ಉಗ್ರರ ಕುಟುಂಬಕ್ಕೆ ಸಾಂತ್ವನ ಹೇಳಿದ ‘ಪಾಪಿ’ಸ್ತಾನ್​ ಸೇನೆ – ವಿಡಿಯೋ ವೈರಲ್

0
225

ನವದೆಹಲಿ: ಭಾರತದ ಏರ್‌ಸ್ಟ್ರೈಕ್‌ಗೆ ಮತ್ತೊಂದು ಸಾಕ್ಷಿ ಲಭಿಸಿದೆ. ಪಾಪಿ ಪಾಕ್​ನ ನಿಜಬಣ್ಣ ಬಯಲು ಮಾಡುವ ವಿಡಿಯೋ ಒಂದನ್ನು ಅಮೆರಿಕ ಮೂಲದ ಸಾಮಾಜಿಕ ಕಾರ್ಯಕರ್ತ ಸೇನ್ ಹಸ್ನಾನ್ ಸೆರಿಂಗ್ ಶೇರ್‌ ಮಾಡಿದ್ದಾರೆ.

ಗಡಿನಿಯಂತ್ರಣ ರೇಖೆಯಲ್ಲಿ ಪಾಕ್​ ಉಗ್ರ ನೆಲೆಗಳ ಮೇಲೆ ಭಾರತದ ವಾಯುಪಡೆ ದಾಳಿ ನಡೆಸಿದ ನಂತರ ಉಗ್ರರ ಕುಟುಂಬಸ್ಥರಿಗೆ ಸೇನಾಧಿಕಾರಿಗಳು ಸಾಂತ್ವನ ಹೇಳಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಪಾಕಿಸ್ತಾನಿ ಸರ್ಕಾರಕ್ಕೆ ವೈರಿಗಳ ವಿರುದ್ಧ ಹೋರಾಡಲು ನೆರವಾಗುವ ಮುಜಾಹಿದ್ದೀನ್​ಗಳಿಗೆ ಅಲ್ಲಾಹುವಿನ ಶ್ರೀರಕ್ಷೆ ಇರುತ್ತದೆ ಅಂತ ಸೈನಿಕ ಅಧಿಕಾರಿಯೊಬ್ಬರು ಹೇಳುತ್ತಿರುವುದೂ ವಿಡಿಯೋದಲ್ಲಿ ದಾಖಲಾಗಿದೆ. ಪಾಕಿಸ್ತಾನ ಖಂಡಿತವಾಗಿಯೂ ಬಾಲಾ​ಕೋಟ್​ ದಾಳಿಯ ಬಗ್ಗೆ ಮಹತ್ತರ ಸಂಗತಿಯನ್ನು ಅಡಗಿಸುತ್ತಿರುವುದು ಈ ವಿಡಿಯೋದಿಂದ ಸಾಬೀತಾಗುತ್ತದೆ ಅಂತ ಸೇನ್ ಹಸ್ನಾನ್ ಸೆರಿಂಗ್​ ಹೇಳಿದ್ದಾರೆ.

ವಿಡಿಯೋ ಶೇರ್ ಮಾಡಿರುವ ಸಾಮಾಜಿಕ ಕಾರ್ಯಕರ್ತ, ಏರ್​ ಸ್ಟ್ರೈಕ್ ನಂತರ 200 ಉಗ್ರರ ಮೃತದೇಹಗಳನ್ನು ಬಾಲಾ​ಕೋಟ್​ನಿಂದ ಖೈಬರ್ ಪಾಖ್​ಟುಂಕ್ವಾಕ್ಕೆ ಶಿಫ್ಟ್​ ಮಾಡಲಾಗಿದೆ. ಪಾಕ್ ಸೈನಿಕನೊಬ್ಬ ಮೃತ ಉಗ್ರನ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳುವ ವಿಡಿಯೋವನ್ನು ಸೇನ್ ಹಸ್ನಾನ್ ಸೆರಿಂಗ್ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

ದಾಳಿ ನಡೆದಿರುವ ಪ್ರದೇಶವನ್ನು ಪರಿಶೀಲಿಸುವುದಕ್ಕೆ ಪಾಕಿಸ್ತಾನ ಯಾವುದೇ ಅಂತಾರಾಷ್ಟ್ರೀಯ, ಸ್ಥಳೀಯ ಮಾಧ್ಯಮಗಳಿಗೆ ಅನುಮತಿ ನೀಡಿಲ್ಲ. ದಾಳಿಯಲ್ಲಿ ಅರಣ್ಯ ಪ್ರದೇಶ ಹಾಗೂ ಕೃಷಿ ಪ್ರದೇಶ ನಾಶವಾಗಿದೆ ಅಂತ ಪಾಕಿಸ್ತಾನ ಹೇಳಿದೆ.

LEAVE A REPLY

Please enter your comment!
Please enter your name here