ಕರಾಚಿ : 1993ರ ಮುಂಬೈ ಸ್ಫೋಟದ ಪ್ರಮುಖ ಆರೋಪಿ, ಭಾರತದ ಮೋಸ್ಟ್ ವಾಂಟೆಂಡ್ ಭೂಗತ ಪಾತಕಿ ಪಾಕಿಸ್ತಾನದಲ್ಲೇ ಇದ್ದಾನಂತೆ..! ಸ್ವತಃ ಇಮ್ರಾನ್ ಖಾನ್ ನೇತೃತ್ವದ ಪಾಕ್ ಸರ್ಕಾರ ಈ ವಿಚಾರವನ್ನು ಬಹಿರಂಗ ಪಡಿಸಿದೆ…!
88 ಉಗ್ರ ಸಂಘಟನೆಗಳನ್ನು ಬ್ಯಾನ್ ಮಾಡಿ ಪಾಕಿಸ್ತಾನ ಹಿಟ್ ಲಿಸ್ಟ್ನಲ್ಲಿ ಸೇರಿಸಿದೆ. ಈ ಲಿಸ್ಟ್ನಲ್ಲಿ ದಾವುದ್ ಇಬ್ರಾಹಿಂ ಹೆಸರು ಕೂಡ ಇದೆ..! ಭಯೋತ್ಪಾದಕ ನಾಯಕರಾದ ಹಫೀಜ್ ಸಯೀದ್, ಮಸೂದ್ ಅಜರ್ ಹಾಗೂ ದಾವುದ್ ಇಬ್ರಾಹಿಂ ಸೇರಿದಂತೆ 88 ಭಯೋತ್ಪಾದಕ ಸಂಘಟನೆಗಳು ಮತ್ತು ಮುಖ್ಯಸ್ಥರ ಆಸ್ತಿಗಳನ್ನು ವಶಪಡಿಸಿಕೊಳ್ಳಲು, ಬ್ಯಾಂಕ್ ಅಕೌಂಟ್ಗಳನ್ನು ಫ್ರೀಜ್ ಮಾಡುವ ಮೂಲಕ ಆರ್ಥಿಕ ನಿರ್ಬಂಧ ಹೇರಲು ಪಾಕ್ ಸರ್ಕಾರ ಆದೇಶಿಸಿದೆ.
ವೈಟ್ ಹೌಸ್, ಸೌದಿ ಮಸೀದಿ ಹತ್ತಿರ, ಕ್ಲಿಫ್ಟನ್, ಕರಾಚಿ, ಪಾಕಿಸ್ತಾನ ಅಂತ ದಾವುದ್ ಇಬ್ರಾಹಿಂ ವಿಳಾಸವನ್ನು ಉಲ್ಲೇಖಿಸಿದೆ. ದಾವುದ್ ಪಾಕಿಸ್ತಾನದಲ್ಲಿಲ್ಲ ಅಂತ ಸುಳ್ಳು ಹೇಳುತ್ತಿದ್ದ ಪಾಕ್ ಅಸಲಿಯತ್ತು ಈ ಮೂಲಕ ಬಯಲಾಗಿದೆ.