ಬೆಂಗಳೂರು : ಉಡುಪಿಯ ಪೇಜಾವರಿ ಮಠದ ವಿಶ್ವೇಶ ತೀರ್ಥ ಶ್ರೀಗಳು ನಗರ ವಿದ್ಯಾಪೀಠದಲ್ಲಿ ಬೃಂದಾವನಸ್ತರಾದರು. ಹಿಂದೂ ಮಾಧ್ವ ಸಂಪ್ರದಾಯದಂತೆ ಶ್ರೀಗಳನ್ನು ಬೃಂದಾವನಸ್ತಗೊಳಿಸಲಾಯಿತು.
ವಿಶ್ವೇಶ ತೀರ್ಥ ಶ್ರೀಗಳ ಅಗಲಿಕೆಗೆ ಮೋದಿ ಸಂತಾಪ
ನ್ಯುಮೋನಿಯಾ ಮತ್ತು ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಶ್ರೀಗಳನ್ನು ಡಿಸೆಂಬರ್ 20 ರಂದು ಬೆಳಗ್ಗೆ 5 ಗಂಟೆ ಸುಮಾರಿಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಪರಿಸ್ಥಿತಿ ತೀರ ಬಿಗುಡಾಯಿಸಿದ್ದರಿಂದ ಶ್ರೀಗಳ ಕೊನೆಯ ಆಸೆಯಂತೆ ಇಂದು ಬೆಳಗ್ಗೆ ಶ್ರೀಮಠಕ್ಕೆ ಅವರನ್ನುಕರೆತರಲಾಗಿತ್ತು. ಮಠಕ್ಕೆ ಕರೆತಂದ ಕೆಲವೇ ಹೊತ್ತಲ್ಲಿ ಕೃಷ್ಣೈಕ್ಯರಾದರು.
ಕೃಷ್ಣೈಕ್ಯ ವಿಶ್ವೇಶ ತೀರ್ಥ ಶ್ರೀಗಳ ಅಂತಿಮ ವಿಧಿ ವಿಧಾನಗಳು ಹೇಗೆ ನಡೆಯುತ್ತೆ ಗೊತ್ತಾ?
ಮಠದಲ್ಲಿಯೇ ಶ್ರೀಗಳ ಪಾರ್ಥಿವ ಶರೀರಕ್ಕೆ ವಿವಿಧ ಸ್ವಾಮಿಜಿಗಳು ಪೂಜೆ ನೆರವೇರಿಸಿದರು. ನಂತರ ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಿ , ಬಳಿಕ ಸೇನಾ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಕರೆತಂದು ನ್ಯಾಷನಲ್ ಕಾಲೇಜಿನ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಆ ಬಳಿಕ ಬೆಂಗಳೂರಿನ ವಿದ್ಯಾಪೀಠದಲ್ಲಿ ಪೇಜಾವರ ಶ್ರೀಗಳನ್ನು ಬೃಂದಾವಸ್ತಗೊಳಿಸಲಾಯಿತು.
ವಿಶ್ವೇಶ ತೀರ್ಥರು ದೇಶಕ್ಕೆ ಮಾರ್ಗದರ್ಶನ ನೀಡಿದ ಮಹಾನ್ ಸಂತರು : ಶೋಭಾ ಕರಂದ್ಲಾಜೆ
ಸಕಲ ಸರ್ಕಾರಿ ಗೌರವವನ್ನು ಸಲ್ಲಿಸಿದ ಬಳಿಕ ಪೇಜಾವರ ಶ್ರೀಗಳ ಪಾರ್ಥಿವ ಶರೀರಕ್ಕೆ ಗಂಗಾ ಜಲದಿಂದ ಜಳಕ ಮಾಡಿಸಿ, ಮಾಧ್ವ ಸಂಪ್ರದಾಯದಂತೆ ನಾಮ ಇಟ್ಟ ಬಳಿಕ ಮುದ್ರೆ, ಅಂಗಾರಕ ತುಳಸಿಮಾಲೆ ಧಾರಣೆ ಮಾಡಿಸಲಾಯಿತು. ಈ ಪ್ರಕ್ರಿಯೆಗಳ ಬಳಿಕ ಕೃಷ್ಣ ದೇವಾಲಯದಲ್ಲಿ ಆರತಿ ಬೆಳಗಿಸಿ 5*5 ಅಳತೆ ಗುಂಡಿಯಲ್ಲಿ ಸ್ವಸ್ತಿಕಾಸನದಲ್ಲಿ ಪಾರ್ಥಿವ ಶರೀರವನ್ನು ಯೋಗ ಸ್ಥಿತಿಯಲ್ಲಿ ಕುಳ್ಳಿರಿಸಿ, ಪಂಚಗವ್ಯ ಪ್ರೋಕ್ಷಣೆ ,ಗೋಮಯ ಲೇಪನದ ಬಳಿಕ 5 ಕಲಶಗಳಲ್ಲಿ ಗಂಗಾ ಸನ್ನಿಧಿಯನ್ನು ಆವಾಹಿಸಿ ಅಭಿಷೇಕ ಮಾಡಲಾಯಿತು.
ವಿಶ್ವೇಶ ತೀರ್ಥ ಶ್ರೀಗಳ ನಿಧನಕ್ಕೆ ಸಿಎಂ ಯಡಿಯೂರಪ್ಪ ಸಂತಾಪ
ಶ್ರೀಗಳ ಬ್ರಹ್ಮರಂಧ್ರಕ್ಕೆ ತೆಂಗಿನಕಾಯಿ ಇಟ್ಟ ಬಳಿಕ ಶ್ರೀಗಳ ಜಪಾನುಷ್ಠಾನ ಸಾಧನಗಳಾದಂತಹಾ ದಂಡ, ಕಳಶ, ಅಭಿಷೇಕದ ಪಾತ್ರೆಗಳನ್ನು ಪಾರ್ಥಿವ ಶರೀರದ ಮುಂದೆ ಇಟ್ಟು ಕಾರ್ಯಗಳೆಲ್ಲಾ ಮುಗಿದ ಬಳಿಕ 5 ಪ್ರಮುಖ ದ್ರವ್ಯಗಳಾದ ಉಪ್ಪು, ಸಾಸಿವೆ, ಕರ್ಪೂರ, ಕರಿಮೆಣಸು ಹಾಗೂ ಹತ್ತಿ ಹಾಕಿ ಕೊನೆಯಲ್ಲಿ ಸಂಪೂರ್ಣವಾಗಿ ಮಣ್ಣಿನಿಂದ ಮುಚ್ಚಲಾಯಿತು.
ವಿಶ್ವೇಶ ತೀರ್ಥರ ನಿಧನಕ್ಕೆ ಗಣ್ಯರ ಸಂತಾಪ
ಬೆಂಗಳೂರಿನ ವಿದ್ಯಾಪೀಠದಲ್ಲಿ ಕೃಷ್ಣೈಕ್ಯ ವಿಶ್ವೇಶ ತೀರ್ಥರ ಬೃಂದಾವನ
ಬೆಂಗಳೂರಿನ ವಿದ್ಯಾಪೀಠದಲ್ಲಿ ಕೃಷ್ಣೈಕ್ಯ ವಿಶ್ವೇಶ ತೀರ್ಥರ ಬೃಂದಾವನ
ಆರಕ್ಕೂ ಹೆಚ್ಚು ವರ್ಷ ಉಪವಾಸ ಮಾಡಿ ದಾಖಲೆ ಬರೆದಿರೋ ವಿಶ್ವೇಶ ತೀರ್ಥರು!
ಕೃಷ್ಣೈಕ್ಯ ವಿಶ್ವೇಶ ತೀರ್ಥ ಶ್ರೀಗಳ ಅಪರೂಪದ ಫೋಟೋಗಳು
ವಿಶ್ವೇಶ ತೀರ್ಥ ಶ್ರೀಗಳನ್ನು ನೆನೆದ ಸ್ಯಾಂಡಲ್ವುಡ್