ಅಭಿನಂದನ್ ಸುರಕ್ಷೆ ಬಗ್ಗೆ ಪಾಕ್​ ಅಭಯ

0
304

ಇಸ್ಲಮಾಬಾದ್: ಅಭಿನಂದನ್ ನಮ್ಮ ರಕ್ಷಣೆಯಲ್ಲಿದ್ದಾರೆ. ಅವರ ಬಗ್ಗೆ ಯಾವುದೇ ಆತಂಕ ಬೇಡ ಅಂತ ಪಾಕ್​​​​​ ಮಾಧ್ಯಮಕ್ಕೆ ವಿದೇಶಾಂಗ ಸಚಿವ ಸಲ್ಮಾನ್ ಖುರೇಷಿ ಹೇಳಿಕೆ ನೀಡಿದ್ದಾರೆ. ಹಾಗೆಯೇ ಮಾತುಕತೆ ನಂತರ ತೀರ್ಮಾನ ತೆಗೆದುಕೊಳ್ಳುತ್ತೇವೆ ಅನ್ನೋ ಮೂಲಕ ಮಾತುಕತೆ ನಡೆಸುವ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.

ಪಾಕಿಸ್ತಾನದ ವಶದಲ್ಲಿರುವ ಭಾರತೀಯ ವಾಯುಪಡೆಯ ವಿಂಗ್​ ಕಮಾಂಡರ್​ ಅಭಿನಂದನ್ ವರ್ತಮಾನ್​ ಕುಟುಂಬಕ್ಕೆ ಪಾಕಿಸ್ತಾನ ಅಭಯ ನೀಡಿದ್ದು, ಅಭಿನಂದನ್​​​​ರನ್ನು ಸೂಕ್ತ ರೀತಿಯಲ್ಲಿ ನೋಡಿಕೊಳ್ಳಲಾಗುತ್ತಿದೆ. ಜಿನೇವಾ ಒಪ್ಪಂದದ ಪ್ರಕಾರವೇ ನಡೆದುಕೊಳ್ಳಲಾಗುತ್ತಿದೆ ಅಂತ ಹೇಳಿದ್ದಾರೆ.

ಅಭಿನಂದನ್​​ ಅವರನ್ನು ವಾಪಸ್ ಕಳಿಸುವ ಬಗ್ಗೆ ಯಾವುದೇ ಸ್ಪಷ್ಟ ಪ್ರಸ್ತಾಪವನ್ನು ಮಾಡಿಲ್ಲ. ಜಿನೇವಾ ಒಪ್ಪಂದದ ಪ್ರಕಾರ ನಡೆದುಕೊಳ್ತೀವಿ. ಮಾತುಕತೆ ನಂತರ ಈ ಕುರಿತು ನಿರ್ಧಾರ ತೆಗೆದುಕೊಳ್ತೀವಿ. ಪುಲ್ವಾಮಾ ದಾಳಿ ತಮಗೆ ಭಾರತ ನೀಡಿರುವ ಸಾಕ್ಷ್ಯಾಧಾರಗಳು ಸಿಕ್ಕಿವೆ. ಭಾರತದ ಸಾಕ್ಷ್ಯಾಧಾರಗಳನ್ನು ನೋಡಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಎಲ್ಲವನ್ನೂ ಕೂಲಂಕಶವಾಗಿ ವಿಶ್ಲೇಷಿಸಿ ಮುಂದಿನ ನಡೆಯ ಬಗ್ಗೆ ನಿರ್ಧರಿಸಲಾಗುತ್ತದೆ ಅಂತ ಖುರೇಷಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here