ಸುಳ್ಳು ಸುಳ್ಳೇ ಬೊಗಳೆಬಿಟ್ಟಿತ್ತು ಪಾಕ್ -ವಿಮಾನ ಅವಶೇಷದ ಹಿಂದಿನ ಅಸಲಿಯತ್ತು ಬಯಲು..!

0
314

ಇಸ್ಲಮಾಬಾದ್​: ಭಾರತ ಹೊಡೆದುರುಳಿಸಿದ್ದ ಪಾಕಿಸ್ತಾನದ ಎಫ್‌-16 ಯುದ್ಧವಿಮಾನದ ಅವಶೇಷ ಪತ್ತೆಯಾಗಿದೆ. ಪಾಕಿಸ್ತಾನದ ಅಧಿಕಾರಿಗಳೇ ಅವಶೇಷಗಳ ಪರಿಶೀಲನೆ ನಡೆಸಿದ್ದಾರೆ. ಪಾಕ್‌ ಗಡಿಯಲ್ಲಿ ಬಿದ್ದಿದ್ದ ಯುದ್ಧ ವಿಮಾನದ ಅವಶೇಷ ಪತ್ತೆಯಾಗಿದ್ದು, ಪಾಕ್​ನ 7 ನಾರ್ಥರ್ನ್​ ಇನ್​ಫ್ಯಾಂಟ್ರಿ ಕಮಾಂಡಿಂಗ್​ ಅಧಿಕಾರಿ ಭೇಟಿ ನೀಡಿದ್ದಾರೆ. ವಿಮಾನದ ಅವಶೇಷದ ವಿಚಾರವನ್ನು ಹಿಡಿದು ಪಾಕ್ ತನ್ನ ಬಗ್ಗೆ ಕೊಚ್ಚಿಕೊಂಡಿರುವುದು ಸುಳ್ಳೆಂಬುದು ಸಾಬೀತಾಗಿದೆ.

ವಿಮಾನದ ಅವಶೇಷಗಳ ವಿಚಾರದಲ್ಲೂ ಬೊಗಳೆ ಬಿಟ್ಟಿರುವ ಪಾಕಿಸ್ತಾನ ಅವಶೇಷದ ಚಿತ್ರಗಳನ್ನು ತೋರಿಸಿ ಭಾರತದ ಮಿಗ್​ 21 ಯುದ್ಧ ವಿಮಾನದ ಅವಶೇಷಗಳು ಎಂದು ವೈರಲ್ ಮಾಡಲಾಗಿತ್ತು. ಪಾಕಿಸ್ತಾನದ ಮಾಧ್ಯಮ ಮತ್ತು ಸೋಷಿಯಲ್​ ಮೀಡಿಯಾಗಳು ಈ ಬಗ್ಗೆ ಸುದ್ದಿ ಪ್ರಸಾರ ಮಾಡಿದ್ದವು. ಆಸರೆ ಈಗ ವಿಮಾನ ಅವಶೇಷಗಳ ಹಿಂದಿನ ಅಸಲಿಯತ್ತು ಬಯಲಾಗಿದೆ.

ಭಾರತದ ಗಡಿದಾಟಲು ಹವಣಿಸುತ್ತಿದ್ದ ಪಾಕಿಸ್ತಾನದ ಎಫ್‌-16 ಯುದ್ಧವಿಮಾನ ಧ್ವಂಸವಾಗಿತ್ತು. ಇದನ್ನು ಭಾರತದ ಸುಖೋಯ್​​ ಯುದ್ಧವಿಮಾನ ಧ್ವಂಸ ಮಾಡಿತ್ತು. ಯುದ್ಧವಿಮಾನ ಬಳಿ ಪಾಕ್ ಅಧಿಕಾರಿಗಳಿರುವ ಚಿತ್ರವೂ ಲಭ್ಯವಾಗಿದ್ದು, ಎಫ್​-16 ಯುದ್ಧ ವಿಮಾನದ ಅವಶೇಷಗಳು ಎನ್ನುವುದು ಕನ್​ಫರ್ಮ್ ಆಗಿದೆ.

LEAVE A REPLY

Please enter your comment!
Please enter your name here