ಕೋಲಾರ: ರಾಜ್ಯದಲ್ಲಿ ಬಾರ್ ಮತ್ತು ರೆಸ್ಟೋರೆಂಟ್ಗಳನ್ನು ಪೂರ್ಣ ಪ್ರಮಾಣದಲ್ಲಿ ಶುರು ಮಾಡಲು ಅನುಮತಿ ಕೊಡುವಂತೆ ಮದ್ಯ ಮಾರಾಟಗಾರರು ಆಗ್ರಹಿಸಿದ್ದಾರೆ. ಆರು ತಿಂಗಳಿನಿಂದ ಆರ್ಥಿಕ ಮುಗ್ಗಟ್ಟಿನಲ್ಲಿರುವ ಬಾರ್ಗಳ ಮಾಲಿಕರ ನೆರವಿಗೆ ಬರಬೇಕು ಅಂತ ಅವ್ರು ಮನವಿ ಮಾಡಿದ್ದಾರೆ. ಕೊವಿಡ್ ಮಾರ್ಗಸೂಚಿಯ ಅನ್ವಯ ನಡೆದುಕೊಳ್ಳುವುದಾಗಿ ಮದ್ಯ ಮಾರಾಟಗಾರರು ಭರವಸೆ ಕೊಟ್ಟಿದ್ದಾರೆ.
ಕೊರೋನಾ ಕಾರಣಕ್ಕಾಗಿ ರಾಜ್ಯದಲ್ಲಿ ಜಾರಿಗೆ ಬಂದ ಪೂರ್ಣಪ್ರಮಾಣದ ಲಾಕ್ಡೌನ್ ಅವಧಿಯ ಮೂರು ತಿಂಗಳವರೆಗೂ ಬಾರ್ಗಳನ್ನು ಮುಚ್ಚಲಾಗಿತ್ತು. ಆ ನಂತ್ರ ಸರ್ಕಾರದಿಂದ ಘೋಷಣೆಯಾದ ಅನ್ಲಾಕ್ ಅವಧಿಯಲ್ಲಿ ರೆಸ್ಟೋರೆಂಟ್ ಸೇವೆಯನ್ನು ನಿರ್ಬಂಧಿಸಿ ಮದ್ಯವನ್ನು ಪಾರ್ಸೆಲ್ ಕೊಡುವುದಕ್ಕೆ ಬಾರ್ಗಳವರಿಗೆ ಅನುಮತಿ ಕೊಡಲಾಯ್ತು. ತಿಂಡಿ-ತಿನಿಸುಗಳ ಸೇವೆಯಿಲ್ಲದೆ ಬಾರ್ಗಳನ್ನು ನಡೆಸುವುದು ಕಷ್ಟ ಅನ್ನೋದು ಆ ಸಮಯದಲ್ಲಿಯೇ ಮಾಲಿಕರ ಅರಿವಿಗೆ ಬಂದಿದೆ. ಪ್ರಸ್ತುತ ಸರ್ಕಾರವು ಘೋಷಿಸಿರುವ ಅನ್ಲಾಕ್-4 ರಲ್ಲಿ ಹಲವಾರು ವ್ಯಾಪಾರಗಳಿಗೆ ಅವಕಾಶವನ್ನು ಕೊಡಲಾಗಿದೆ. ಆದ್ರೆ, ಬಾರ್ಗಳ ಜೊತೆಗೆ ರೆಸ್ಟೋರೆಂಟ್ಗಳ ಸೇವೆಯನ್ನು ಶುರು ಮಾಡಲು ಅನುಮತಿಸಬೇಕು ಅನ್ನೋದು ಬಾರ್ ಮಾಲಿಕರ ಮನವಿಯಾಗಿದೆ. ಕೊವಿಡ್ ಮಾರ್ಗಸೂಚಿಯಂತೆ ಅನುಸರಿಸುತ್ತೇವೆ ಅನ್ನೋದು ಬಾರ್ ಮಾಲಿಕರ ಮನವಿಯಾಗಿದೆ.
ಒಟ್ನಲ್ಲಿ, ಸರ್ಕಾರದ ನಿರ್ದೇಶನಕ್ಕಾಗಿ ಎದುರು ನೋಡುತ್ತಿರುವ ಬಾರ್ ಮತ್ತು ರೆಸ್ಟೋರೆಂಟ್ ಮಾಲಿಕರ ಪ್ರಯತ್ನ ಸಫಲವಾಗುತ್ತ ಅಂತ ಕಾದುನೋಡಬೇಕಾಗಿದೆ.
-ಆರ್.ಶ್ರೀನಿವಾಸಮೂರ್ತಿ