Friday, September 30, 2022
Powertv Logo
Homeರಾಜ್ಯಕೃಷ್ಣೈಕ್ಯ ವಿಶ್ವೇಶ ತೀರ್ಥ ಶ್ರೀಗಳ ಅಂತಿಮ ವಿಧಿ ವಿಧಾನಗಳು ಹೇಗೆ ನಡೆಯುತ್ತೆ ಗೊತ್ತಾ?

ಕೃಷ್ಣೈಕ್ಯ ವಿಶ್ವೇಶ ತೀರ್ಥ ಶ್ರೀಗಳ ಅಂತಿಮ ವಿಧಿ ವಿಧಾನಗಳು ಹೇಗೆ ನಡೆಯುತ್ತೆ ಗೊತ್ತಾ?

ಕೃಷ್ಣಕ್ಯರಾದ ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಗಳನ್ನು  ಬೆಂಗಳೂರಿನ ವಿದ್ಯಾಪೀಠದಲ್ಲಿ ಬೃಂದಾವನಗೊಳಿಸಲಾಗುವುದು. ಶ್ರೀಗಳ ಅಂತಿಮ ವಿಧಿ ವಿಧಾನಗಳು ಯಾವ ರೀತಿ ನಡೆಯುತ್ತವೆ ಅನ್ನೋದನ್ನು ನೋಡೋದಾದ್ರೆ, 

* ಬ್ರಾಹ್ಮಣರಲ್ಲಿ ಮರಣಾನಂತರ ಶರೀರ ದಹನ ಪದ್ಧತಿ ಅನುಸರಿಸುತ್ತಾರೆ. ಆದರೆ ಶ್ರೀಗಳಿಗೆ ದಹನ ಇರುವುದಿಲ್ಲ. ಭೂಮಿಯಲ್ಲಿ ಬೃಂದಾವನಸ್ತಗೊಳಿಸಲಾಗುತ್ತದೆ. 

* ಹರಿಪಾದ ಯಾತ್ರೆ ಮಾಡಿದ ಯತಿಯ ಶಿಷ್ಯ ವೃಂದದವರು, ಎಲ್ಲಾ ಕ್ರಿಯೆಗಳನ್ನು ಮಾಡುತ್ತಾರೆ . ಯತಿಗಳ ಸನ್ಯಾಸ ಸಂದರ್ಭದಲ್ಲಿ ಆತ್ಮ ಶ್ರಾದ್ಧ ಮಾಡಿಕೊಂಡಿರುತ್ತಾರೆ . ಕೃಷ್ಣೈಕ್ಯರಾದ ನಂತರ ಕೆಲವು ಆಚರಣೆ ಅನುಸರಿಸಬೇಕಾಗುತ್ತದೆ. ಎಲ್ಲಾ ಕ್ರಿಯೆಗಳನ್ನು ಅವರ ಶಿಷ್ಯ ಮಗನ ಸ್ಥಾನದಲ್ಲಿ ನಿಂತು ಮಾಡುತ್ತಾರೆ.

* ಯತಿಗಳನ್ನು ಮಲಗಿಸುವ ಪದ್ಧತಿ ಇಲ್ಲದಿರುವುದರಿಂದ 3*3 ಜಾಗದಲ್ಲಿ 5-6 ಅಡಿ ಆಳ ಗುಂಡಿ ತೋಡಿ ಶ್ರೀಗಳನ್ನು ಕೂರಿಸಲಾಗುತ್ತದೆ. ಬಳಿಕ ನಿತ್ಯಪೂಜೆಗೆ ಬಳಸುತ್ತಿದ್ದ ಸಾಲಿಗ್ರಾಮ , ಜಪಮಾಲೆ, ತುಳಸಿಮಣಿ, ಆಹ್ನಿಕ ಪಾತ್ರೆಗಳು ಹಾಗೂ ಒಂದು ಜೊತೆ ಪಾದುಕೆಯ ಜೊತೆಗೆ ತುಳಸಿ ದಳ ಸಹ ಇರಿಸಿ ಮಣ್ಣಿನಿಂದ ಮುಚ್ಚಲಾಗುತ್ತೆ. ಅಲ್ಲದೆ 6 ತಿಂಗಳು ಅಥವಾ ಒಂದು ವರ್ಷದ ಒಳಗೆ ಅಲ್ಲಿ ವೃಂದಾವನವನ್ನು ಕಟ್ಟಲಾಗುತ್ತದೆ.

8 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments