟನೆ ವೇಳೆ ಪಿಎಫ್ಐ ಪುಂಡಾಟಿಕೆ ಮರೆದಿದೆ.

ಇದ್ದಕ್ಕಿದ್ದಂತೆ ರಾಯಲ್ ವೃತ್ತದಲ್ಲಿ ನೂರಾರು ಪಿಎಫ್ಐ ಕಾರ್ಯಕರ್ತರು ಪ್ರತಿಭಟನೆ ನಡೆಸುವ ವೇಳೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಅರೂಣ್ ರೆಡ್ಡಿ ಎನ್ನುವ ಯುವಕನಿಗೆ ಪಿಎಫ್ಐ ಕಾರ್ಯಕರ್ತರು ಅಟ್ಟಾಡಿಸಿ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.

ಯುವಕ ಅರೂಣ್ ರೆಡ್ಡಿ ಪೊಲಿಸರ ಜೊತೆ ಸೇರಿ ಬ್ಯಾರಿಕೇಡ್ ತೆರವು ಮಾಡುವುದು, ಪ್ರತಿಭಟನಾಕಾರರನ್ನ ಪ್ರತಿಭಟನೆ ನಿಲ್ಲಿಸಿ ಅಂತಾ ಹೇಳಿದ್ದಾನೆ‌. ಈ ವೇಳೆ ವಾಗ್ವಾದ ಉಂಟಾಗಿ ರೊಚ್ಚಿಗೆದ್ದ ಪ್ರತಿಭಟನಾಕಾರರು ಯುವಕನನ್ನ ಗುಂಪಿನಲ್ಲಿ ಎಳೆದುಕೊಂಡು ಹೋಗಿ ಮನಸೋ ಇಚ್ಚೇಯಾಗಿ ಹಲ್ಲೆ ಮಾಡಿದ್ದಾರೆ.

ಬಳಿಕ ಪೊಲೀಸರು ಉದ್ರಿಕ್ತರಿಂದ ಯುವಕನನ್ನ ರಕ್ಷಿಸಲು ಮಾಡಲು ಮುಂದಾದರೂ ಬಿಡದೇ ಯುವಕನ್ನ ಅಟ್ಟಾಡಿಸಿ ಹಲ್ಲೆಗೈದಿದ್ದಾರೆ. ಘಟನೆಯ ತೀವ್ರತೆ ಅರಿತ ಪೊಲೀಸರು ಯುವಕ ಅರೂಣ್ ರೆಡ್ಡಿಯನ್ನ ಕೂಡಲೇ ಪ್ರತಿಭಟನಾಕಾರರಿಂದ ರಕ್ಷಿಸಿ, ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

- Advertisment -

Most Popular

Recent Comments