Home ಕ್ರೀಡೆ P.Cricket ಮಾಜಿ ಚಾಂಪಿಯನ್​ಗಳ ಕದನದಲ್ಲಿ ಗೆಲುವು ಯಾರಿಗೆ?

ಮಾಜಿ ಚಾಂಪಿಯನ್​ಗಳ ಕದನದಲ್ಲಿ ಗೆಲುವು ಯಾರಿಗೆ?

ಇಂದು ವರ್ಲ್ಡ್ ಕಪ್ ಹಬ್ಬದ ಎರಡನೇ ದಿನ. ವೆಸ್ಟ್​ ಇಂಡೀಸ್ ಮತ್ತು ಪಾಕಿಸ್ತಾನ್ ಮುಖಾಮುಖಿಯಾಗಲಿವೆ. ಒಂದು ಕಾಲದಲ್ಲಿ ಕ್ರಿಕೆಟ್​ ಜಗತ್ತನ್ನು ಆಳಿದ್ದ ವೆಸ್ಟ್ ಇಂಡೀಸ್ ಮತ್ತೆ ತನ್ನ ಹಳೆಯ ವೈಭವನ್ನು ನೆನಪಿಸುವ ದಿಕ್ಕಿನಲ್ಲಿ ಹೆಜ್ಜೆ ಇಡುತ್ತಿದೆ. ಹಂತ ಹಂತವಾಗಿ ವೆಸ್ಟ್ ಇಂಡೀಸ್​ ಸೂಪರ್ ಕಮ್ ಬ್ಯಾಕ್ ಆಗುತ್ತಿದೆ. ವಿಶ್ವ ಕ್ರಿಕೆಟ್​ನ ದಿಗ್ಗಜ ತಂಡಗಳನ್ನು ಮಣಿಸಿ ಪ್ರಶಸ್ತಿಗೆ ಮುತ್ತಿಕ್ಕಬಲ್ಲ ತಾಕತ್ತು ವಿಂಡೀಸ್​ಗಿದೆ.
ಅಂತೆಯೇ ಪಾಕಿಸ್ತಾನ ಕೂಡ ವಿಶ್ವ ಕ್ರಿಕೆಟ್​ನಲ್ಲಿ ತನ್ನದೇಯಾದ ಛಾಪು ಮೂಡಿಸಿರೋ ಟೀಮ್. 12ನೇ ವಿಶ್ವಸಮರದ 2ನೇ ಪಂದ್ಯದಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗುತ್ತಿವೆ. ವೆಸ್ಟ್ ಇಂಡೀಸ್​ ಮತ್ತು ಪಾಕಿಸ್ತಾನ್ ನಡುವಿನ ಪಂದ್ಯಕ್ಕೆ ನಾಟಿಂಗ್ಯಾಮ್​ನ ಟ್ರೆಂಟ್​ ಬ್ರಿಡ್ಜ್​ ಸ್ಟೇಡಿಯಂ ಸನ್ನದ್ಧವಾಗಿದೆ.
ಸರ್ಫರಾಜ್ ಅಹ್ಮದ್ ನಾಯಕತ್ವದ ಪಾಕಿಸ್ತಾನ ಅಪ್ಘಾನಿಸ್ತಾನ ವಿರುದ್ಧದ ಮೊದಲ ಅಭ್ಯಾಸ ಪಂದ್ಯದಲ್ಲಿ 3 ವಿಕೆಟ್​ ಗಳಿಂದ ಸೋತು ನಿರಾಸೆ ಅನುಭವಿಸಿತ್ತು. ಎರಡನೇ ಬಾಂಗ್ಲ ವಿರುದ್ಧದ ಎರಡನೇ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.
ಜೇಸನ್ ಹೋಲ್ಡರ್​ ನಾಯಕತ್ವದ ವೆಸ್ಟ್​ಇಂಡೀಸ್​ ತನ್ನ ಮೊದಲ ಪ್ರಾಕ್ಟಿಸ್​ ಮ್ಯಾಚ್​ನಲ್ಲಿ ಸೌತ್​ ಆಫ್ರಿಕಾವನ್ನು ಎದುರಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಸೌತ್ ಆಫ್ರಿಕಾ 95 ರನ್​ ಗಳಿಸಿದ್ದಾಗ ವರುಣ ಆಟಕ್ಕೆ ಅಡ್ಡಿಪಡಿಸಿದ. ಬಳಿಕ ಪಂದ್ಯ ನಡೆಯಲೇ ಇಲ್ಲ. ಎರಡನೇ ಪ್ರಾಕ್ಟಿಸ್​ ಮ್ಯಾಚ್​ನಲ್ಲಿ ವಿಂಡೀಸ್​ ನ್ಯೂಜಿಲೆಂಡ್​ ಅನ್ನು ಎದುರಿಸಿತು. ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್​ 421ರನ್​ಗಳ ಬೃಹತ್ ಮೊತ್ತವನ್ನು ಪೇರಿಸಿತು. ನ್ಯೂಜಿಲೆಂಡ್​ 330ರನ್​ಗಳಿಸಲಷ್ಟೇ ಸಾದ್ಯವಾಗಿದ್ದರಿಂದ ವೆಸ್ಟ್ ಇಂಡೀಸ್​ 90ರನ್​ ಗಳ ಭರ್ಜರಿ ಜಯ ದಾಖಲಿಸಿ. ವರ್ಲ್ಡ್​​ಕಪ್ ಪಂದ್ಯಾವಳಿಗಳಿಗೆ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿತು.
ಒಂದು ಕಡೆಯಿಂದ ಅಭ್ಯಾಸ ಪಂದ್ಯದಲ್ಲಿ ಸೋಲು ಪಾಕಿಸ್ತಾನದ ಆತ್ಮ ಬಲವನ್ನು ಕುಗ್ಗಿಸಿದ್ದರೆ, ಇನ್ನೊಂದುಕಡೆ ವೆಸ್ಟ್ಇಂಡೀಸ್​ ವಿರುದ್ಧ ಕೂಡ ಪಾಕ್​ನಿಂದ ಹೇಳಿಕೊಳ್ಳುವಂತ ಪ್ರದರ್ಶನ ಕಂಡು ಬಂದಿಲ್ಲ.
ವಿಶ್ವಕಪ್ ಇತಿಹಾಸದಲ್ಲಿ ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನ ಇದುವರೆಗೆ 10 ಬಾರಿ ಮುಖಾಮುಖಿಯಾಗಿವೆ. ಈ 10 ರಲ್ಲಿ 7 ಬಾರಿ ವೆಸ್ಟ್ ಇಂಡೀಸ್ ಗೆದ್ದಿದ್ದು, 3 ಬಾರಿ ಮಾತ್ರ ಪಾಕ್ ಜಯಿಸಿದೆ.
ಇನ್ನು ವಿಶ್ವಕಪ್ ಇತಿಹಾಸವನ್ನು ನೋಡಿದ್ರೆ, ವೆಸ್ಟ್ ಇಂಡೀಸ್​ ಎರಡು ಬಾರಿ ಹಾಗೂ ಪಾಕಿಸ್ತಾನ ಒಮ್ಮೆ ಚಾಂಪಿಯನ್ ಆಗಿದೆ. ವಿಶ್ವಕಪ್​ನ ಆರಂಭಿಕ ಎರಡು ಟೂರ್ನಿಗಳಲ್ಲಿ, ಅಂದ್ರೆ 1975 ಮತ್ತು 1979ರಲ್ಲಿ ವೆಸ್ಟ್​ ಇಂಡೀಸ್​ ಚಾಂಪಿಯ ಆಗಿ ಹೊರಹೊಮ್ಮಿತ್ತು. ಮೂರನೇ ಟೂರ್ನಿಯಲ್ಲಿ ಅಂದರೆ 1983ರಲ್ಲಿ ರನ್ನರ್​ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಆ ವರ್ಷ ಕಪಿಲ್ ದೇವ್​ ನೇತೃತ್ವದ ಭಾರತ ಪ್ರಶಸ್ತಿಗೆ ಮುತ್ತಿಕ್ಕಿತ್ತು.
ಪಾಕಿಸ್ತಾನ 1992ರಲ್ಲಿ ಚಾಂಪಿಯನ್ ಆಗಿತ್ತು. ಬಳಿಕ 1999ರಲ್ಲಿ ರನ್ನರ್ ಅಪ್ ಸ್ಥಾನ ಪಡೆದಿತ್ತು, ಅಷ್ಟು ಹೊರತು ಪಡಿಸಿದರೆ ಪಾಕ್​ನಿಂದ ಅಂಥಾ ಹೇಳಿಕೊಳ್ಳುವಂತಹ ಪ್ರದರ್ಶನ ಕಂಡು ಬಂದಿಲ್ಲ.
ಈ ಬಾರಿಯ ತಂಡಗಳ ಬಲಾ-ಬಲ ನೋಡುವುದಾದರೆ ಪಾಕಿಸ್ತಾನಕ್ಕೆ ನಾಯಕ ಸರ್ಫರಾಜ್ ಅಹ್ಮದ್, ಬಿ. ಅಜಮ್, ಎಫ್. ಜಮಾನ್, ಇಮ್ರಾನ್ ಉಲ್​-ಹಕ್ ಪ್ರಮುಖ ಬ್ಯಾಟಿಂಗ್ ಶಕ್ತಿಗಳಾಗಿದ್ದಾರೆ. ಮೊಹಮ್ಮದ್​ ಹಫೀಜ್ ಆಲ್​ರೌಂಡರ್ ಆಗಿ ತಂಡಕ್ಕೆ ನೆರವಾಗ ಬಲ್ಲರು. ಎಸ್​.ಅಫ್ರೀದಿ. ಹಸನ್ ಅಲಿ, ಅಮಿರ್​ ಬೌಲಿಂಗ್ ವಿಭಾಗದ ಅಸ್ತ್ರಗಳು.
ಇನ್ನು ವೆಸ್ಟ್ ಇಂಡೀಸ್​ಗೆ ಕ್ರಿಸ್​ ಗೇಲ್, ವಿಕೆಟ್​ ಕೀಪರ್ ಶೇಯ್ ಹೋಪ್, ಲಿವಿಸ್, ರಸೆಲ್​​ ಬ್ಯಾಟಿಂಗ್ ವಿಭಾಗದಲ್ಲಿ ಬಲ ತುಂಬುತ್ತಾರೆ. ಜೊತೆಗೆ ಬ್ರಾಥ್​​ವೈಟ್, ಬ್ರಾವೋ ಆಲ್​ ರೌಂಡರ್ ಗಳಾಗಿ ತಂಡಕ್ಕೆ ಎಂಥಾ ಸಂದರ್ಭದಲ್ಲೂ ನೆರವಾಗಬಲ್ಲರು. ಕೀಮರ್ ರೋಚ್​. ಒಶಾನೆ ಥೋಮಸ್​​, ಶಲ್ಡನ್ ಕಟ್ರೆಲ್ ಬೌಲಿಂಗ್ ವಿಭಾಗದ ಶಕ್ತಿಗಳಾಗಿದ್ದಾರೆ.

ತಂಡಗಳು
ವೆಸ್ಟ್​ ಇಂಡೀಸ್ : ಜೇಸನ್ ಹೋಲ್ಡರ್ (ನಾಯಕ) , ಶಿಮ್ರೋನ್ ಹೆಟ್ಮೇರ್ ,ಶಾಹ್ ಹೋಪ್ , ಡ್ಯಾರೆನ್ ಬ್ರಾವೋ, ಎವಿನ್ ಲೆವಿಸ್, ಫಾಬಿನ್ ಅಲೆನ್, ಕಾರ್ಲೊಸ್ ಬ್ರಾಥ್​​ವೈಟ್, ಕ್ರಿಸ್ ಗೇಲ್, ಆಂಡ್ರೋ ರಸೆಲ್, ನಿಕೋಲಸ್ ಪೂರನ್, ಒಶಾನೆ ಥೋಮಸ್ , ಕೀಮರ್ ರೋಚ್ , ಶನ್ನೂನ್ ಗ್ಯಾಬ್ರಿಯಲ್, ಶೆಲ್ಡನ್ ಕಟ್ರೆಲ್, ಆಶ್ಲೆ ನರ್ಸ್​

ಪಾಕಿಸ್ತಾನ : ಸರ್ಫರಾಜ್ ಅಹ್ಮದ್ (ನಾಯಕ), ಫಕರ್ ಜಮಾನ್, ಇಮಾಮ್ ಉಲ್ ಹಖ್, ಅಬಿದ್ ಅಲಿ , ಬಾಬರ್ ಅಜಾಮ್, ಶೋಯೆಬ್ ಮಲ್ಲಿಕ್ , ಮೊಹಮ್ಮದ್ ಹಫೀಜ್, ಹ್ಯಾರಿಸ್ ಸೊಹೈಲ್, ಶಬಾದ್ ಖಾನ್, ಇಮಾದ್ ವಾಸಿಮ್, ಫಹಿಮ್ ಅಶ್ರಫ್​, ಹಸನ್ ಅಲಿ, ಶಹೀನ್ ಶಾ ಆಫ್ರೀದಿ, ಜುನೈದ್ ಖಾನ್, ಮೊಹಮ್ಮದ್ ಹಸ್​​ನೈನ್

LEAVE A REPLY

Please enter your comment!
Please enter your name here

- Advertisment -

Most Popular

ದೇಶದಲ್ಲಿ  24 ಗಂಟೆಗಳಲ್ಲಿ 48,648 ಕೊರೋನಾ ಕೇಸ್ ಪತ್ತೆ!

ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 48,648 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 80,88,851ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ...

 ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯ ಕಿಡ್ನಾಪ್​!

ಕೊಪ್ಪಳ : ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯನನ್ನು ಕಿಡ್ನಾಪ್ ಮಾಡಲಾಗಿದೆ. ಕಿಡ್ನಾಪ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನವೆಂಬರ್ 2 ರಂದು ನಗರಸಭೆ ಚುನಾವಣೆ ನಡೆಯಲಿದ್ದು, ಗಂಗಾವತಿ ನಗರಸಭೆ ಕಾಂಗ್ರೆಸ್ ಸದಸ್ಯ...

ಅಲಹಬಾದ್​ ಹೈಕೋರ್ಟ್ ನಿಗಾದಲ್ಲಿ ಹತ್ರಾಸ್​ ಗ್ಯಾಂಗ್ ರೇಪ್​ ಕೇಸ್ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ : ಉತ್ತರ ಪ್ರದೇಶ ಹತ್ರಾಸ್​​​​ ಗ್ಯಾಂಗ್​ ರೇಪ್​​ ಪ್ರಕರಣದ ತನಿಖೆ ಅಲಹಬಾದ್​ ಹೈಕೋರ್ಟ್​ ನಿಗಾದಲ್ಲಿ ನಡೆಯಬೇಕೆಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಸದ್ಯ ಸಿಬಿಐ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ತನಿಖಾ ತಂಡದಲ್ಲಿರುವ ಅಧಿಕಾರಿಗಳನ್ನು ರಾಜ್ಯದಿಂದ...

ಡಿ.ಬಾಸ್​​ಗಾಗಿ ಕನ್ನಡ ಕಲಿತ ಜಗಮಪತಿ ಬಾಬು..!

ಸಾಲ್ಟ್ ಅಂಡ್ ಪೆಪ್ಪರ್ ಲುಕ್​ನಲ್ಲಿ ಸೌತ್​ನಲ್ಲಿ ಸಂಚಲನ ಸೃಷ್ಠಿಸಿರೋ ಜಗಪತಿ ಬಾಬು, ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. ಅದೂ ಡಿ ಬಾಸ್ ದರ್ಶನ್​ಗಾಗಿ ಅನ್ನೋದು ವಿಶೇಷ. ಇಷ್ಟಕ್ಕೂ ಮೋಸ್ಡ್ ಡಿಮ್ಯಾಂಡಿಂಗ್ ಜಗಪತಿ ಬಾಬು...

Recent Comments