ಕಲಬುರಗಿ: ಗ್ರಹಣ ಸಮಯದಲ್ಲಿ ಕೆಟ್ಟದಾಗುತ್ತೆ ಅನ್ನುವ ಮೂಢನಂಬಿಕೆ ಈಗಲೂ ಕೆಲವು ಹಳ್ಳಿಗಳಲ್ಲಿದೆ. ಕಲಬರಗಿಯಲ್ಲಿ ಪೋಷಕರು ಮೂಢಾಚರಣೆ ಪಾಲಿಸಿದ್ದು, ತಮ್ಮ ಮಕ್ಕಳನ್ನೇ ಮಣ್ಣಿನಲ್ಲಿ ಹೂತು ಹಾಕಿದ್ದಾರೆ.
ಗ್ರಹಣ ಕಾಲದಲ್ಲಿ ಮಕ್ಕಳನ್ನು ಮಣ್ಣಿನಲ್ಲಿ ಹೂತು ಹಾಕುವುದರಿಂದ ಎಲ್ಲಾ ರೀತಿಯ ಅನಾರೋಗ್ಯ ಹಾಗೂ ದೋಷಗಳು ನಿವಾರಣೆಯಾಗುತ್ತವೆ ಎಂಬುದು ಇವರ ನಂಬಿಕೆ. ಈ ಹಿನ್ನೆಲೆ ಇಬ್ಬರು ಮಕ್ಕಳನ್ನು ಮಣ್ಣಿನಲ್ಲಿ ಹೂತಿಟ್ಟಿದ್ದಾರೆ. ಆ ಮಕ್ಕಳು ಅಳುತ್ತಿದ್ದರೂ ಬಿಡದೇ ಗ್ರಹಣ ಮುಗಿದ ಬಳಿಕವೇ ಹೊರತೆಗೆಯುವುದಾಗಿ ಹೇಳಿದ್ದಾರೆ.
ಅಂತೆಯೇ ವಿಜಯಪುರದಲ್ಲಿ 24 ವಯಸ್ಸಿನ ಯುವಕನನ್ನು ಆತನ ಪೋಷಕರು ಮಣ್ಣಿನಲ್ಲಿ ಹೂತಿಟ್ಟಿದ್ದಾರೆ. ಅಂಗವಿಕಲತೆ ಮಾಯವಾಗುತ್ತೆ ಅನ್ನೋದು ಇವರ ನಂಬಿಕೆ.
ದೇಶ ಆಧುನಿಕತೆಯತ್ತ ಸಾಗುತ್ತಿದ್ದರೂ ಜನ ಇನ್ನೂ ಮೌಢ್ಯ ನಂಬುತ್ತಿರುವುದು ನಿಜಕ್ಕೂ ವಿಪರ್ಯಾಸ.