Home ಕ್ರೀಡೆ P.Cricket 308 ರನ್​ ಮಾಡಿ ಬಾಂಗ್ಲಾವನ್ನು 0ಗೆ ಆಲ್​​ಔಟ್​ ಮಾಡಿದ್ರೆ ಮಾತ್ರ ಪಾಕ್​ ಸೆಮಿಫೈನಲ್​ಗೆ..!

308 ರನ್​ ಮಾಡಿ ಬಾಂಗ್ಲಾವನ್ನು 0ಗೆ ಆಲ್​​ಔಟ್​ ಮಾಡಿದ್ರೆ ಮಾತ್ರ ಪಾಕ್​ ಸೆಮಿಫೈನಲ್​ಗೆ..!

ಅತಿಥೇಯ ಇಂಗ್ಲೆಂಡ್​ ನ್ಯೂಜಿಲೆಂಡ್ ವಿರುದ್ಧ ಗೆದ್ದು ಸೆಮಿಫೈನಲ್​ ಪ್ರವೇಶಿಸಿರುವುದರಿಂದ ಪಾಕಿಸ್ತಾನ ವರ್ಲ್ಡ್​ಕಪ್​ನಿಂದ ಬಹುತೇಕ ಹೊರಬಿದ್ದಿದೆ..! ಪಾಕ್​ ಇಂದು ಬಾಂಗ್ಲಾ ವಿರುದ್ಧ ತನ್ನ ಕೊನೆಯ ಲೀಗ್ ಮ್ಯಾಚನ್ನು ಆಡುತ್ತಿದೆ. ಈ ಮ್ಯಾಚ್​ನಲ್ಲಿ ಇತಿಹಾಸದಲ್ಲೇ ಕಂಡು ಕೇಳರಿಯದ ರೀತಿಯಲ್ಲಿ ಪಾಕ್ ಗೆದ್ದರೆ ಪಾಕ್ ಸೆಮಿಫೈನಲ್ ಪ್ರವೇಶಿಸುತ್ತೆ..! ಹೀಗಾದಲ್ಲಿ ಇದು ಪವಾಡವೇ ಸರಿ.
ನ್ಯೂಜಿಲೆಂಡ್​​ (+0.175) ಹಾಗೂ ಪಾಕಿಸ್ತಾನ (-0.792) ನಡುವೆ ನೆಟ್​ ರನ್​ರೇಟ್​ನಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ನ್ಯೂಜಿಲೆಂಡ್​ ಅನ್ನು ಟೂರ್ನಿಯಿಂದ ಹೊರ ಹಾಕಿ ಪಾಕ್ ಸೆಮೀಸ್​ಗೆ ಲಗ್ಗೆ ಇಡ್ಬೇಕು ಅಂದ್ರೆ ಇಂದು ಪವಾಡ ಆಗ್ಬೇಕು.
ಪಾಕ್ ಮೊದಲು ಬ್ಯಾಟ್​ ಮಾಡಿ ಕನಿಷ್ಠ 308 ರನ್​ ಮಾಡ್ಬೇಕು. ಅದಕ್ಕಿಂತ ಒಂದೇ ಒಂದು ರನ್​ ಕೂಡ ಕಮ್ಮಿ ಮಾಡಿದ್ರೂ ಸೆಮೀಸ್ ಪ್ರವೇಶ ಸಾಧ್ಯವೇ ಇಲ್ಲ. ಇನ್ನು 308ರನ್ ಮಾಡಿದ್ರೆ ಸಾಕಾಗಲ್ಲ.. ಬಳಿಕ ಬಾಂಗ್ಲಾವನ್ನು ಶೂನ್ಯಕ್ಕೆ ಆಲ್​ಔಟ್​ ಮಾಡ್ಬೇಕು. ಪಾಕ್ ಮೊದಲು ಬ್ಯಾಟಿಂಗ್​ ಮಾಡಿ 350ರನ್ ಮಾಡಿದ್ರೆ 312ರನ್​ಗಳಿಂದ, 400ರನ್ ಮಾಡಿದ್ರೆ 316ರನ್​ಗಳಿಂದ ಗೆಲ್ಲವೇಕು. ಮೊದಲು ಫೀಲ್ಡಿಂಗ್ ಸಿಕ್ಕಿದರೆ ಸೆಮೀಸ್​ ಕನಸು ಬಿಟ್ಟು ಸುಮ್ನೆ ಮ್ಯಾಚ್​ ಆಡ್ಬೇಕಷ್ಟೇ..!

LEAVE A REPLY

Please enter your comment!
Please enter your name here

- Advertisment -

Most Popular

ಡಿಕೆಶಿ ಗೂಂಡಾ ರಾಜಕಾರಣ ನಡೆಯುವುದಿಲ್ಲ : ಶೋಭಾ ಕರಂದ್ಲಾಜೆ

ಮೈಸೂರು :  ಶಿರಾ, ಆರ್ ಆರ್​ ನಗರ ವಿಧನಾಸಭಾ ಉಪ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ . ಕೆ ಶಿವಕುಮಾರ್​ ಅವರ ಗೂಂಡಾ ರಾಜಕಾರಣ  ನಡೆಯುವುದಿಲ್ಲ ಅಂತ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ...

ಕಾಡಾನೆ ದಾಳಿಗೆ ಸಕ್ರೆಬೈಲು ಬಿಡಾರದ ದೈತ್ಯ ಆನೆ `ರಂಗ’ ಸಾವು

ಶಿವಮೊಗ್ಗ :  ಕಾಡಾನೆ ದಾಳಿಯಿಂದ ಸಕ್ರೆಬೈಲು ಬಿಡಾರದ ಆನೆ ರಂಗ ಮೃತಪಟ್ಟಿದೆ. 35 ವರ್ಷದ ಆನೆ ರಂಗ ಸಕ್ರೆಬೈಲು ಬಿಡಾರದ ಪ್ರಮುಖ ಆಕರ್ಷಣೆಯಾಗಿತ್ತು. ಕಳೆದ ರಾತ್ರಿ ಬಿಡಾರಕ್ಕೆ ನುಗ್ಗಿದ ಕಾಡೆನೆಯೊಂದು ಏಕಾಏಕಿ ರಂಗನ ಮೇಲೆರಗಿದೆ....

ದೇವೇಂದ್ರ ಫಡ್ನವಿಸ್​​ಗೆ ಕೊರೋನಾ

ಮುಂಬೈ : ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ಅವರಿಗೆ ಕೊರೋನಾ ಸೋಂಕು ತಗುಲಿದೆ. ಫಡ್ನವೀಸ್ ಅವರು ಬಿಹಾರದ ಬಿಜೆಪಿ ಚುನಾವಣಾ ಪ್ರಚಾರ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಬಿಹಾರ ವಿಧಾನಸಭಾ...

ಚೆನ್ನೈ ವಿರುದ್ಧ ಹಸಿರು ಜೆರ್ಸಿಯಲ್ಲಿ ಆರ್​ ಸಿ ಬಿ ಕಣಕ್ಕೆ..! ಕಾರಣ ಏನ್ ಗೊತ್ತಾ?

  ದುಬೈ :  13 ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್​​ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಳೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣೆಸಲಿದೆ. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ...

Recent Comments