ಮಾಧ್ಯಮಗಳ ಕಾಲಿಗೆ ಬಿದ್ದ ಪಾಕ್​..!

0
333

ಇಸ್ಲಮಾಬಾದ್​ : ಟೆರರಿಸ್ತಾನ್ ಎಂಬ ಖುಖ್ಯಾತಿ ಪಡೆದಿರೋ ಪಾಕಿಸ್ತಾನದ ಪರಿಸ್ಥಿತಿ ನೋಡಿದ್ರೆ ಅಯ್ಯೋ ಪಾಪ ಅಂತ ಅನ್ಸುತ್ತೆ..! ಆದ್ರೆ, ಉಗ್ರರಿಗೆ ಎಂಜಲು ಹಾಕಿ ಸಾಕುತ್ತಿರುವ ಪಾತಕಿ ಕೃತ್ಯಕ್ಕೆ ಇನ್ನೂ ಮಾರಿಹಬ್ಬ ಆಗ್ಬೇಕು ಅಂತ ರಕ್ತ ಕುದಿಯುತ್ತೆ.
ಭಾರತ ಸೇರಿದಂತೆ ಇಡೀ ವಿಶ್ವ ಇವತ್ತು ಪಾಕಿಸ್ತಾನವನ್ನು ಉಗಿದು ಉಪ್ಪಿನಕಾಯಿ ಹಾಕುತ್ತಿದೆ. ಇದರ ಬೆನ್ನಲ್ಲೇ ಇದೀಗ ಪಾಕ್ ತನ್ನ ಪ್ರಜೆಗಳಿಂದಲೇ ಥೂ..ಛೀ ಅಂತ ಹೇಳಿಸಿಕೊಳ್ಳುತ್ತಿದೆ. ಈ ನಡುವೆ ತನ್ನ ದೇಶದ ಮಾಧ್ಯಮಗಳ ಕಾಲಿಗೆ ಬೀಳುವ ಸ್ಥಿತಿ ಪಾಕಿಸ್ತಾನದ್ದಾಗಿದೆ.
ಗಡಿನಿಯಂತ್ರಣ ರೇಖೆ ದಾಟಿ ಬಂದ ಪಾಕಿಸ್ತಾನದ ಯುದ್ಧ ವಿಮಾನ ಎಫ್​-16 ಅನ್ನು ಭಾರತದ ಮಿಗ್​-21 ಯುದ್ಧ ವಿಮಾನವು ಹೊಡೆದುರುಳಿಸಿತ್ತು. ಈ ಸುದ್ದಿ ಪಾಕ್ ಮಾಧ್ಯಮಗಳಲ್ಲೂ ಪ್ರಸಾರವಾಗಿದೆ. ಜನ ಈ ಸುದ್ದಿಯನ್ನು ನೋಡಿ, ಸರ್ಕಾರದ ವಿರುದ್ಧ ಮಾತನಾಡಿಕೊಳ್ತಾರೆ. ಇದು ನಮ್ಮ ದೌರ್ಬಲ್ಯ.. ಮಾನ-ಮರ್ಯಾದೆ ಪ್ರಶ್ನೆ ಅಂತ ಪಾಕ್ ಮಾಧ್ಯಮಗಳ ಕಾಲಿಗೆ ಬಿದ್ದು, ದಯವಿಟ್ಟು ಸುದ್ದಿ ಮಾಡ್ಬೇಡಿ ಅಂತಿದೆ. ಪಾಪಾ ಎಂಥಾ ‘ಪಾಪಿ’ಸ್ತಾನದ್ದು..! 

LEAVE A REPLY

Please enter your comment!
Please enter your name here