ಬೆಂಗಳೂರು: ಖಾಸಗಿ ಶಾಲಾ ಶುಲ್ಕದ ಟಾರ್ಚರ್ ಹಿನ್ನಲೆಯಲ್ಲಿ ಶುಲ್ಕದ ವಿಚಾರವಾಗಿ ಪೋಷಕರು ಸರ್ಕಾರಕ್ಕೆ ಡೆಡ್ ಲೈನ್ ಕೊಟ್ಟಿದ್ದಾರೆ.
ಶಾಲಾ ಶುಲ್ಕದ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಪೋಷಕರು ಆಗ್ರಹಿಸಿದ್ದಾರೆ. ಈ ಹಿಂದೆ ಮೂರು ಭಾರಿ ಪ್ರತಿಭಟನೆ ಮಾಡಿದರೂ, ಸರ್ಕಾರ ಸರಿಯಾಗಿ ಸ್ಪಂದಿಸಿಲ್ಲ. ಹೀಗಾಗಿ ಶುಲ್ಕದ ವಿಚಾರವಾಗಿ ಸರಿಯಾದ ನಿರ್ಧಾರ ಕೈಗೊಳ್ಳಲಿ. ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳದಿದ್ದರೆ ಮತ್ತೆ ಜನವರಿ 31 ರಂದು ಪೆರೇಂಟ್ಸ್ ಅಸೋಸಿಯೇಷನ್ ನಿಂದ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಖಾಸಗಿ ಒಕ್ಕೂಟಗಳ ಕಾರ್ಯದರ್ಶಿ ತಿಳಿಸಿದ್ದಾರೆ. ಖಾಸಗಿ ಶಾಲೆಗಳ ವೆಚ್ಚಕ್ಕೆ ತಕ್ಕ ಶುಲ್ಕ ಆದೇಶ ಜಾರಿ ಮಾಡಲು ಆಗ್ರಹಿಸಲಾಗುತ್ತದೆ. ಶೇಕಡಾ 75% ರಷ್ಟು ಶಾಲಾ ಶುಲ್ಕ ಕಡಿತ ಮಾಡಿ ಆದೇಶ ಹೊರಡಿಸಬೇಕು. ಇಲ್ಲವಾದಲ್ಲಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ ಎಂದರು.