ದೇಶಪ್ರೇಮ ಮೆರೆದಿದ್ದಕ್ಕೂ ಆಕ್ಷೇಪ ವ್ಯಕ್ತಪಡಿಸಿದ ‘ಪಾಪಿ’ಸ್ತಾನ..!

0
211

ದೆಹಲಿ: ಭಾರತೀಯ ಸೇನಾ ಕ್ಯಾಪ್ ಧರಿಸಿ ಕ್ರಿಕೆಟ್ ಆಡಿದ್ದಕ್ಕೆ ಪಾಕ್‌ ಕ್ರಿಕೆಟ್ ಬೋರ್ಡ್‌ ಆಕ್ಷೇಪ ವ್ಯಕ್ತಪಡಿಸಿದೆ. ವಿರಾಟ್ ಕೊಹ್ಲಿ ಕ್ರಿಕೆಟ್‌ ಅವರನ್ನು ರಾಜಕಾರಣಕ್ಕೆ ಬಳಸಿಕೊಳ್ತಿದ್ದಾರೆ ಎಂದ ಪಿಸಿಬಿ, ಬಿಸಿಸಿಐ ವಿರುದ್ಧ ಕ್ರಮ ತೆಗೆದುಕೊಳ್ಳಿ ಅಂತಾ ಐಸಿಸಿಗೆ ಮನವಿ ಮಾಡಿದೆ.

“ಭಾರತೀಯ ಆಟಗಾರರು ತಮ್ಮ ಸಮವಸ್ತ್ರದ ಕ್ಯಾಪ್ ಬದಲಿಗೆ ಸೇನಾ ಕ್ಯಾಪ್ ಧರಿಸಿದ್ದರು. ಇದನ್ನು ಇಡೀ ವಿಶ್ವವೇ ನೋಡಿದೆ. ಆದರೆ, ಐಸಿಸಿ ಅದನ್ನು ಗಮನಿಸಲಿಲ್ಲವೇ? ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈ ವಿಷಯದ ಕುರಿತು ಪ್ರಸ್ತಾಪಿಸಬೇಕಾಯಿತೇ?” ಅಂತ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೊಹಮದ್ ಖುರೇಷಿ ಪ್ರಶ್ನಿಸಿದ್ದಾರೆ.

ರಾಂಚಿಯಲ್ಲಿ ನಡೆದ ಪಂದ್ಯದಲ್ಲಿ ಜಮ್ಮು ಕಾಶ್ಮಿರದ ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸುವ ಸಲುವಾಗಿ ವಿಶೇಷವಾಗಿ ಸಿದ್ಧಪಡಿಸಿದ ಆರ್ಮಿ ಕ್ಯಾಪ್‌‌ನೊಂದಿಗೆ ಟೀಮ್​ಇಂಡಿಯಾ ಕಣಕ್ಕಿಳಿದಿತ್ತು. ಟೀಮ್​ಇಂಡಿಯಾ ಆಟಗಾರರು ಪಂದ್ಯದ ಸಂಭಾವನೆಯನ್ನೂ ಇಂಡಿಯನ್​ ಡಿಫೆನ್ಸ್​​ ಫಂಡ್​ಗೆ ದೇಣಿಗೆಯಾಗಿ ನೀಡುವ ಮಹತ್ವದ ತಿರ್ಮಾನ ಕೈಗೊಂಡಿದ್ದರು. ಪಂದ್ಯಕ್ಕೂ ಮೊದಲು ಭಾರತೀಯ ಸೇನೆಯಲ್ಲಿ ಲೆಫ್ಟಿನಂಟ್ ಕರ್ನಲ್ ಗೌರವಾರ್ಥ ಹುದ್ದೆಯನ್ನು ಹೊಂದಿರುವ ಎಮ್​ಎಸ್​ ಧೋನಿ ಆಟಗಾರರಿಗೆ ಬಿಸಿಸಿಐ ಸಿದ್ಧಪಡಿಸಿದ ವಿಶೇಷ ಆರ್ಮಿ ಕ್ಯಾಪ್ ಹಂಚಿದ್ದರು.

LEAVE A REPLY

Please enter your comment!
Please enter your name here