Home ದೇಶ-ವಿದೇಶ ದುಡ್​ ಕೊಡೋದು ಬೇಡ..,ಪ್ಲಾಸ್ಟಿಕ್ ಕೊಡಿ ಊಟ ಮಾಡಿ!

ದುಡ್​ ಕೊಡೋದು ಬೇಡ..,ಪ್ಲಾಸ್ಟಿಕ್ ಕೊಡಿ ಊಟ ಮಾಡಿ!

ಭುವನೇಶ್ವರ್: ಪ್ಲಾಸ್ಟಿಕ್ ನಿರ್ಮೂಲನೆಗೆ ಹೊಸ ಹೊಸ ಯೋಜನೆಗಳನ್ನು ಮಾಡಲಾಗಿದ್ದರೂ ಫಲಪ್ರದವಾಗಿಲ್ಲ. ಅದಕ್ಕಾಗಿ ಕೆಲವೊಂದು ರಾಜ್ಯದಲ್ಲಿ ಕೆಲವು ಕೆಫೆಗಳು, ಹೋಟೆಲ್ ಉದ್ಯಮಗಳು ಹೊಸ ಚಿಂತನೆಯನ್ನು ಮಾಡುತ್ತಿವೆ. ಇದೀಗ ಅದೇ ರೀತಿಯಲ್ಲಿ ಪ್ಲಾಸ್ಟಿಕ್ ಬಳಕೆ ಕೈಬಿಡುವ ಕೆಲಸಕ್ಕೆ ಪ್ಲ್ಯಾನ್​ ಮಾಡಿದ್ದು, ಭುವನೇಶ್ವರ್​ನಲ್ಲಿ ಸರ್ಕಾರಿ ಆಹಾರ ಕೇಂದ್ರಗಳಲ್ಲಿ ‘ಪ್ಲಾಸ್ಟಿಕ್ ಕೊಡಿ ಊಟ ಮಾಡಿ’ ಎಂಬ ಯೋಜನೆಯನ್ನು ಜಾರಿಗೆ ತಂದಿದೆ.

ಸ್ಥಳೀಯ ಎನ್​ಜಿಒಗಳ ಜೊತೆಗೂಡಿ ಭುವನಶ್ವರ್​ನ ಮುನ್ಸಿಪಲ್ ಕಾರ್ಪೋರೇಷನ್ ಪ್ಲಾಸ್ಟಿಕ್ ನಿರ್ಮೂಲನೆಗೆ ಹೊಸ ಯೋಜನೆಯನ್ನು ರೂಪಿಸಿದ್ದು, ರಾಜ್ಯ ಸರ್ಕಾರದ ಆಹಾರ ಯೋಜನೆಯ ಯುನೈಟೆಡ್ ನೇಷನ್ಸ್ ಡೆವಲಪ್​ಮೆಂಟ್ ಪ್ರೋಗ್ರಾಮ್ ಅಡಿಯಲ್ಲಿ ಇದನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಡಿಯಲ್ಲಿ ಯಾರೇ ಆಗಲಿ ಅರ್ಧ ಕೆಜಿಯಷ್ಟು ಪ್ಲಾಸ್ಟಿಕ್ ಕೊಟ್ಟರೆ ಸಾಕು ಅವರಿಗೆ ಉಚಿತವಾಗಿ ಊಟ ನೀಡಲಾಗುತ್ತದೆ. ಅದಕ್ಕಾಗಿ ಭುವನೇಶ್ವರ್​ನಲ್ಲಿರುವ 11ಸರ್ಕಾರಿ ಆಹಾರ ಕೇಂದ್ರಗಳಲ್ಲಿ ಯಾವುದೇ ಕೇಂದ್ರಕ್ಕೆ ಹೋಗಿ ಪ್ಲಾಸ್ಟಿಕ್ ಕೊಟ್ಟು ಉಚಿತ ಊಟವನ್ನು ಪಡೆಯಬಹುದು ಎಂದು ಬಿಎಂಸಿ ಕಮಿಷನರ್ ಪ್ರೇಮ್ ಚಂದ್ ಚೌಧರಿ ಹೇಳಿದ್ದಾರೆ.

ನಮ್ಮ ದೇಶದಲ್ಲಿ ಅದೆಷ್ಟೋ ಜನ ಪ್ಲಾಸ್ಟಿಕ್ ಆಯ್ದು ಜೀವನ ಸಾಗಿಸುತ್ತಿದ್ದಾರೆ. ಅವರುಗಳು ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡುತ್ತಾರೆ. ಆದ್ದರಿಂದ  ಇಂತಹ ಯೋಜನೆಗಳು ಅಂತಹವರ ಹೊಟ್ಟೆ ತುಂಬಿಸುತ್ತದೆ. ಇಂತಹ ಯೋಜನೆಯನ್ನು ಪ್ರತಿಯೊಂದು ರಾಜ್ಯದಲ್ಲಿಯೂ ಜಾರಿಗೆ ತಂದರೆ ಅದರಿಂದ ಅನೇಕ ಬಡವರಿಗೆ ಉಪಯುಕ್ತವಾಗುವುದಲ್ಲದೇ, ಪ್ಲಾಸ್ಟಿಕ್ ನಿರ್ಮೂಲನೆಯೂ ಸಾಧ್ಯವಿದೆ.

 

LEAVE A REPLY

Please enter your comment!
Please enter your name here

- Advertisment -

Most Popular

ಅಪಮಾನದಿಂದ ಶೋಕ್ದಾರ್ ಮುಕ್ತ.. ನೋ ಮಿಸ್ಟೇಕ್..?!

ನೈಟ್ ಸಫಾರಿಯಿಂದ ಹೊಸ ವಿವಾದದಲ್ಲಿ ಸಿಲುಕಿಕೊಂಡಿದ್ದ ಸ್ಯಾಂಡಲ್​ವುಡ್​ನ ಶೋಕ್ದಾರ್, ಟಾಕ್ ಆಫ್ ದ ಟೌನ್ ಆಗಿದ್ರು. ಆದ್ರೀಗ ಅರಣ್ಯಾಧಿಕಾರಿಗಳು ಆ ಕೇಸ್​ನ ಟ್ರೇಸ್ ಮಾಡಿದ್ದಾರೆ. ಅವಮಾನ ಹಾಗೂ ಅಪಮಾನಗಳಿಂದ ಬಜಾರ್ ಹುಡ್ಗನಿಗೆ ಮುಕ್ತಿ...

ಡಿಕೆಶಿ ಗೂಂಡಾ ರಾಜಕಾರಣ ನಡೆಯುವುದಿಲ್ಲ : ಶೋಭಾ ಕರಂದ್ಲಾಜೆ

ಮೈಸೂರು :  ಶಿರಾ, ಆರ್ ಆರ್​ ನಗರ ವಿಧನಾಸಭಾ ಉಪ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ . ಕೆ ಶಿವಕುಮಾರ್​ ಅವರ ಗೂಂಡಾ ರಾಜಕಾರಣ  ನಡೆಯುವುದಿಲ್ಲ ಅಂತ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ...

ಕಾಡಾನೆ ದಾಳಿಗೆ ಸಕ್ರೆಬೈಲು ಬಿಡಾರದ ದೈತ್ಯ ಆನೆ `ರಂಗ’ ಸಾವು

ಶಿವಮೊಗ್ಗ :  ಕಾಡಾನೆ ದಾಳಿಯಿಂದ ಸಕ್ರೆಬೈಲು ಬಿಡಾರದ ಆನೆ ರಂಗ ಮೃತಪಟ್ಟಿದೆ. 35 ವರ್ಷದ ಆನೆ ರಂಗ ಸಕ್ರೆಬೈಲು ಬಿಡಾರದ ಪ್ರಮುಖ ಆಕರ್ಷಣೆಯಾಗಿತ್ತು. ಕಳೆದ ರಾತ್ರಿ ಬಿಡಾರಕ್ಕೆ ನುಗ್ಗಿದ ಕಾಡೆನೆಯೊಂದು ಏಕಾಏಕಿ ರಂಗನ ಮೇಲೆರಗಿದೆ....

ದೇವೇಂದ್ರ ಫಡ್ನವಿಸ್​​ಗೆ ಕೊರೋನಾ

ಮುಂಬೈ : ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ಅವರಿಗೆ ಕೊರೋನಾ ಸೋಂಕು ತಗುಲಿದೆ. ಫಡ್ನವೀಸ್ ಅವರು ಬಿಹಾರದ ಬಿಜೆಪಿ ಚುನಾವಣಾ ಪ್ರಚಾರ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಬಿಹಾರ ವಿಧಾನಸಭಾ...

Recent Comments