Saturday, May 28, 2022
Powertv Logo
Homeರಾಜ್ಯಇ- ಸ್ಕೂಟರ್​ ವಾಹನ ಖರೀದಿಸಲು ಮುಗಿಬಿದ್ದ ಜನ

ಇ- ಸ್ಕೂಟರ್​ ವಾಹನ ಖರೀದಿಸಲು ಮುಗಿಬಿದ್ದ ಜನ

ಬೆಂಗಳೂರು: ಪೆಟ್ರೋಲ್ ಗೆ ದುಡ್ಡು ಕೊಡೋ ಬದಲು ಅದೇ ದುಡ್ಡನ್ನ ಇಎಂಐ ಕಟ್ಟಬಹುದು ಎಂದು ಪೆಟ್ರೋಲ್ ದರಕ್ಕೆ ಬೇಸತ್ತು ಇಲೆಕ್ಟ್ರಾನಿಕ್ ವಾಹನಗಳ ಖರೀದಿಗೆ ಜನರು ಮುಗಿಬಿದಿದ್ದಾರೆ.

ಪೆಟ್ರೋಲ್ ವೆಹಿಕಲ್ ಸಹವಾಸ ಸಾಕೆನ್ನುತ್ತಿರೋ‌ ವಾಹನ ಸವಾರರು ಪೆಟ್ರೋಲ್ ಗೆ ದುಡ್ಡು ಕೊಡೋ ಬದಲು ಅದೇ ದುಡ್ಡನ್ನ ಇಎಂಐ ಕಟ್ಟಬಹುದು ಅನ್ನುತ್ತಿರೋ ಜನರು ನಗರದಲ್ಲಿ ಇ- ವಾಹನಗಳ ಖರೀದಿಗೆ ಮುಗಿಬಿದಿದ್ದಾರೆ. ಪೆಟ್ರೋಲ್ ದರಕ್ಕೆ ಬೇಸತ್ತು ಇಲೆಕ್ಟ್ರಾನಿಕ್ ವಾಹನಗಳ ಖರೀದಿಗೆ ಮುಂದಾದ ಜನ ಅದ್ರಲ್ಲೂ ಇ- ಕಾರಿಗಿಂತ ಇ- ಸ್ಕೂಟರ್ ಗೆ ಬೇಡಿಕೆ ಹೆಚ್ಚಾಗಿದೆ.

ಅಧ್ಯಯನವೊಂದರ ಪ್ರಕಾರ, 2019 ಹಾಗೂ 2021ರಲ್ಲಿ ಒಟ್ಟು 23,570 ರಿಜಿಸ್ಟರಾದ ಇ- ಸ್ಕೂಟರ್ ಹಾಗೂ 2,141ರಷ್ಟು ಕಾರುಗಳು ರಿಜಿಸ್ಟ್ರರ್ ಆಗಿತ್ತು. ಈಗಾಗಲೇ ಶೇ. 85 ರಷ್ಟು ಇ- ಸ್ಕೂಟರ್ ಗಳು ಮಾರಾಟವಾಗಿದ್ದು, 2030ರಲ್ಲಿ ಸರ್ಕಾರದ ನವೀಕರಿಸಬಹುದಾದ ಶಕ್ತಿ ಸಾಧಿಸುವಲ್ಲಿ ಕೈಜೋಡಿಸುತಿದ್ದಾರೆ. ಇನ್ನು ಆರು‌ ತಿಂಗಳಲ್ಲಿ ಇ ವೆಹಿಕಲ್ ಬಳಸುವರ ಸಂಖ್ಯೆ ಡಬಲ್ ಆಗೋ ನಿರೀಕ್ಷೆ ಇದೆ.

- Advertisment -

Most Popular

Recent Comments