ಸೋಶಿಯಲ್ ಮೀಡಿಯಾ ಅಂದ್ಕೂಡ್ಲೆ ಥಟ್ ಅಂತ ನೆನಪೋಗೋದು ಟ್ರೋಲರ್ಸ್. ಟ್ರೋಲಿಗರು ಕಾಲೆಳೆದು ಮಾಡೋ ಪೋಸ್ಟ್ ಗಳು ಸಖತ್ ನಗಿಸುತ್ತವೆ, ಕೆಲವು ಪೋಸ್ಟ್ ಗಳು ನಗಿಸೋ ಜೊತೆಗೆ ಒಂದೊಳ್ಳೆ ಮೆಸೇಜ್ ಕೂಡ ಕೊಡುತ್ತವೆ. ಆದ್ರೆ ಒಂದಿಷ್ಟು ಟ್ರೋಲಿಗರು ಅಶ್ಲೀಲ ಪದ ಬಳಕೆ ಮಾಡಿ ಇನ್ನೊಬ್ಬರನ್ನು ಚುಚ್ಚುವುದೇ ಟ್ರೋಲ್ ಅಂತ ಅನ್ಕೊಂಡಿದ್ದಾರೆ. ಅಂಥಾ ಟ್ರೋಲಿಗರ ಬಗ್ಗೆ ಡೈರೆಕ್ಟರ್ ಪವನ್ ಒಡೆಯರ್ ಮಾತಾಡಿದ್ದಾರೆ. ತಾವು 86 ಮಂದಿ ಟ್ರೋಲಿಗರನ್ನು ಲಿಸ್ಟ್ ಮಾಡಿಕೊಂಡಿದ್ದೆ, ಅವರ ಬಗ್ಗೆ ಕಂಪ್ಲೆಂಟ್ ಕೊಡೋಕು ರೆಡಿಯಾಗಿದ್ದೆ ಅಂತ ಹೇಳಿದ್ದಾರೆ.
ಪವರ್ ಟಿವಿಯ ಲಾಕ್ಡೌನ್ ಡೈರಿ with ರಹಮಾನ್ ಕಾರ್ಯಕ್ರಮದಲ್ಲಿ ಮಾತಾಡುತ್ತಾ, ‘ಸೋಶಿಯಲ್ ಮೀಡಿಯಾದಲ್ಲಿ ಮನಸ್ಸಿಗೆ ಬಂದ್ದದ್ದನ್ನು ಮಾಡ್ತಾರೆ. ಹೆಚ್ಚು ಕಮ್ಮಿ 86 ಮಂದಿ ಟ್ರೋಲಿಗರನ್ನು ಲಿಸ್ಟ್ ಮಾಡಿದ್ದೆ. ಸೈಬರ್ ಕ್ರೈಂನಲ್ಲಿ ಕಂಪ್ಲೆಂಟ್ ಕೊಡೊಲು ಮುಂದಾಗಿದ್ದೆ. ಆಮೇಲೆ ಅವರ ಏಜ್ ನೋಡಿದಾಗ 18 ರಿಂದ 25 ವರ್ಷದ ಯುವಕರು ಅಂತ ಗೊತ್ತಾಯ್ತು. ಆಮೇಲೆ ಅವರ ಲೈಫ್ ಹಾಳಾಗುತ್ತಲ್ಲಾ ಅಂತ ಸುಮ್ನಾದೆ ಅಂತ ತಿಳಿಸಿದ್ದಾರೆ.
ಪವನ್ ಒಡೆಯರ್ ಟ್ರೋಲರ್ಸ್ ಬಗ್ಗೆ ಹೇಳಿದ್ದೇನು ಅನ್ನೋದನ್ನು ನೀವೇ ನೋಡಿ…