Saturday, October 1, 2022
Powertv Logo
Homeದೇಶಮದುವೆಗೆ ಪೆಟ್ರೋಲ್ & ಡೀಸೆಲ್ ಗಿಫ್ಟ್​

ಮದುವೆಗೆ ಪೆಟ್ರೋಲ್ & ಡೀಸೆಲ್ ಗಿಫ್ಟ್​

ತಮಿಳುನಾಡಿನ ನವದಂಪತಿಗೆ ಗೆಳೆಯರು ಪೆಟ್ರೋಲ್ ಮತ್ತು ಡೀಸೆಲ್​ನ ಒಂದೊಂದು ಬಾಟಲಿಗಳ ಉಡುಗೊರೆ ನೀಡಿದ್ದಾರೆ. ಈ ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಚೆಂಗಲಪಟ್ಟು ಜಿಲ್ಲೆಯ ಚೆಯ್ಯೂರ್ ಗ್ರಾಮದಲ್ಲಿ ನಡೆದ ಮದುವೆ ವೇಳೆ ದಂಪತಿಗೆ ಗೆಳೆಯರು ಪೆಟ್ರೋಲ್-ಡೀಸೆಲ್ ಇದ್ದ ಬಾಟಲಿ ಕೊಟ್ಟು ಶುಭ ಹಾರೈಸಿದರು. ದೇಶದ ಇತರೆಲ್ಲ ರಾಜ್ಯಗಳಂತೆ ತಮಿಳುನಾಡಿನಲ್ಲಿಯೂ ಕಳೆದ 15 ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಒಂಭತ್ತು ರೂಪಾಯಿಗೂ ಹೆಚ್ಚಾಗಿವೆ.

ಚೆನ್ನೈ ನಗರದಲ್ಲಿ ಪ್ರಸ್ತುತ ಒಂದು ಲೀಟರ್​ ಪೆಟ್ರೋಲ್​ಗೆ 110.85 ಹಾಗೂ ಡೀಸೆಲ್ 100.94ರಂತೆ ಮಾರಾಟವಾಗುತ್ತಿದೆ. ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 111.16 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 94.86 ರೂಪಾಯಿ ದಾಖಲಾಗಿದೆ. ಬೆಂಗಳೂರಿನ ಬಹುತೇಕ ಪೆಟ್ರೋಲ್ ಬಂಕ್​ಗಳಲ್ಲಿ ನೋ ಸ್ಟಾಕ್ ಬೋರ್ಡ್ ಹಾಕಲಾಗಿದೆ. ಸಮಯಕ್ಕೆ ಸರಿಯಾಗಿ ಪೆಟ್ರೋಲ್, ಡೀಸೆಲ್ ಸಿಗದೆ ವಾಹನ ಸವಾರರು ಪರದಾಡುತ್ತಿದ್ದಾರೆ.

- Advertisment -

Most Popular

Recent Comments