ಎಂಪಿ ಟಿಕೆಟ್ ಕುಟುಂಬಸ್ಥರಿಗೆ, ಸಿನಿಮಾ ಟಿಕೆಟ್ ಕಾರ್ಯಕರ್ತರಿಗೆ..!

0
144

ಮಂಡ್ಯ: ಎಂಎಲ್​ಎ, ಎಂಪಿ ಟಿಕೆಟ್​​ಗಳನ್ನು ತಮ್ಮ ಕುಟುಂಬದವರಿಗೆ ಇಟ್ಟುಕೊಂಡು, ಸಿನಿಮಾ ಟಿಕೆಟ್ ಅನ್ನು ಪಕ್ಷದ ಕಾರ್ಯಕರ್ತರಿಗೆ ನೀಡುತ್ತಾರೆ ಅಂತ ಸೋಶಿಯಲ್ ಮೀಡಿಯಾದಲ್ಲಿ ಜನರು ಸಚಿವ ತಮ್ಮಣ್ಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಮಲತಾ ಅಂಬರೀಶ್ ಹಾಗೂ ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆಯಿಂದ ರಂಗೇರಿರುವ ಮಂಡ್ಯ ಕ್ಷೇತ್ರ ಎಲ್ಲರ ಗಮನ ಸೆಳೆದಿದೆ. ಸೋಷಿಯಲ್​​ ಮೀಡಿಯಾದಲ್ಲಿ ಸಚಿವ ತಮ್ಮಣ್ಣ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಹುಲಿ ಇದ್ದಾಗ ಉಪಯೋಗಿಸಿಕೊಂಡ ಇಲಿಗಳು, ಇಂದು ತಾವೇ ಹುಲಿಗಳು ಅಂದುಕೊಂಡಿವೆ. ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಎಂಬುದು ಹಿಂದಿನ ಪ್ರಜಾಪ್ರಭುತ್ವದ ವ್ಯಾಖ್ಯಾನ. ಇವಾಗ ಕುಟುಂಬದಿಂದ, ಕುಟುಂಬಕ್ಕಾಗಿ, ಕುಟುಂಬಕ್ಕೋಸ್ಕರ ಅಂತೇನಾದ್ರೂ ಬದಲಾಗಿ ಹೋಗಿದ್ಯಾ? ಅಂತ ಪೋಸ್ಟ್​ಗಳನ್ನು ಹಾಕೋ ಮೂಲಕ ಜೆಡಿಎಸ್ ಕುಟುಂಬ ರಾಜಕಾರಣದ ವಿರುದ್ಧ ಜನ ಪ್ರಶ್ನೆ ಎತ್ತಿದ್ದಾರೆ.

“ಯಾರ ಮನೆಗೆ, ಯಾರು ನೀರು ಕುಡಿಯಲು ಹೋಗಿದ್ದಾರೆ ನೀವೇ ನೋಡಿ” ಅಂತ ಸಾರಿಗೆ ಸಚಿವ ತಮ್ಮಣ್ಣ ಕುಟುಂಬದ ಫೋಟೋ ಹಾಕಿ ತಿರುಗೇಟು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ.

LEAVE A REPLY

Please enter your comment!
Please enter your name here