Home ರಾಜ್ಯ ಕೆಜಿಎಫ್​ನಲ್ಲಿ ನೂತನ ಗಣಿಗಾರಿಕೆಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್!

ಕೆಜಿಎಫ್​ನಲ್ಲಿ ನೂತನ ಗಣಿಗಾರಿಕೆಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್!

ಕೋಲಾರ: ಜಿಲ್ಲೆಯ ಕೆಜಿಎಫ್ ನಗರಕ್ಕೆ ಮತ್ತೆ ಶುಕ್ರದೆಸೆ ಹತ್ತಿರವಾಗಿದೆ. ರಾಜ್ಯ ಸರ್ಕಾರವು ಕೆಜಿಎಫ್​ನ ವಿವಿಧ ಖನಿಜಗಳ ಗಣಿಗಾರಿಕೆ ನಡೆಸುವ ಸಾಧ್ಯತೆಯ ಬಗ್ಗೆ ಸರ್ವೇ ನಡೆಸುವಂತೆ ಕೇಂದ್ರ ಸರ್ಕಾರವು ಸೂಚಿಸಿದೆ. ಗಣಿಗಾರಿಕೆ ನಡೆಸಲು ಸಾಧ್ಯವಾಗದಿದ್ದಲ್ಲಿ ಕೆಜಿಎಫ್​ನ ಸಾವಿರಾರು ಎಕರೆ ಖಾಲಿ ಜಾಗದಲ್ಲಿ ಕೈಗಾರಿಕೆ ಪಾರ್ಕ್ ಸ್ಥಾಪಿಸಲು ಕ್ರಮ ಜರುಗಿಸುವಂತೆ ರಾಜ್ಯ ಸರ್ಕಾರಕ್ಕೆ ಅವಕಾಶ ಕೊಟ್ಟಿದೆ.

ಜಿಲ್ಲೆಯ ಕೆಜಿಎಫ್ ನಗರದ ಚಿನ್ನದ ಗಣಿಗಳಿಗೆ ನೂರೈವತ್ತು ವರ್ಷಗಳ ಇತಿಹಾಸವಿದೆ. ಟನ್​ಗಟ್ಟಲೆ ಚಿನ್ನವನ್ನು ಜಗತ್ತಿಗೆ ಮೊಗೆದು ಕೊಟ್ಟ ಕೆಜಿಎಫ್​ನ ಚಿನ್ನದ ಗಣಿಗಳನ್ನು17 ವರ್ಷಗಳ ಹಿಂದೆ ಬಂದ್ ಮಾಡಲಾಗಿತ್ತು. ಚಿನ್ನದ ಉತ್ಪಾದನೆಯು ನಷ್ಟದ ಉದ್ದಿಮೆ ಅನ್ನೋ ಕಾರಣಕ್ಕಾಗಿ ಬಿಜಿಎಂಎಲ್ ಕಾರ್ಖಾನೆಗೆ ಬೀಗ ಜಡಿಯಲಾಯ್ತು. ಅಂದಿನಿಂದಲೂ ನಿರಾಶೆಯ ಕಾರ್ಮೋಡದಲ್ಲಿದ್ದ ಕೆಜಿಎಫ್ ನಗರಕ್ಕೆ ಇದೀಗ ಮತ್ತೆ ಆಶಾದಾಯಕ ಕಾಲ ಬಂದಿದೆ.

ಶುಕ್ರವಾರ ಸಿಎಂ ಯಡಿಯೂರಪ್ಪ ಅವ್ರ ಅಧ್ಯಕ್ಷತೆಯಲ್ಲಿ ಕೇಂದ್ರದ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಹಾಗೂ ಸಚಿವಾಲಯದ ಹಿರಿಯಾಧಿಕಾರಿಗಳು ಸೇರಿದ್ದ ಸಭೆಯಲ್ಲಿ ಈ ವಿಚಾರದ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಕಂದಾಯ ಸಚಿವ ಅಶೋಕ, ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಭೆಯಲ್ಲಿನ ಮಾಹಿತಿಯ ಪ್ರಕಾರ, ಕೆಜಿಎಫ್ ಗಣಿ ಪ್ರದೇಶ ಎನಿಸಿರುವ ಬಿಜಿಎಂಎಲ್ ಕಾರ್ಖಾನೆಗೆ ಸೇರಿದ 12 ಸಾವಿರ ಎಕರೆಯಷ್ಟು ಜಾಗ ಖಾಲಿಯಿದೆ. ಪ್ರಸ್ತುತ ಬಂದ್ ಮಾಡಿರುವ ಚಿನ್ನದ ಗಣಿ ಪ್ರದೇಶವನ್ನು ಹೊರತುಪಡಿಸಿ ಉಳಿದ ಸಾವಿರಾರು ಖಾಲಿ ಜಾಗದಲ್ಲಿ ಚಿನ್ನವೂ ಸೇರಿದಂತೆ ಯಾವುದೇ ಖನಿಜದ ಲಭ್ಯತೆಯ ಬಗ್ಗೆ ಸರ್ವೇ ನಡೆಸಿ ಆರು ತಿಂಗಳಲ್ಲಿ ವರದಿ ಕೊಡಬೇಕು ಅಂತ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಲಾಯ್ತು.

ಪ್ರಸ್ತಾವಿನ ಖಾಲಿ ಭೂಮಿಯಲ್ಲಿ ಖನಿಜ ಇರುವುದು ಖಚಿತವಾದಲ್ಲಿ ಗಣಿಗಾರಿಕೆ ನಡೆಸಲು ಹರಾಜು ಮಾಡುವ ಅಧಿಕಾರ ಮತ್ತು ಅದರ ರಾಯಧನವನ್ನು ಪಡೆದುಕೊಳ್ಳುವ ಅಧಿಕಾರವು ರಾಜ್ಯ ಸರ್ಕಾರಕ್ಕೆ ಇರುತ್ತದೆ ಅಂತ ಇಂದಿನ ಸಭೆಯಲ್ಲಿ ಸ್ಪಷ್ಟಪಡಿಸಲಾಯ್ತು. ಹಾಗೆಯೇ, ಖನಿಜ ಸಿಗದಿದ್ದಲ್ಲಿ ಆ ಪ್ರದೇಶವನ್ನು ಕೈಗಾರಿಕಾ ಪಾರ್ಕ್ ಆಗಿ ಅಭಿವೃದ್ದಿ ಮಾಡುವುದಕ್ಕೆ ರಾಜ್ಯ ಸರ್ಕಾರ ನಿರ್ಧರಿಸಬಹುದು ಎಂದು ತಿಳಿಸಲಾಗಿದೆ.

-ಆರ್.ಶ್ರೀನಿವಾಸಮೂರ್ತಿ

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments