Sunday, May 29, 2022
Powertv Logo
Homeರಾಜ್ಯನೆಹರು ಕುಟುಂಬದ ವಿರುದ್ಧ ಅವಹೇಳನಕಾರಿ ಹೇಳಿಕೆ : ನಟಿ ಪಾಯಲ್​​ಗೆ ನ್ಯಾಯಾಂಗ ಬಂಧನ

ನೆಹರು ಕುಟುಂಬದ ವಿರುದ್ಧ ಅವಹೇಳನಕಾರಿ ಹೇಳಿಕೆ : ನಟಿ ಪಾಯಲ್​​ಗೆ ನ್ಯಾಯಾಂಗ ಬಂಧನ

ಜೈಪುರ : ನೆಹರು ಕುಟುಂಬದ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಬಂಧನಕ್ಕೊಳಗಾಗಿದ್ದ ನಟಿ ಪಾಯಲ್​ ರೋಹ್ಟಗಿಗೆ ಬೂಂದಿ ಸ್ಥಳೀಯ ನ್ಯಾಯಾಲಯ 8 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. 

ಜವಾಹರಲಾಲ್​ ನೆಹರು ತಂದೆ ಮೋತಿಲಾಲ್​ ನೆಹರು ಅವರನ್ನು ಅಣಕಿಸಿ, ಅಶ್ಲೀಲ, ಅಸಭ್ಯ ಪದಗಳಿಂದ ಟೀಕಿಸಿ ಫೇಸ್​ಬುಕ್​ನಲ್ಲಿ ವಿಡಿಯೋವೊಂದನ್ನು ಪಾಯಲ್ ಹರಿಬಿಟ್ಟಿದ್ದರು. ಸೋನಿಯಾ ಗಾಂಧಿ, ಪ್ರಿಯಾಂಕ ವಾದ್ರಾ  ವಿರುದ್ಧವೂ ಅಸಭ್ಯ ಹೇಳಿಕೆ  ನೀಡಿದ್ದರು.  ಅವರ ಹೇಳಿಕೆಯನ್ನು ವಿರೋಧಿಸಿ ಕಾಂಗ್ರೆಸ್ ನಾಯಕ ಚರ್ಮೇಶ್ ಶರ್ಮಾ ಕೋರ್ಟ್ ಮೆಟ್ಟಿಲೇರಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ವೈರಲ್ ಆಗ್ತಿದ್ದಂತೆ ರಾಜಸ್ಥಾನ್ ಪೊಲೀಸರು ಬಂಧಿಸಿದ್ದರು. ಇಂದು  ನ್ಯಾಯಾಲಯ ಡಿಸೆಂಬರ್ 24ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ. ಇನ್ನು ಪಾಯಲ್ ರೊಹ್ಟಗಿ ಇಪ್ಪತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

 

 

 

1 COMMENT

LEAVE A REPLY

Please enter your comment!
Please enter your name here

- Advertisment -

Most Popular

Recent Comments