ಬೆಂಗಳೂರು: ಸಾರಿಗೆ ನೌಕರರು ತಮ್ಮ ಒಂಬತ್ತು ಬೇಡಿಕೆಗಳನ್ನು ಈಡೇರಿಸುವಂತೆ ಇಂದು ಸರ್ಕಾರದ ವಿರುದ್ಧ ಸಿಡಿದ್ದೆದಿದ್ದಾರೆ. ಸಾರಿಗೆ ಮುಷ್ಕರದಿಂದ ಜನರು ಪರದಾಡುವಂತಾಗಿದೆ. ಬಸ್ ಗಳಿಲ್ಲದೇ ಪ್ರಯಾಣಿಕರು ಮೆಟ್ರೋ ಪ್ರಯಾಣದತ್ತ ಹೊರಟಿದ್ದಾರೆ. ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ.
ಕೆ.ಆರ್ ಮಾರ್ಕೆಟ್, ಸಂಪಿಗೆ ರಸ್ತೆ, ಎಂಜಿ ರೋಡ್ ಮೆಟ್ರೋದಲ್ಲಿ ಸಾಮಾನ್ಯ ದಿನಕ್ಕಿಂತ ಮೂರು ಪಟ್ಟು ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಾಗಿದೆ. ಎರಡು ನಿಮಿಷಕ್ಕೊಂದು ಖಾಸಗಿ ಬಸ್ ಬಿಟ್ಟರೂ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ.