Monday, January 17, 2022
Powertv Logo
Homeರಾಜ್ಯಓಮಿಕ್ರಾನ್​ ಭಯ : ಲಸಿಕೆ ಪಡೆಯಲು ಮುಗಿಬಿದ್ದ ಜನರು

ಓಮಿಕ್ರಾನ್​ ಭಯ : ಲಸಿಕೆ ಪಡೆಯಲು ಮುಗಿಬಿದ್ದ ಜನರು

ಚಿಕ್ಕೋಡಿ : ದೇಶದಲ್ಲಿ ಒಮಿಕ್ರೋನ್ ಹೊಸ ಕೊರೊನಾ ತಳಿಯ ಆತಂಕ ಹಿನ್ನೆಲೆ ಚಿಕ್ಕೋಡಿಯ ಜಿಲ್ಲಾಸ್ಪತ್ರೆಯಲ್ಲಿ ಲಸಿಕೆ ತೆಗೆದುಕೊಳ್ಳಲು ಸಾರ್ವಜನಿಕರು ಮುಗಿಬಿಳ್ಳುತ್ತಿದ್ದಾರೆ.

ಪಟ್ಟಣದ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಲಸಿಕೆ ಪಡೆದುಕೊಳ್ಳಲು ಜನರು ಸಾಲು ಸಾಲಾಗಿ ನಿಂತಿದ್ದಾರೆ.ಹೊರದೇಶಗಳಲ್ಲಿ ಒಮಿಕ್ರೋನ್ ರೂಪಾಂತರಿ ಕೊರೊನಾ ಹೊಸ ತಳಿಯ ಆತಂಕ ಹೆಚ್ಚಾದ ಹಿನ್ನೆಲೆ ರಾಜ್ಯ ಸರ್ಕಾರ ಗಡಿಭಾಗದಲ್ಲಿ ಹೈ ಅಲರ್ಟ್ ಘೋಷಣೆ ಮಾಡಿದೆ‌.ಕೊರೊನಾ ಲಸಿಕೆ ಮತ್ತಷ್ಟು ಹೆಚ್ಚಿಸಬೇಕೆಂದು ಆದೇಶ ಹೊರಡಿಸಿದೆ.ಆದ್ರೆ,ಕಳೆದ ನಾಲ್ಕೈದು ತಿಂಗಳಿನಿಂದ ಎಲ್ಲವನ್ನು ಮರೆತು ನೆಮ್ಮದಿಯ ಜೀವನ ನಡೆಸುತ್ತಿದ್ದ ಜನರೀಗ ಮತ್ತೆ ಹೊಸ ಕೊರೊನಾ ತಳಿಯ ಆತಂಕ್ಕೆ ಹೆದರಿದ್ದಾರೆ.ಹೀಗಾಗಿ ಈ ಮೊದಲು ಒಂದು ಡೋಸ್ ಲಸಿಕೆ ಪಡೆದು ಸುಮ್ಮನಾಗಿದ್ದವರು ಒಮಿಕ್ರೋನ್ ಹೊಸ ತಳಿಯ ಕೊರೊನಾಗೆ ಹೆದರಿದಂತೆ ಕಾಣುತ್ತಿದೆ.ಹೀಗಾಗಿ ಇಷ್ಟುದಿನ ಸುಮ್ಮನಿದ್ದ ಜನರು ಈಗ ಲಸಿಕೆ ಪಡೆದುಕೊಳ್ಳಲು ಮುಗಿಬಿಳ್ಳುತ್ತಿದ್ದಾರೆ.

ಹೊಸ ತಳಿ ವೈರಸ್ ಪತ್ತೆ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾಡಳಿತ ಕೂಡ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ಚಿಕ್ಕೋಡಿ ಉಪವಿಭಾಗ ಸೇರಿದಂತೆ ಗಡಿಭಾಗದ ವ್ಯಾಪ್ತಿಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್‌ ಪರೀಕ್ಷೆ ಪ್ರಮಾಣ ಹೆಚ್ಚಿಸಲು ತೀರ್ಮಾನಿಸಿದೆ. ಇದರ ಜೊತೆಗೆ ಜನಸಂದಣಿ ಇರುವ ಪ್ರದೇಶಗಳಲ್ಲಿ ಮತ್ತೆ ಕೋವಿಡ್‌ ಪರೀಕ್ಷಾ ಕೇಂದ್ರಗಳನ್ನು ತೆರೆಯಲು ಮುಂದಾಗಿದೆ‌. ಒಟ್ಟಾರೆ,ಹೊಸ ತಳಿಯ ವೈರಸ್ ನಿಂದ ತಪ್ಪಿಸಿಕೊಳ್ಳಲು ಜಿಲ್ಲಾಡಳಿತ ಅಗತ್ಯ ಮುಂಜಾಗ್ರತಾ ‌ಕ್ರಮ ತೆಗೆದುಕೊಳ್ಳುತ್ತಿದೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments