ಪ್ರಧಾನಿ ಇಮ್ರಾನ್​​ಗೆ ಶೇಮ್​ ಶೇಮ್ ಅಂದ ಪಾಕ್​ ಸಂಸದರು..!

0
260

ನವದೆಹಲಿ: ಸಂಸತ್ತಿನಲ್ಲಿ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ತೀವ್ರ ಮುಜುಗರ ಅನುಭವಿಸಿದ್ದಾರೆ. ಜೈಷ್​ ಉಗ್ರರ ಅಡಗುತಾಣಗಳ ಮೇಲೆ ಭಾರತೀಯ ವಾಯುಪಡೆ ದಾಳಿ ನಡೆಸಿರುವ ವಿಚಾರವಾಗಿ ಪಾಕ್​ ಸಂಸತ್ತಿನಲ್ಲಿ ಪ್ರಧಾನಿ ಇಮ್ರಾನ್​ ಖಾನ್​ ವಿರುದ್ಧ ಸಂಸದರು ಕಿಡಿಕಾರಿದ್ದಾರೆ.

ಜೈಷ್​ ಉಗ್ರರ ಅಡಗುದಾಣಗಳ ಮೇಲೆ ಭಾರತೀಯ ವಾಯು ಪಡೆ ಇಂದು ಬೆಳಗ್ಗೆ ದಾಳಿ ನಡೆಸಿರುವ ಹಿನ್ನೆಲೆ ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್ ವಿರುದ್ಧ ಪಾಕ್​ ಸಂಸದರು ಶೇಮ್​ ಶೇಮ್​ ಅಂತ ಘೋಷಣೆ ಕೂಗಿದ್ದಾರೆ. 35 ವರ್ಷಗಳಲ್ಲಿಯೇ ಇಂಥಾ ದಾಳಿ ನಡೆದಿರಲಿಲ್ಲ ಅಂತ ಹೇಳಿರೋ ಸಂಸದರು ಸಂಸತ್​ನಲ್ಲಿಯೇ ಪ್ರಧಾನಿ ಇಮ್ರಾನ್​​ ಅವರನ್ನು ಅವಮಾನಿಸಿದ್ದಾರೆ.

LEAVE A REPLY

Please enter your comment!
Please enter your name here